ETV Bharat / sitara

ಹರ್ನಾಜ್​ ಸಂಧುಗೆ ಭುವನ ಸುಂದರಿ ಪಟ್ಟ..ಮಾಜಿ ಯೂನಿವರ್ಸ್​ಗಳು ಹೇಳಿದ್ದೇನು ಗೊತ್ತೇ? - ಹರ್ನಾಜ್ ಅವರ ಚಿತ್ರವನ್ನು ಹಂಚಿಕೊಂಡ ಲಾರಾ ದತ್ತಾ

ವಿಶೇಷ ಎಂದರೆ ಲಾರಾ ದತ್ತ ಭುವನ ಸುಂದರಿ ಪಟ್ಟ ಅಲಂಕರಿಸಿದ ವರ್ಷ ಹುಟ್ಟಿದ ಹರ್ನಾಜ್​ 21 ವರ್ಷಗಳ ಬಳಿಕ ಈ ಪಟ್ಟ ಅಲಂಕರಿಸಿದ್ದಾರೆ. ಹಾಗಾಗಿ ಹರ್ನಾಜ್​​​ ಡೆಸ್ಟಿನೀಸ್​ ಚೈಲ್ಡ್​( ದೇವರ ಮಗು - ಅಥವಾ ವಿಧಿಯ ಮಗು) ಎಂದೇ ಬಣ್ಣಿಸಲಾಗುತ್ತಿದೆ.

ಹರ್ನಾಜ್​ ಸಂಧುಗೆ ಭುವನ ಸುಂದರಿ ಪಟ್ಟ..ಮಾಜಿ ಯೂನಿವರ್ಸ್​ಗಳು ಹೇಳಿದ್ದೇನು ಗೊತ್ತೇ?
sushmita-lara-hail-harnaaz-sandhus-miss-universe-win
author img

By

Published : Jan 7, 2022, 9:01 AM IST

Updated : Jan 7, 2022, 9:57 AM IST

ಮುಂಬೈ: 1994ರ ಭುವನ ಸುಂದರಿಯಾಗಿದ್ದ ಸುಷ್ಮಿತಾ ಸೇನ್​ ಹಾಗೂ 2000ದಲ್ಲಿ ಪಟ್ಟಕ್ಕೇರಿದ್ದ ಲಾರಾ ದತ್ತಾ ಭೂಪತಿ ಅವರು ಈ ವರ್ಷದ ಭುವನ ಸುಂದರಿ ಪಟ್ಟ ಅಲಂಕರಿಸಿದ ಹರ್ನಾಜ್​ ಸಂಧು ಅವರನ್ನ ಅಭಿನಂದಿಸಿದ್ದಾರೆ. ಈ ಬಗ್ಗೆ ಅವರು ಇನ್​​ಸ್ಟಾಗ್ರಾಂ ಪೋಸ್ಟ್​​ಗಳನ್ನು ಮಾಡಿ ತಮ್ಮ ಸಂತಸವನ್ನ ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಲಾರಾ ದತ್ತ ಭುವನ ಸುಂದರಿ ಪಟ್ಟ ಅಲಂಕರಿಸಿದ ವರ್ಷ ಹುಟ್ಟಿದ ಹರ್ನಾಜ್​ 21 ವರ್ಷಗಳ ಬಳಿಕ ಈ ಪಟ್ಟಕ್ಕೇರಿದ ಸಾಧನೆ ಮಾಡಿರೋದು ವಿಶೇಷ. ಹಾಗಾಗಿ ಹರ್ನಾಜ್​​​ ಡೆಸ್ಟಿನೀಸ್​ ಚೈಲ್ಡ್​( ದೇವರ ಮಗು) ಎಂದೇ ಬಣ್ಣಿಸಲಾಗುತ್ತಿದೆ.

ಆರ್ಯ ವೆಬ್​​ ಸಿರೀಸ್​​ಗೆ ಮತ್ತೆ ಮರಳಿರುವ ಮಾಜಿ ಸುಂದರಿ ಸುಷ್ಮಿತಾ ಸೇನ್​​​​​​​​​​, ಇನ್​​​ಸ್ಟಾಗ್ರಾಂನಲ್ಲಿ ಹರ್ನಾಜ್​​​ ಅವರ ಎರಡು ಫೋಟೋ ಪೋಸ್ಟ್​ ಮಾಡಿ ಅಡಿ ಬರಹವನ್ನು ಬರೆದಿದ್ದಾರೆ. ಹರ್ನಾಜ್​ ಕೌರ್​​ ಸಂದು ನಿಮ್ಮ ಬಗ್ಗೆ ಹೆಮ್ಮೆ ಇದೆ.. ಕಂಗ್ರಾಜುಲೇಷನ್​​ ಎಂದು ಬರೆದುಕೊಂಡಿದ್ದಾರೆ.. (#yehbaat 'Har Hindustani Ki Naz'' Harnaaz Kaur Sandhu #MissUniverse2021 #INDIAAAAAA Soooooo proud of you!!!! Congratulations @harnaazsandhu_03. )

