ETV Bharat / sitara

ವಿಕ್ಯಾಟ್​ ಮದುವೆ ಸಂಭ್ರಮ.. ನೂತನ ಜೋಡಿಗೆ ಅದ್ದೂರಿ ಸ್ವಾಗತ.. ಜೈಪುರ್‌ದಲ್ಲಿ ಇಂದಿನಿಂದ ವಿವಾಹ ಮಹೋತ್ಸವ ಜೋರು! - ರಾಜಸ್ತಾನದಲ್ಲಿ ವಿಕ್ಯಾಟ್​ ಮದುವೆ ಸಂಭ್ರಮ

ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ವಿಕ್ಯಾಟ್ ಕಾಲಿಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದಂಪತಿ ಬರ್ವಾರಾ ಕೋಟೆಗೆ ಬರುತ್ತಾರೆ. ಗುರುವಾರ ಮಧ್ಯಾಹ್ನ ಮತ್ತು ರಾತ್ರಿ ಊಟ ಹಾಗೂ ಪೂಲ್ಸೈಡ್ ಪಾರ್ಟಿ ಇರುತ್ತದೆ. ಈ ಜೋಡಿ ರಾಜವಾಡ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ..

vicky katrina wedding  vicky kaushal katrina kaif wedding  vicky kaushal katrina kaif wedding latest news  vicky kaushal katrina kaif sangeet ceremony  vicky katrina wedding rituals  VicKat wedding festivities  VicKat wedding  ವಿಕ್ಯಾಟ್​ ಮದುವೆ ಸಂಭ್ರಮ  ರಾಜಸ್ತಾನದಲ್ಲಿ ವಿಕ್ಯಾಟ್​ ಮದುವೆ ಸಂಭ್ರಮ  ಸಿಕ್ಸ್ ಸೆನ್ಸಸ್​ ಫೋರ್ಟ್ ಬರ್ವಾರಾದಲ್ಲಿ ವಿಕ್ಯಾಟ್​ ಮದುವೆ
ರಾಜಸ್ಥಾನಕ್ಕೆ ಬಂದ ನೂತನ ಜೋಡಿಗೆ ಅದ್ದೂರಿ ಸ್ವಾಗತ
author img

By

Published : Dec 7, 2021, 1:10 PM IST

ಜೈಪುರ (ರಾಜಸ್ಥಾನ): ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ಬಾಲಿವುಡ್​ನ ಕ್ಯೂಟ್​​ ಗರ್ಲ್​ ಕತ್ರಿನಾ ಕೈಫ್​​ ಹಾಗೂ ನಟ ವಿಕ್ಕಿ ಕೌಶಲ್​​ ರಾಜಸ್ಥಾನಕ್ಕೆ ಬಂದಿಳಿದಿದ್ದಾರೆ. ಮುಂಬೈನ ಏರ್​​ಪೋರ್ಟ್​​ನಿಂದ ಈ ಜೋಡಿ ವಿಶೇಷ ಹೆಲಿಕಾಪ್ಟರ್ ಮೂಲಕ ಸೋಮವಾರ ರಾತ್ರಿ ರಾಜಸ್ಥಾನಕ್ಕೆ ಬಂದರು.

ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್​ ಫೋರ್ಟ್ ಬರ್ವಾರಾದಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅದ್ಧೂರಿ ವಿವಾಹ ಕಾರ್ಯಕ್ರಮ ಡಿಸೆಂಬರ್​​ 9ರಂದು ನಡೆಯಲಿದೆ. ಇಂದಿನಿಂದ ವಿವಾಹ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ಸೋಮವಾರ ರಾತ್ರಿ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ಮದುವೆ ಹಾಲ್​ ತಲುಪಿದ ನೂತನ ಜೋಡಿಗೆ ಹಣೆಗೆ ಕುಂಕುಮ ಹಚ್ಚಿ, ಕೊರಳಿಗೆ ಮಾಲೆ ಹಾಕಿ, ಪಟಾಕಿ ಸಿಡಿಸಿ, ಭವ್ಯವಾಗಿ ಸ್ವಾಗತಿಸಲಾಯಿತು. ಇಂದು (ಮಂಗಳವಾರ) ರಾತ್ರಿ ನಡೆಯುವ ಸಂಗೀತ ಸಮಾರಂಭದೊಂದಿಗೆ ವಿಕ್ಕಾಟ್ ವಿವಾಹ ಮಹೋತ್ಸವಗಳು ಪ್ರಾರಂಭವಾಗಲಿವೆ.

ಸೋಮವಾರ ಮಧ್ಯಾಹ್ನದಿಂದ ಜೈಪುರ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಒಡಹುಟ್ಟಿದವರು ಮತ್ತು ಸಂಬಂಧಿಕರು, ಸ್ನೇಹಿತರು ಒಬ್ಬರ ನಂತರ ಒಬ್ಬರಂತೆ ಆಗಮಿಸಿದರು. ನಿನ್ನೆ ರಾತ್ರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಜೊತೆ ಹನ್ನೆರಡು ಅತಿಥಿಗಳು ಬಂದಿದ್ದರು.

ಅವರಿಗೆ ಬರ್ವಾರಾ ಕೋಟೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಕುಟುಂಬವನ್ನು ಬರ್ವಾರಾ ಕೋಟೆಗೆ ಕರೆದೊಯ್ಯಲು ಮೂರು ಐಷಾರಾಮಿ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 12ರವರೆಗೆ ಬರ್ವಾರಾ ಕೋಟೆಯಲ್ಲಿ ತಂಗಿರುತ್ತಾರೆ. ಮದುವೆಯ ನಂತರ ಇಬ್ಬರೂ ಚೌತ್ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ಮಂಗಳವಾರ ರಾತ್ರಿ ಸಂಗೀತ ಸಮಾರಂಭ ನಡೆಯಲಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಹಲ್ದಿ ಸಮಾರಂಭ (ಅರಿಶಿಣ ಶಾಸ್ತ್ರ) ನಡೆಯಲಿದೆ. ಅದರ ನಂತರ ಕೆಲ ಮದುವೆ ಶಾಸ್ತ್ರಗಳು, ಕಾರ್ಯಕ್ರಮಗಳು ನಡೆಯಲಿವೆ.

ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ವಿಕ್ಯಾಟ್ ಕಾಲಿಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ದಂಪತಿ ಬರ್ವಾರಾ ಕೋಟೆಗೆ ಬರುತ್ತಾರೆ. ಗುರುವಾರ ಮಧ್ಯಾಹ್ನ ಮತ್ತು ರಾತ್ರಿ ಊಟ ಹಾಗೂ ಪೂಲ್ಸೈಡ್ ಪಾರ್ಟಿ ಇರುತ್ತದೆ. ಈ ಜೋಡಿ ರಾಜವಾಡ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.