ETV Bharat / sitara

'ದೃಶ್ಯ' ನಂತರ ಮತ್ತೆ ಮಗಳನ್ನು ಕಾಪಾಡುವ ಜವಾಬ್ದಾರಿಯುತ ತಂದೆಯಾಗಿ ಕ್ರೇಜಿಸ್ಟಾರ್​​​​!

author img

By

Published : Jul 26, 2019, 8:18 PM IST

ದಶರಥ

ಎಂ.ಎಸ್​. ರಮೇಶ್ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್​​ ಅಭಿನಯಿಸಿರುವ 'ದಶರಥ' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇನ್ನು 'ಯುದ್ಧಕಾಂಡ' ಸಿನಿಮಾ ನಂತರ ರವಿಚಂದ್ರನ್ 'ದಶರಥ' ಸಿನಿಮಾದಲ್ಲಿ ಲಾಯರ್ ಪಾತ್ರದಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಜೊತೆ ಸೋನಿಯಾ ಅಗರ್​​ವಾಲ್ ಹಾಗೂ ಅಭಿರಾಮಿ ನಟಿಸಿದ್ದಾರೆ.

ಈ ದಶರಥ ತೇತ್ರಾಯುಗದ ದಶರಥ ಅಲ್ಲ, ಆಧುನಿಕ ದಶರಥ. ವೃತ್ತಿಯಲ್ಲಿ ವಕೀಲ, ಅನೇಕ ಕೇಸ್​​​ಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿರ್ವಹಿಸಿರುತ್ತಾನೆ. ಆದರೆ ಈ ಬುದ್ಧಿವಂತನಿಗೆ ದೊಡ್ಡ ಕಂಟಕ ಎದುರಾದರೆ ಅದನ್ನು ಆತ ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಹಿರಿಯ ಸಂಭಾಷಣೆಗಾರ ಹಾಗೂ ನಿರ್ದೇಶಕ ಎಂ.ಎಸ್​. ರಮೇಶ್ 'ದಶರಥ' ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ. ಇಲ್ಲಿ ಪ್ರೀತಿಯ ಎಳೆಯಿದೆ, ತಂದೆ ಮಗಳ ಅವಿನಾಭಾವ ಸಂಬಂಧ ಇದೆ, ಕೆಲವು ಪವರ್​​ಫುಲ್​​ ಸಂಭಾಷಣೆ ಇದೆ.

ravichandran
ಕ್ರೇಜಿಸ್ಟಾರ್ ರವಿಚಂದ್ರನ್

ದಶರಥ ಪ್ರಸಾದ್ (ವಿ. ರವಿಚಂದ್ರನ್) ಮಗಳು ಶಾಂತಿ (ಮೇಘಶ್ರೀ) ದಿಟ್ಟ ಹುಡುಗಿ ಆದರೂ ಶ್ರೀಮಂತ ಹುಡುಗ ಕಿರಣ್ (ಆದರ್ಶ್) ಆಕೆಗೆ ಮೋಸ ಮಾಡಿರುತ್ತಾನೆ. ಸುಮಾರು 20 ವರ್ಷಗಳ ಹಿಂದೆ ದಶರಥನನ್ನು ಪ್ರೀತಿಸಿದ್ದ ಅಭಿರಾಮಿ ಸಹೋದರನೇ ಈ ಕಿರಣ್​. ಆದರೆ ಅದು ಒನ್ ವೇ ಪ್ರೀತಿಯಾಗಿರುತ್ತದೆ. ದಶರಥ ಪ್ರಸಾದ್ ತನ್ನ ಸಹೋದ್ಯೋಗಿ ಕೌಶಲ್ಯ (ಸೋನಿಯಾ ಅಗರ್​​ವಾಲ್​​​​​​​​​​​​​​) ಳನ್ನು ಮದುವೆ ಆಗುವುದು ಅಭಿರಾಮಿ ಕೋಪಕ್ಕೆ ಕಾರಣ ಆಗಿರುತ್ತದೆ. ತನ್ನ ಸಹೋದರನ ಮೂಲಕ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾಳೆ. ಆದರೆ ಮಗಳಿಗೆ ಮೋಸ ಆದಾಗ ಕಿರಣ್ ಮೇಲೆ ದಶರಥ ಕೇಸ್ ಹಾಕಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಹೇಗಾದರೂ ಮಾಡಿ ತಮ್ಮನನ್ನು ಈ ಕೇಸ್ ಸುಳಿಯಿಂದ ಹೊರತರಲು ಅಭಿರಾಮಿ ಖ್ಯಾತ ವಕೀಲ (ರಂಗಾಯಣ ರಘು)ನನ್ನು ನೇಮಿಸುತ್ತಾಳೆ. ಆತನ ಜೊತೆ ದಶರಥ ಹೇಗೆ ವಾದ ಮಾಡುತ್ತಾನೆ..? ಈ ಕೇಸ್ ಯಾರ ಪರ ಆಗುತ್ತದೆ..? ದಶರಥನ ಮಗಳಿಗೆ ನ್ಯಾಯ ದೊರೆಯುವುದಾ ಇಲ್ಲವಾ ಎಂಬುದು ಚಿತ್ರದ ಕಥೆ.

