ETV Bharat / sitara

ಹಲವು ಸಿನಿಮಾಗಳಲ್ಲಿ ಬ್ಯುಸಿ ಆದ ನಟ ಯೋಗಿ.. - ಯೋಗಿ 25 ನೇ ಸಿನಿಮಾ ಸ್ನೇಕ್ ನಾಗ

ದುನಿಯಾ ಸಿನಿಮಾದಲ್ಲಿ ತೆರೆಮೇಲೆ ಬಂದ ಲೂಸ್​ ಮಾದ ಯೋಗಿ ಕಳೆದ 13 ವರ್ಷಗಳಲ್ಲಿ 25 ಸಿನಿಮಾಗಳಲ್ಲಿ ನಾಯಕನಾಗಿ ಸದ್ಯ ಕೈಯಲ್ಲಿ ಐದು ಸಿನಿಮಾಗಳಿದ್ದು ಫುಲ್​ ಬ್ಯುಸಿಯಾಗಿದ್ದಾರೆ.

ಹಲವು ಸಿನಿಮಾಗಳಲ್ಲಿ ಬ್ಯುಸಿ ಆದ ಯೋಗಿ
author img

By

Published : Aug 30, 2019, 10:21 AM IST

ಒಂದು ಚಿಕ್ಕ ಪಾತ್ರ ಮೂಲಕ ದುನಿಯಾ ಸಿನಿಮಾದಲ್ಲಿ ತೆರೆಮೇಲೆ ಬಂದ ಲೂಸ್​ ಮಾದ ಯೋಗಿ ಕಳೆದ 13 ವರ್ಷಗಳಲ್ಲಿ 25 ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಸದ್ಯ ಯೋಗಿ ಕೈಯಲ್ಲಿ ಐದು ಸಿನಿಮಾಗಳಿದ್ದು, ಫುಲ್​ ಬ್ಯುಸಿಯಾಗಿದ್ದಾರೆ.

ಯೋಗಿ ಸಿನಿಮಾದಲ್ಲಷ್ಟೇ ಅಲ್ಲದೇ ತಮ್ಮ ಕುಟುಂಬದಲ್ಲೂ ಬ್ಯುಸಿಯಾಗಿದ್ದಾರೆ. ಕಾರಣ, ಅವರ ಮನೆಯಲ್ಲಿ ಮಡದಿಯಾಗಿ ಸಾಹಿತ್ಯ ಬಂದದ್ದು ಅಷ್ಟೇ ಅಲ್ಲ, ಮತ್ತೊಂದು ಹೊಸ ಜೀವ ಎಂಟ್ರಿಯಾಗಿದೆ. ಯೋಗಿ ಹಾಗೂ ಸಾಹಿತ್ಯರವರಿಗೆ ಹೆಣ್ಣು ಮಗುವಾಗಿದೆ. ಆ ಮಗುವಿಗೆ ಸದ್ಯಕ್ಕೆ ‘ಸ್ವರ’ ಅಂತಾ ನಾಮಕರಣ ಮನೆಯಲ್ಲಿಯೇ ಮಾಡಲಾಗಿದೆ. ಆದರೆ, ಆ ಹೆಸರೇ ಅಂತಿಮವಲ್ಲ ಅನ್ನುವ ಯೋಗಿ ಅವರ ದೆಸೆ ಬದಲಾವಣೆ ಅಂತೂ ಆಗಿದೆ.

ಇನ್ನೂ ಯೋಗಿಯ 25 ನೇ ಸಿನಿಮಾ ಸ್ನೇಕ್ ನಾಗ ಡಬ್ಬದಲ್ಲೇ ಕುಳಿತಿದೆ. ಈಗ ಅವರು ಫ್ಯಾಮಿಲಿ ಬ್ಯಾನರ್ ಸಿನಿಮಾ ‘ಕಂಸ’ ಒಪ್ಪಿಕೊಂಡಿದ್ದಾರೆ. ಗುರು ದೇಶಪಾಂಡೆ ಹಾಗೂ ದಯಾಳ್ ಪದ್ಮನಾಭನ್ ಜಂಟಿ ನಿರ್ಮಾಣದಾದ ಚಿತ್ರ ‘9 ನೇ ದಿಕ್ಕು’ ಸದ್ಯದಲ್ಲೇ ಶುರುವಾಗಲಿದೆ. ಯೋಗಿಗೆ ನಾಯಕಿ ಅದಿತಿ ಪ್ರಭುದೇವ. ಇವರು ‘ರಂಗನಾಯಕಿ’ ನಂತರ ಮತ್ತೆ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಅಭಿನಯ ಮಾಡುತ್ತಿದ್ದಾರೆ.

