ETV Bharat / sitara

2023ರ ಜನವರಿ 26ರಂದು ಬಿಡುಗಡೆಯಾಗಲಿದೆ 'ಫೈಟರ್' - ನಟಿ ದೀಪಿಕಾ ಪಡುಕೋಣೆ

ಸಿದ್ದಾರ್ಥ್ ಆನಂದ್ ನಿರ್ದೇಶನದ ಖ್ಯಾತ​ ನಟ ಹೃತಿಕ್ ರೋಷನ್ ಮತ್ತು ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ ನಟಿಸಿರುವ 'ಫೈಟರ್' ಸಿನಿಮಾ 2023ರ ಜನವರಿ 26ರಂದು ಬಿಡುಗಡೆಯಾಗಲಿದೆ

Fighter
'ಫೈಟರ್'
author img

By

Published : Aug 14, 2021, 1:15 PM IST

ಮುಂಬೈ: ಬಾಲಿವುಡ್ ಖ್ಯಾತ​ ನಟ ಹೃತಿಕ್ ರೋಷನ್ ಮತ್ತು ಬಹು ಬೇಡಿಕೆ ನಟಿ ದೀಪಿಕಾ ಪಡುಕೋಣೆ ನಟಿಸಿರುವ 'ಫೈಟರ್' ಸಿನಿಮಾ 2023ರ ಜನವರಿ 26ರಂದು ಬಿಡುಗಡೆಯಾಗಲಿದೆಯೆಂದು ವಯೋಕಾಮ್​​-18 ಸ್ಟುಡಿಯೋಸ್ ಶುಕ್ರವಾರದಂದು​​​ ತಿಳಿಸಿದೆ.

ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಲನಚಿತ್ರವನ್ನು ಈ ಮೊದಲು 2022 ರ ಸೆಪ್ಟೆಂಬರ್​ನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಇದೀಗ 2023ರ ಜನವರಿ 26ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯನ್ನು ಈ 'ಫೈಟರ್' ಸಿನಿಮಾದಲ್ಲಿ ಪ್ರದರ್ಶಿಸಲಾಗುವುದು. Viacom-18 ಸ್ಟುಡಿಯೋಸ್​ನ COO ಅಜಿತ್ ಅಂಧಾರೆ, ಚಿತ್ರದ ಬಿಡುಗಡೆ ದಿನಾಂಕವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 2023ರ ಗಣರಾಜ್ಯೋತ್ಸವ ದಿನದಂದು ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆಯ 'ಫೈಟರ್' ಸಿನಿಮಾ ವೀಕ್ಷಿಸಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಖ್ಯಾತ ಹಾಸ್ಯ ನಟ ಜಾನಿ ಲಿವರ್​ ಜನ್ಮದಿನ

ಬ್ಯಾಂಗ್ ಬ್ಯಾಂಗ್ ಮತ್ತು ವಾರ್ ನಂತಹ ಹಿಟ್​ ಸಿನಿಮಾ ನಂತರ ನಟ ಹೃತಿಕ್ ರೋಷನ್ ಮತ್ತು ನಿರ್ದೇಶಕ ಸಿದ್ದಾರ್ಥ್ ಆನಂದ್ ಸಹಯೋಗದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಆದ್ರೆ ನಟಿ ದೀಪಿಕಾ ಪಡುಕೋಣೆ ಜೊತೆಯಲ್ಲಿನ ಮೊದಲ ಚಿತ್ರ ಇದಾಗಿದ್ದು, ಭಾರಿ ನಿರೀಕ್ಷೆಯಿದೆ.

ಇನ್ನೂ ಫೈಟರ್ ಅನ್ನು ಹೊಸ ತಂತ್ರಜ್ಞಾನ ಮತ್ತು ಚಿತ್ರೀಕರಣ ತಂತ್ರಗಳನ್ನು ಬಳಸಿ ಚಿತ್ರೀಕರಿಸಲಾಗುತ್ತಿದ್ದು, ಪ್ರಪಂಚದಾದ್ಯಂತ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರ ತಯಾರಕರು ಮೊದಲೇ ತಿಳಿಸಿದ್ದರು. ಒಟ್ಟಾರೆ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.