ಮತ್ತೊಂದು ಪೋಸ್ಟ್​​ನಲ್ಲಿ 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಂದು ಕಿರೀಟ್​ ತಂದುಕೊಟ್ಟಿದ್ದಕ್ಕೆ ಧನ್ಯವಾದ.. ಮತ್ತೆ ಭಾರತವನ್ನು ಪ್ರತಿನಿಧಿಸಿದ್ದಕ್ಕೆ ಹಾಗೂ ಸುಂದರವಾದ ಕಿರೀಟವನ್ನ ಧಸಿದ್ದಕ್ಕೆ ಶಹಬ್ಬಾಸ್​​ ಎಂದಿದ್ದಾರೆ. ಅಷ್ಟೇ ಅಲ್ಲ ಈ ಅದ್ಭುತ ಜಾಗತಿಕ ವೇದಿಕೆ ಕಲಿಯಲು ಮತ್ತು ಪ್ರತಿ ಕ್ಷಣವನ್ನ ನೀವು ಆನಂದಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ನಿಮ್ಮದೇ ರಾಜ್ಯಭಾರ ಎಂದಿದ್ದಾರೆ.

ದತ್ತಾ ಪ್ರಶಂಸೆ

ಲಾರಾ ದತ್ತಾ ಕೂಡ ಹರ್ನಾಜ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ. "ನನ್ನ ಪ್ರೀತಿಯ @harnaazsandhu_03, ನಾನು ನಿನ್ನೆ ನಿಮ್ಮೊಂದಿಗೆ ಮಾತನಾಡುವಾಗ, ನೀವು ನನಗೆ 'ಅದು ಯೋಗ್ಯವಾಗಿರುತ್ತದೆ' ಎಂದು ಭರವಸೆ ನೀಡಿದ್ದೀರಿ !! ನಿಮ್ಮ ಎಲ್ಲಾ ವಿಜಯೋತ್ಸವದ ವೈಭವಕ್ಕೆ ನೀವು ಅತ್ಯಂತ ಯೋಗ್ಯರು.. ನೀವು ನಿಮ್ಮ ಬಗ್ಗೆ ಇಟ್ಟಿರುವ ಅಚಲವಾದ ನಂಬಿಕೆ ಇತ್ತು ಮತ್ತು ನೀವು ಇದಕ್ಕಾಗಿಯೇ ಹುಟ್ಟಿದ್ದೀರಿ ಎಂಬುದನ್ನು ಇದು ತೋರಿಸುತ್ತಿದೆ.. ನಾನು ವಿಶ್ವ ಸುಂದರಿ ಗೆದ್ದ ವರ್ಷದಲ್ಲಿ ನೀವು ಹುಟ್ಟಿದ್ದೀರಿ!!! ಎಂದು ಬರೆದುಕೊಂಡು ಸಂತಸ ಹೊರ ಹಾಕಿದ್ದಾರೆ.

ಅಷ್ಟೇ ಅಲ್ಲ ನೀವು ಭಾರತಕ್ಕಾಗಿ ಮತ್ತೊಮ್ಮೆ ಆ ಕಿರೀಟವನ್ನು ಎತ್ತುವ ಸಮಯಕ್ಕಾಗಿ ಕಾಯುತ್ತಿದ್ದೆವು !! ಬಹುಶಃ, ಅದು ಈಡೇರಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮ ಪೋಷಕರು ಮತ್ತು ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ತಮ್ಮ ಹರ್ಷವನ್ನು ಲಾರಾ ದತ್ತಾ ಹೊರ ಹಾಕಿದ್ದಾರೆ.

ಹರ್ನಾಜ್ ಭುವನ ಸುಂದರಿಯ 70 ನೇ ಆವೃತ್ತಿಯನ್ನು ಗೆಲ್ಲುವುದರೊಂದಿಗೆ, ಭಾರತವು ಈಗ ಬಿಗ್ ಫೋರ್ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲಿ 10 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ ಎಂಬುದು ವಿಶೇಷ.

ಇದನ್ನೂ ಓದಿ: 'ಚಕ್ಡಾ ಎಕ್ಸ್​ಪ್ರೆಸ್': ಬಣ್ಣದ ಲೋಕಕ್ಕೆ ಬೌಲರ್‌ ಆಗಿ ಬಂದ ಅನುಷ್ಕಾ ಶರ್ಮಾ

Last Updated : Jan 7, 2022, 9:57 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.