ಈ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ವಯಸ್ಸಿಗೆ ತಕ್ಕದಾದ ಪಾತ್ರ. ‘ದೃಶ್ಯ’ ನಂತರ ಮತ್ತೊಮ್ಮೆ ಮಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿಯುತ ತಂದೆ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಸೋನಿಯಾ ಅಗರ್​​ವಾಲ್​​​ಗೆ ಅಂತಹ ಪ್ರಾಮುಖ್ಯವಿಲ್ಲ. ಇನ್ನು ಅಭಿರಾಮಿಯದ್ದು ದಿಟ್ಟ ಪಾತ್ರ. ಮೇಘಶ್ರೀ ರವಿಚಂದ್ರನ್ ಮಗಳಾಗಿ ಚೆನ್ನಾಗಿ ನಟಿಸಿದ್ದಾರೆ. ಆದರ್ಶ್​ಗೆ ನಿಜಕ್ಕೂ ಒಳ್ಳೆಯ ಭವಿಷ್ಯವಿದೆ. ರಂಗಾಯಣ ರಘು ಮಾತೇ ಈ ಸಿನಿಮಾದಲ್ಲಿ ಅವರ ಪಾತ್ರದ ಬಂಡವಾಳ, ಹೇಮಚೌಧರಿ ನ್ಯಾಯಾಧೀಶೆ ಆಗಿ ಇಷ್ಟ ಆಗುತ್ತಾರೆ. ಇನ್ನು ನಟ ಅವಿನಾಶ್ ಬಗ್ಗೆ ಹೇಳುವ ಅವಶ್ಯಕತೆಯಿಲ್ಲ.

ಗುರುಕಿರಣ್ ಅವರ ಎರಡು ಹಾಡುಗಳು ಮತ್ತೆ ಕೇಳಬಹುದು. ಹಿರಿಯ ಛಾಯಾಗ್ರಾಹಕ ಜಿ.ಎಸ್​​​.ವಿ. ಸೀತಾರಾಂ ಕೈಚಳಕ ಎಂದಿನಂತೆ ಸುಂದರವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಆರಂಭದಲ್ಲಿ ಧ್ವನಿ ನೀಡಿದ್ದಾರೆ ಮತ್ತು ಅವರ ಕೆಲವು ಮಾತುಗಳನ್ನು ಹಾಡಿನ ರೂಪಕ್ಕೆ ತರಲಾಗಿದೆ. ಹೆಣ್ಣು ಮಕ್ಕಳಿರುವವರು ಖಂಡಿತ ಈ ಸಿನಿಮಾವನ್ನು ನೋಡಬಹುದು.

ದಶರಥ ಸಿನಿಮಾ ವಿಮರ್ಶೆ

ಶಿಕ್ಷೆ ಏನಿದ್ದರೂ ಕಾನೂನಿನ ಆಚೆ ಪರೀಕ್ಷೆ  

ಅವದಿ – 142 ನಿಮಿಷ, ಕ್ಯಾಟಗರಿ – ಫ್ಯಾಮಿಲಿ ಡ್ರಾಮಾ, ರೇಟಿಂಗ್ – 3/5

ಚಿತ್ರ – ದಶರಥ, ನಿರ್ಮಾಪಕ – ಅಕ್ಷಯ್ ಸಮರ್ಥ, ನಿರ್ದೇಶನ – ಎಂ ಎಸ್ ರಮೇಶ್, ಸಂಗೀತ – ಗುರುಕಿರಣ್, ಛಾಯಾಗ್ರಹಣ – ಜಿ ಎಸ್ ವಿ ಸೀತಾರಾಂ, ತಾರಾಗಣ – ವಿ ರವಿಚಂದ್ರನ್, ಸೋನಿಯ ಅಗರ್ವಾಲ್, ಅಭಿರಾಮಿ, ಮೇಘಶ್ರೀ, ಆದರ್ಶ್, ರಂಗಾಯಣ ರಘು, ಅವಿನಾಶ್, ಹೇಮ ಚೌಧರಿ, ತಬಲಾ ನಾಣಿ ಹಾಗೂ ಇತರರು.

