ಕಲಾವಿದರು ಕೊರೊನಾ ಬಗ್ಗೆ ಕಿರುಚಿತ್ರ, ಹಾಡುಗಳನ್ನು ಇಂದಿಗೂ ತಯಾರಿಸುತ್ತಿದ್ದಾರೆ. ನಟ, ಬರಹಗಾರ, ನಿರ್ದೇಶಕ, ನಿರೂಪಕ ಹಾಗೂ ಪತ್ರಕರ್ತ ಯತಿರಾಜ್ ಈ ಹಿಂದೆ ಕೊರೊನಾ ಬಗ್ಗೆ 2 ಕಿರುಚಿತ್ರಗಳನ್ನು ಮಾಡಿದ್ದರು. ಇದೀಗ ಅವರು ಮತ್ತೊಂದು ಕಿರುಚಿತ್ರಕ್ಕೆ ಕೈ ಹಾಕಿದ್ದಾರೆ.
- " class="align-text-top noRightClick twitterSection" data="">
ಯತಿರಾಜ್ ಒಳ್ಳೆಯ ಮಾತುಗಾರ. ನಿರ್ದೇಶಕ ಆಗಿ ಕೂಡಾ ಗುರುತಿಸಿಕೊಂಡಿರುವ ಯತಿರಾಜ್. 100 ಕ್ಕೂ ಹೆಚ್ಚು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ 'ಕೊರೊನಾ ಕಾಣಿಕೆ' ಎಂಬ ಕಿರುಚಿತ್ರ ಮಾಡಿದ್ದಾರೆ. 6:23 ನಿಮಿಷದ ಈ ಕಿರುಚಿತ್ರದಲ್ಲಿ ಕಲಾವಿದರು ಕೊರೊನಾದಿಂದ ಯಾವ ರೀತಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದನ್ನು ಯತಿರಾಜ್ ತೋರಿಸುವ ಪ್ರಯತ್ನ ಮಾಡಿದ್ದಾರೆ.
![Corona Kanike short movie](https://etvbharatimages.akamaized.net/etvbharat/prod-images/anjali--7-actress-of-corona-kanike1592014146814-36_1306email_1592014158_25.jpg)
ಕಿರುಚಿತ್ರದಲ್ಲಿ ಯತಿರಾಜ್ ಆಟೋ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ. 'ಪತಿ ಟ್ಯಾಕ್ಸ್ ಡ್ರೈವರ್ ಕೆಲಸ ಆರಂಭಿಸಿದ್ದನ್ನು ಸಹಿಸದ ಗೃಹಿಣಿಯೊಬ್ಬರು ಪತಿಯನ್ನು ಬಿಟ್ಟು ತವರು ಮನೆಗೆ ಹೊರಡುತ್ತಾಳೆ. ಆಟೋದಲ್ಲಿ ಹೋಗುವಾಗ ಡ್ರೈವರ್ ಯತಿರಾಜ್ ಅವರನ್ನು ನೋಡಿ ಆಶ್ಚರ್ಯ ಪಡುತ್ತಾಳೆ. ಲಾಕ್ಡೌನ್ನಲ್ಲಿ ನಟಿಸಲು ಅವಕಾಶ ಇಲ್ಲದೆ ಆಟೋ ಓಡಿಸುತ್ತಿದ್ಧೇನೆ ಎಂದು ಹೇಳುವ ಮೂಲಕ ಪತಿಯನ್ನು ಬಿಟ್ಟು ಬಂದ ಗೃಹಿಣಿ ಕಣ್ಣು ತೆರೆಸುತ್ತಾರೆ ಯತಿರಾಜ್. ತಾನು ಮಾಡಿದ ತಪ್ಪಿನ ಅರಿವಾಗಿ ಆ ಗೃಹಿಣಿ ಮತ್ತೆ ಗಂಡನನ್ನು ಸೇರುತ್ತಾಳೆ'.
ಯತಿರಾಜ್ ನಿಜಕ್ಕೂ ನೋಡುಗರ ಮನ ಮುಟ್ಟುವಂತೆ ಕಿರುಚಿತ್ರವನ್ನು ತಯಾರಿಸಿದ್ದಾರೆ. ಗೃಹಿಣಿ ಪಾತ್ರದಲ್ಲಿ ಅಂಜಲಿ ನಟಿಸಿದ್ದಾರೆ. ಈ ಕಿರುಚಿತ್ರದಲ್ಲಿ ಯತಿರಾಜ್ ತಾವು ಸುದೀಪ್, ಪುನೀತ್ ರಾಜ್ಕುಮಾರ್, ಗಣೇಶ್ ಹಾಗೂ ಇತರ ನಟರೊಂದಿಗೆ ನಟಿಸಿರುವ ಸಿನಿಮಾ ಕ್ಲಿಪ್ಪಿಂಗ್ಗಳನ್ನು ಕೂಡಾ ಜೋಡಿದ್ದಾರೆ. ಈ ಕಿರುಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಸೋನು ಸಾಗರ್ ನೆರವಾಗಿದ್ದಾರೆ.