ಡಾ. ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವರಾಜ್ಕುಮಾರ್ 2020 ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಆಗಿನಿಂದಲೂ ಹರಿದಾಡುತ್ತಿದೆ. ಅದ್ದೂರಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡಲುಈಗಾಗಲೇ ಸಕಲ ಸಿದ್ಧತೆ ಮಾಡುತ್ತಿರುವ ರಾಘಣ್ಣನ ಮಗ, ತನ್ನ ಚಿಕ್ಕಪ್ಪನ ಹಾದಿಯಲ್ಲಿ ಸಾಗುವ ಸೂಚನೆ ಕೊಟ್ಟಿದಾರೆ.
- " class="align-text-top noRightClick twitterSection" data="">
ಯುವ ರಾಜ್ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾದಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಲೋಹಿತ್ ಎಂಬ ಹೆಸರನ್ನು ಬದಲಿಸಿಕೊಂಡ ಪುನೀತ್ ರಾಜ್ಕುಮಾರ್ , ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾಗಿ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟರು. ಇದೀಗ ಗುರುರಾಜ್ ಎಂಬ ಹೆಸರನ್ನು ಯುವರಾಜ್ ಎಂದು ಬದಲಿಸಿಕೊಂಡು ಮೈಸೂರಿನ ಶ್ರೀದೇವಿ ಅವರನ್ನು ವಿವಾಹವಾದ ಅಣ್ಣಾವ್ರ ಮೊಮ್ಮಗ ಚಿತ್ರರಂಗಕ್ಕೆ ಬರಲು ಎಲ್ಲಾ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಯುವರಾಜ್ ಈಗಾಗಲೇ ಜಿಮ್ನಲ್ಲಿ ದೇಹ ದಂಡಿಸುತ್ತಿದ್ದು, ಭರ್ಜರಿ ಸ್ಟಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಯುವರಾಜ್ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಯುವರಾಜ್ ತಮ್ಮ ಸಿನಿಮಾವನ್ನು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.