ಈ ದಶರಥ ತ್ರೇತಾಯುಗದ ದಶರಥ ಅಲ್ಲ! ಆಧುನಿಕ ದಶರಥ ವೃತ್ತಿಯಲ್ಲಿ ವಕೀಲ. ಅನೇಕ ಕೇಸ್ ಬುದ್ದಿಶಕ್ತಿ ಇಂದ ನಿರ್ವಹಿಸಿರುತ್ತಾನೆ. ಆದರೆ ಅವನಿಗೆ ಒಂದು ದೊಡ್ಡ ಕಂಟಕ ಮುಂದಾದರೆ. ಈ ದಶರಥ ಏನು ಮಾಡುತ್ತಾನೆ ಎಂದು ಹಿರಿಯ ಸಂಭಾಷಣೆ ಗಾರ ಹಾಗೂ ನಿರ್ದೇಶಕ ಎಂ ಎಸ್ ರಮೇಶ್ ನಿದಾನ ಗತಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಇಲ್ಲಿ ಪ್ರೀತಿಯ ಎಳೆಯಿದೆ, ತಂದೆ ಮಗಳ ಅವಿನಾಭಾವ ಸಂಬಂದ ಇದೆ, ಕೆಲವು ಹಾರ್ಡ್ ಹಿಟ್ಟಿಂಗ್ ಸಂಭಾಷಣೆ ಇದೆ. ಆದರೆ ಚಿತ್ರದ ಹೂರಣ ಇರುವುದು ಅನ್ಯಾಯಕ್ಕೆ ನ್ಯಾಯ ಒದಗಿಸುವುದು ನ್ಯಾಯ ದೇಗುಲದಲ್ಲಿ ಸಾಧ್ಯವಿಲ್ಲ ಎಂಬುದು ಕೊನೆಗೆ ಅರಿವಾಗುವ ವಿಚಾರ.

ದಶರಥ ಪ್ರಸಾದ್ (ವಿ ರವಿಚಂದ್ರನ್) ಮನೆಯಲ್ಲಿ ಮಗಳು ಶಾಂತಿ (ಮೇಘಶ್ರೀ) ದಿಟ್ಟ ಹುಡುಗಿ ಆದರೂ ಶ್ರೀಮಂತ ಹುಡುಗನೊಬ್ಬ ಮೋಸ ಮಾಡಿರುತ್ತಾನೆ. ಅವನೇ ಕಿರಣ್ (ಆದರ್ಶ್). ದಶರಥ ಪ್ರಸಾದ್ನನ್ನು  20 ವರ್ಷಗಳ ಹಿಂದೆ ಪ್ರೇಮಿಸಿದ ಅಭಿರಾಮಿ ಸಹೋದರ. ಆಗ ಅದು ಒನ್ ಸೈಡ್ ಲವ್. ದಶರಥ ಪ್ರಸಾದ್ ತನ್ನ ಸಹದ್ಯೋಗಿ ಕೌಶಲ್ಯ (ಸೋನಿಯ ಅಗರ್ವಾಲ್) ಮದುವೆ ಆಗುವುದು ಆಗ ಅಭಿರಾಮಿ ಕ್ರೋದಕ್ಕೆ ಕಾರಣ ಆಗಿರುತ್ತದೆ.

ಈಗ ದಶರಥನ ಮಗಳೇ ಸಂಕಷ್ಟಕ್ಕೆ ಸಿಲುಕಿರುವಾಗ ಅಭಿರಾಮಿ ತನ್ನ ಸೇಡನ್ನು ಸಹೋದರನ ಮುಖಾಂತರ ತೀರಿಸಿಕೊಳ್ಳಲು ಸಂಚು ಹೂಡುತ್ತಾಳೆ. ಆದರೆ ನಿರ್ಭಯ, ನಿಷ್ಠ ವಕೀಲ ದಶರಥ ಪ್ರಸಾದ್ ತನ್ನ ಮಗಳಿಗೆ ಮೋಸ ಆಗಿದೆ ಎಂದು ಮೂರು ಕೇಸ್ ಕಿರಣ್ ಮೇಲೆ ಹಾಕುವುದು ಈಗ ಪರಿಸ್ಥಿತಿ ವಿಕೋಪಕ್ಕ ಹೋಗುತ್ತದೆ.