ಜೊತೆಗೆ ‘ವಜ್ರಮುನಿ’ ಅನ್ನೋ ಶೀರ್ಷಿಕೆ ಯೋಗಿ ಸಿನಿಮಾಕ್ಕೆ ಪಕ್ಕಾ ಆಗಬೇಕಿದೆ. ಈಗವರು ಪರಿಮಳ ಲಾಡ್ಜ್ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅದೆಲ್ಲದರ ಜೊತೆಗೆ ನಿರ್ಮಾಪಕ, ವಿತರಕ, ಪ್ರದರ್ಶಕ ಎಂ ಎನ್ ಕುಮಾರ್​ರವರ ಹೆಸರಿಡದ ಸಿನಿಮಾಕ್ಕೆ ಯೋಗೀಶ್ ನಾಯಕ ಅಂತಾ ಪಕ್ಕ ಆಗಿದೆ. ಎಲ್ಲವನ್ನೂ ಗಮನಿಸಿದರೆ, ಮಡದಿ ಹಾಗೂ ಮಗಳ ಪ್ರಭಾವ ಯೋಗಿ ದುನಿಯಾದಲ್ಲೇ ಪ್ರಕಾಶಮಾನವಾಗಿದೆ ಎನ್ನಲು ಅಡ್ಡಿಯೇನಿಲ್ಲ.

ಯೋಗೀಶ್ ಬ್ಯುಸಿ ಆದರು

ಲೂಸ್ ಮಾದ ಯೋಗಿ ಧುನಿಯ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ನಿರ್ವಹಿಸಿ ಕಳೆದ 13 ವರ್ಷಗಳಲ್ಲಿ 25 ಸಿನಿಮಾಗಳಲಿ ನಾಯಕ ಆಗಿ ಈಗ ಕೈಯಲ್ಲಿ ಐದು ಸಿನಿಮಗಳು ಅವರಲ್ಲಿದೆ. ಇದಕ್ಕೆ ಕಾರಣ ಅವರ ಮನೆಯಲ್ಲಿ ಮಡದಿ ಆಗಿ ಸಾಹಿತ್ಯ ಬಂದದ್ದು ಅಷ್ಟೇ ಅಲ್ಲ ಮತ್ತೊಂದು ಹೊಸ ಎಂಟ್ರಿ. ಅದೇ ಯೋಗಿ ಹಾಗೂ ಸಾಹಿತ್ಯ ಹೆಣ್ಣು ಮಗು. ಆ ಮಗುವಿಗೆ ಸಧ್ಯಕ್ಕೆ ಸ್ವರ ಅಂತ ನಾಮಕರಣ ಮನೆಯಲ್ಲಿ ಮಾಡಲಾಗಿದೆ. ಆದರೆ ಆ ಹೆಸರೇ ಅಂತಿಮವಲ್ಲ ಅನ್ನುವ ಯೋಗಿ ಅವರ ದಶೆ ಬದಲಾವಣೆ ಅಂತೂ ಆಗಿದೆ.

ಯೋಗಿ ಅವರ 25 ನೇ ಸಿನಿಮಾ ಸ್ನೇಕ್ ನಾಗ ಡಬ್ಬದಲ್ಲೇ ಕುಳಿತಿದೆ. ಈಗ ಅವರು ಫ್ಯಾಮಿಲಿ ಬ್ಯಾನ್ನರ್ ಸಿನಿಮಾ ಕಂಸ ಒಪ್ಪಿಕೊಂಡಿದ್ದಾರೆ, ಗುರು ದೇಶ್ಪಾಂಡೆ ಹಾಗೂ ದಯಾಳ್ ಪದ್ಮನಾಭನ್ ಜಂಟಿ ನಿರ್ಮಾಣದಾದ ಚಿತ್ರ್ ‘9 ನೇ ದಿಕ್ಕು ಸಧ್ಯದಲ್ಲೇ ಶುರು ಆಗಲಿದೆ, ಯೋಗಿಗೆ ನಾಯಕಿ ಅದಿತಿ ಪ್ರಭೂದೇವ. ರಂಗನಾಯಕಿ ನಂತರ ಮತ್ತೆ ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಅಭಿನಯ ಮಾಡುತ್ತಿದ್ದಾರೆ.

ಜೊತೆಗೆ ವಜ್ರಮುನಿ ಅಂತ ಶೀರ್ಷಿಕೆ ಯೋಗಿ ಸಿನಿಮಾಕ್ಕೆ ಪಕ್ಕ ಆಗಬೇಕಿದೆ. ಈಗವರು ಪರಿಮಳ ಲಾಡ್ಜ್ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅದೆಲ್ಲದರ ಜೊತೆಗೆ ನಿರ್ಮಾಪಕ, ವಿತರಕ, ಪ್ರದರ್ಶಕ ಎಂ ಎನ್ ಕುಮಾರ್ ಅವರ ಹೆಸರಿಡದ ಸಿನಿಮಾಕ್ಕೆ ಯೋಗೀಶ್ ನಾಯಕ ಅಂತ ಪಕ್ಕ ಆಗಿದೆ.

ಮಡದಿ ಹಾಗೂ ಮಗಳ ಪ್ರಭಾವ ಯೋಗಿ ದುನಿಯಾದಲ್ಲೇ ಪ್ರಕಾಶಮಾನವಾಗಿದೆ ಅಂತ ಹೇಳಲು ಅಡ್ಡಿಯೇನಿಲ್ಲ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.