ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್' ಮತ್ತು 'ಡಾನ್ಸ್ ಕರ್ನಾಟಕ ಡಾನ್ಸ್' ಸ್ವಲ್ಪ ಸಮಯದ ನಂತರ ಮತ್ತೆ ಹೊಸ ಸಂಚಿಕೆಯೊಂದಿಗೆ ಮರಳಲಿವೆ. ಲಾಕ್ ಡೌನ್ ಮಧ್ಯೆ ಹೊಚ್ಚ ಹೊಸ ಸಂಚಿಕೆಗಳೊಂದಿಗೆ ವೀಕ್ಷಕರನ್ನು ರಂಜಿಸಲು ಈ ಶೋಗಳು ಸಜ್ಜಾಗಿವೆ. ರಿಯಾಲಿಟಿ ಶೋ ತಂಡಗಳು ಕ್ರಮವಾಗಿ ಹೊಸ ಸಂಚಿಕೆಗಳ ಚಿತ್ರೀಕರಣ ಮಾಡಿದ್ದು, ಮುಂಬರುವ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.

ಈ ಶೋಗಳನ್ನು ಪ್ರಸಾರ ಮಾಡುತ್ತಿರುವ ಜೀ ವಾಹಿನಿಯು ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ವೀಕ್ಷಕರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಲ್ಲೂ ಪ್ರೋಮೋಗಳು ವೈರಲ್ ಆಗಿವೆ. ಕಾಮಿಡಿ ಕಿಲಾಡಿಗಳು ಎಂಬ ಶೀರ್ಷಿಕೆಯೇ ಹೇಳುವಂತೆ ಇದೊಂದು ಕಾಮಿಡಿ ಶೋ ಆಗಿದ್ದು, ಉದಯೋನ್ಮುಖ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ಡಾನ್ಸ್ ಕರ್ನಾಟಕ ಡಾನ್ಸ್ ಶೋ ನಲ್ಲಿ ಪ್ರತಿಭಾನ್ವಿತ ನೃತ್ಯಪಟುಗಳು ನೃತ್ಯ ಪ್ರದರ್ಶಿಸುತ್ತಾರೆ.

ಈ ಶೋಗಳು ವೀಕ್ಷಕರನ್ನು ಪೂರ್ಣವಾಗಿ ರಂಜಿಸುವುದಲ್ಲದೆ, ಸ್ಪರ್ಧಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ನೀಡುತ್ತದೆ. ವಾಸ್ತವವಾಗಿ, ಶೋಗಳಲ್ಲಿ ಭಾಗವಹಿಸಿದ ಅನೇಕ ಪ್ರತಿಭಾವಂತರು ಈ ರಿಯಾಲಿಟಿ ಶೋಗಳ ಮೂಲಕ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ಹಿಂದಿನ ಸೀಸನ್ಗಳಲ್ಲಿ ಭಾಗವಹಿಸಿದವರನ್ನು ತೀರ್ಪುಗಾರರಾಗಿ ಸ್ವಾಗತಿಸಿದೆ.

ಸೀಸನ್ ಪೂರ್ತಿ ತೀರ್ಪುಗಾರರು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆದರೆ, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಕಳೆದ ಮೂರು ಸೀಸನ್ ನಿಂದ ಉತ್ತಮ ಸ್ಪರ್ಧಿಗಳನ್ನು ಸ್ವಾಗತಿಸಿದೆ. ಈ ಕಾಮಿಡಿ ಶೋ ಭಾಗವಹಿಸುವವರಿಗೆ ತಮ್ಮ ನಟನಾ ಕನಸುಗಳನ್ನು ನನಸು ಮಾಡಿಕೊಳ್ಳಲು ಒಂದು ವೇದಿಕೆಯನ್ನು ಸೃಷ್ಟಿಸಿದೆ.
