ಮುಂಬೈ(ಮಹಾರಾಷ್ಟ್ರ) : ನಿರ್ದೇಶಕ ಪ.ರಂಜಿತ್ ಅವರ ಬಿರ್ಸಾ ಸಿನಿಮಾವನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಪ. ರಂಜಿತ್ ಸಾಕಷ್ಟು ಉತ್ಸುಕರಾಗಿದ್ದಾರೆ. ಸಿನಿಮಾ ಯಶಸ್ಸಿನ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಬಿರ್ಸಾ ಮುಂಡಾ ಬ್ರಿಟಿಷರ ವಿರುದ್ಧ ದಂಗೆ ಎದ್ದು, ಆದಿವಾಸಿಗಳನ್ನು ಸಂಘಟಿಸಿ ಸೈನ್ಯ ಕಟ್ಟಿದ ನಾಯಕ. ದಂಗೆ ವೇಳೆ ಸಾವಿರಾರು ಆದಿವಾಸಿಗಳು ಮಡಿದರು ಮತ್ತು ಬಿರ್ಸಾ ಅವರನ್ನು ಜೈಲಿಗೆ ಕಳುಹಿಸಲಾಯಿತು. ಕೊನೆಗೆ ಬಿರ್ಸಾ ಜೈಲಿನಲ್ಲೇ ಕೊನೆಯುಸಿರೆಳೆಯುವಂತಾಯಿತು.
ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಬಿರ್ಸಾ ಅವರ ಜೀವನ ಚರಿತ್ರಯೆನ್ನು ತಮಿಳು ನಿರ್ದೇಶಕ ಪ.ರಂಜಿತ್ ತೆರೆ ಮೇಲೆ ತರಲಿದ್ದು, ಈ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. ಈ ಬಗ್ಗೆ ಇಂದು ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನಮಃ ಪಿಕ್ಚರ್ಸ್ ಬ್ಯಾನರ್ನಡಿ ಶರೀನ್ ಮಂತ್ರಿ ಮತ್ತು ಕಿಶೋರ್ ಅರೋರಾ ನಿರ್ಮಾಣದ, ಪ. ರಂಜಿತ್ ನಿರ್ದೇಶಿಸಲಿರುವ ಈ ಚಿತ್ರವು 19ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿದ ಜಾರ್ಖಂಡ್‌ನ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜೀವನಚರಿತ್ರೆಯಾಗಿದೆ.
ಬಿರ್ಸಾ ಮುಂಡಾ ಅವರ ಜೀವನದ ಬಗ್ಗೆ ಮತ್ತಷ್ಟು ತಿಳಿಯಲು ಚಿತ್ರ ತಂಡವು ಜಾರ್ಖಂಡ್ ಮತ್ತು ಬಂಗಾಳಕ್ಕೆ ವ್ಯಾಪಕವಾಗಿ ಪ್ರವಾಸ ಮಾಡಿದೆ. ಸ್ಕ್ರಿಪ್ಟ್‌ಗೆ ಅಂತಿಮ ಸ್ಪರ್ಶವನ್ನು ನೀಡುತ್ತಿದೆ. ಚಿತ್ರವನ್ನು ಈವರೆಗೆ ನೋಡದಂತಹ ಸ್ಥಳಗಳಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ತೆಲುಗು ಸಿನಿಮಾ ಮಧ್ಯೆ ಹೊಸ ಸಿನಿಮಾದ ಸುಳಿವು ನೀಡಿದ ದುನಿಯಾ ವಿಜಯ್
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ 'ಕಬಾಲಿ', 'ಕಾಲ'ದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಪ. ರಂಜಿತ್ ಈ ಸಿನಿಮಾಗೆ ಸಾಕಷ್ಟು ಒತ್ತು ನೀಡಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟಿಂಗ್ ಸೇರಿ ಎಲ್ಲಾ ಕೆಲಸಗಳನ್ನು ಸಾಕಷ್ಟು ಉನ್ನತ ಮಟ್ಟದಲ್ಲಿ ಮಾಡಲಾಗುತ್ತಿದೆ. ಜೊತೆಗೆ ಸಮಯ ತೆಗೆದುಕೊಂಡಿದ್ದೇವೆ. ಈವರೆಗೆ ತಾಳ್ಮೆಯಿಂದ ಕಾದ ನಿರ್ಮಾಪಕರಿಗೆ ನನ್ನ ಕೃತಜ್ಞತೆಗಳು ಎಂದು ತಿಳಿಸಿದ್ದಾರೆ.