ದಶರಥ ಪ್ರಸಾದ್ ಕೋರ್ಟಿನಲ್ಲಿ ಕಿರಣ್ ವಿರುದ್ದ ಹಾಕುವ ದಾವೆಗಳಿಗೆ ಅಭಿರಾಮಿ ಸಹೋದರನನ್ನು ಬಚಾವ್ ಮಾಡಲು ದೊಡ್ಡ ವಕೀಲ ಪಾಟೀಲ್ (ರಂಗಾಯಣ ರಘು) ಅನ್ನು ನೇಮಿಸುತ್ತಾಳೆ. ಇತ್ತ ದಶರಥ ಪ್ರಸಾದ್ ಹಾಗೂ ಪಾಟೀಲ್ ನಡುವಿನ ವಾಗ್ವಾದ ತಾರಕಕ್ಕೆ ಹೋದಾಗ ದಶರಥ ಪ್ರಸಾದ್ ಒಂದು ದಿಟ್ಟ ನಿಲುವನ್ನು ತೆಗುದುಕೊಳ್ಳುತ್ತಾನೆ. ಅದೇ ಕಿರನನ್ನು ಷಂಡ ಎಂದು ಜರಿಯುವುದು. ಈ ಮಾತಿನಿಂದ ಪಾಟೀಲ್ ಸಹ ಕ್ರೋದನಾಗಿ ಪ್ರತಿವಾದಿಗೆ ಹಾಗೆ ಹೇಳೊದಲ್ಲ ಅದನ್ನು ಋಜುವಾತು ಮಾಡಬೇಕು ಎಂದು ಹಠ ಹಿಡಿಯುತ್ತಾನೆ.

ತನ್ನ ಮಗಳ ರಕ್ಷಣೆಗೆ ದಶರಥ ಪ್ರಸಾದ್ ಹೇಗೆ ತಾನು ಮಾಡಿದ ಆರೋಪವನ್ನು ಪ್ರೂವ್ ಮಾಡುತ್ತಾನೆ ಎಂಬುದು ಚಿತ್ರದ ತಿರುಳು.

ವಿ ರವಿಚಂದ್ರನ್ ಅವರ ವಯಸ್ಸಿಗೆ ತಕ್ಕದಾದ ಪಾತ್ರ. ದೃಶ್ಯ ನಂತರ ಅವರಿಗೆ ಮತ್ತೊಮ್ಮೆ ಮಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಈ ಚಿತ್ರದಲ್ಲಿ. ಸೋನಿಯ ಅಗರ್ವಾಲ್ ತನ್ನನ್ನೆಯ ಪಾತ್ರ, ಅಭಿರಾಮಿ ದಿಟ್ಟ ಪಾತ್ರ ಕೊನೆಗೆ ದಶರಥನಿಗೆ ಮುಂದಿನ ಜನ್ಮದಲ್ಲಾದರೂ ನೀನು ನನಗೆ ಗಂಡನಾಗು ಎಂದು ಕಣ್ಣು ಹೊಡೆದು ಹೋಗುವ ಪಾತ್ರ. ಮೇಘಶ್ರೀ ಪಾತ್ರ ನಿರ್ವಹಣೆ ಮಗಳಾಗಿ ಚನ್ನಾಗಿ ಮಾಡಿದ್ದಾರೆ, ಆದರ್ಶ್ ಎಂಬ ಯುವಕನಿಗೆ ಭವಿಷ್ಯವಿದೆ. ರಂಗಾಯಣ ರಘು ಮಾತು ಇಲ್ಲಿ ಅವರ ಪಾತ್ರದ ಭಂಡವಾಳ, ಹೇಮ ಚೌಧರಿ ನ್ಯಾಯಾದೀಶೆ ಆಗಿ ಇಷ್ಟ ಆಗುತ್ತಾರೆ. ಅವಿನಾಶ್ ಒಂದು ಸಂದರ್ಭದಲ್ಲಿ ಬಂದು ತಮ್ಮ ಗತ್ತನ್ನು ಮೆರದಿದ್ದಾರೆ.

ಗುರುಕಿರಣ್ ಅವರ ಎರಡು ಹಾಡುಗಳು ಮತ್ತೆ ಕೇಳಬಹುದು. ಹಿರಿಯ ಛಾಯಾಗ್ರಾಹಕ ಜಿ ಎಸ್ ವಿ ಸೀತಾರಾಂ ಕೈಚಳಕ ಎಂದಿನಂತೆ ಸುಂದರವಾಗಿದೆ.

ಛಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಆರಂಭದಲ್ಲಿ ಧ್ವನಿ ನೀಡಿದ್ದಾರೆ ಮತ್ತು ಅವರ ಕೆಲವು ಮಾತುಗಳನ್ನು ಹಾಡಿನ ರೂಪಕ್ಕೆ ತರಲಾಗಿದೆ.

ಪ್ರತಿಯೊಬ್ಬರು ಹೆಣ್ಣು ಹೆತ್ತವರು ಈ ಸಿನಿಮಾವನ್ನು ನೋಡಬಹುದು ಹಾಗೆ ಹೆಣ್ಣು ಮಕ್ಕಳು ಹೆಚ್ಚು ಜೋಪಾನವಾಗಿ ಜೀವನಕ್ಕೆ ದಾರಿ ಕಾಣಬಹುದು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.