ETV Bharat / sitara

ನಟ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ: ಯುವಕನ ಬಂಧನ - ನಟ ವಿಜಯ್

ಕಾಲಿವುಡ್​​ ನಟ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ (bomb threat to the residence of actor Vijay) ಹಾಕಿದ ಆರೋಪದ ಮೇಲೆ 27 ವರ್ಷದ ಯುವಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

actor Vijay
ನಟ ವಿಜಯ್‌
author img

By

Published : Nov 17, 2021, 12:44 PM IST

ಚೆನ್ನೈ/ತಮಿಳುನಾಡು: ನಟ ವಿಜಯ್ ನಿವಾಸಕ್ಕೆ ಬಾಂಬ್‌ ಬೆದರಿಕೆ (bomb threat to the residence of actor Vijay) ಹಾಕಿದ್ದ 27 ವರ್ಷದ ಯುವಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಮುಂಜಾನೆ, ನಟ ವಿಜಯ್ (actor Vijay) ಅವರ ನಿವಾಸದಲ್ಲಿ ಬಾಂಬ್ ಇರಿಸಿರುವ ಕುರಿತು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯ ಮಾಸ್ಟರ್ ಕಂಟ್ರೋಲ್ ರೂಂಗೆ( master control room) ಕರೆ ಮಾಡಲಾಗಿತ್ತು.

ಪೊಲೀಸ್ ಪ್ರಧಾನ ಕಚೇರಿಯು ತಕ್ಷಣವೇ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರ ತಂಡವನ್ನು ಸ್ನಿಫರ್ ಡಾಗ್ಸ್ ಮತ್ತು ಬಾಂಬ್ ನಿಷ್ಕ್ರಿಯ ದಳಗಳೊಂದಿಗೆ ನಗರದ ನೀಲಕರನೈನಲ್ಲಿರುವ ನಟ ವಿಜಯ್​​ ಅವರ ನಿವಾಸಕ್ಕೆ ಆಗಮಿಸಲಾಗಿತ್ತು. ಸಂಪೂರ್ಣ ಪರಿಶೀಲನೆ ನಂತರ ಈ ಬೆದರಿಕೆ ಸುಳ್ಳು ಎಂದು ಪೊಲೀಸರು ಖಚಿತಪಡಿಸಿದರು.

ವಿಜಯ್ ಅವರ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದ್ದು, ಆರೋಪಿ ಭುವನೇಶ್ವರನ್ ವಿಲ್ಲುಪುರಂ ಜಿಲ್ಲೆಯ ಮರಕ್ಕನಂನಲ್ಲಿ ನೆಲೆಸಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿ ಇದೇ ರೀತಿ ಕರೆ ಮಾಡಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಮನೆಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಛೇ ದುರ್ವಿದಿಯೇ..ಈಜಾಡಲು ಹೋಗಿ ನೀರಲ್ಲಿ ಮುಳುಗಿ ತೆಲಂಗಾಣದ 6 ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.