ಯಾವಾಗಲೂ ಶೂಟಿಂಗ್, ಆಡಿಯೋ ರಿಲೀಸ್, ಪ್ರೆಸ್ಮೀಟ್, ಡಬ್ಬಿಂಗ್, ಮುಹೂರ್ತ, ವರ್ಕೌಟ್ ಎಂದು ಬ್ಯುಸಿ ಇರುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ಕೊರೊನಾ ಕಾರಣದಿಂದ ಫ್ಯಾಮಿಲಿಯೊಂದಿಗೆ ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಉಳಿದುಕೊಂಡಿರುವ ರಾಕಿಭಾಯ್ ಮಕ್ಕಳೊಂದಿಗೆ ಮಗುವಾಗಿ ಸಖತ್ ಖುಷಿಯಾಗಿದ್ದಾರೆ. ಫುಲ್ ಟೈಮ್ ಫ್ಯಾಮಿಲಿ ಮ್ಯಾನ್ ಆಗಿರುವ ಯಶ್ ಇತ್ತೀಚೆಗಷ್ಟೇ ಮಗಳು ಐರಾ ಜೊತೆ ಮಾಸ್ಕ್ ಧರಿಸಿ ಆ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಮಗನಿಗೆ ಹೊಸ ಕಾರು ಕೊಡಿಸಿರುವ ಯಶ್, ಪುತ್ರನಿಗೆ ಹಾಡು ಕೇಳಿಸುತ್ತಾ ಕಾರು ಕಲಿಸಿಕೊಡುತ್ತಿದ್ದಾರೆ. ಆಟಿಕೆ ಕಾರಿನಲ್ಲಿ ಕುಳಿತು ಟ್ವಿಂಕಲ್ ಟ್ವಿಂಕಲ್ ಹಾಡಿಗೆ ತಲೆದೂಗುತ್ತಿರುವ ಮಗನ ವಿಡಿಯೋವನ್ನು ಯಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅಭಿಮಾನಿಗಳಂತೂ ಈ ವಿಡಿಯೋವನ್ನು ಬಹಳ ಮೆಚ್ಚಿಕೊಂಡಿದ್ದಾರೆ.
![Yash shared his son video in social media](https://etvbharatimages.akamaized.net/etvbharat/prod-images/ka-bng-3-yash-son-toys-car-driving-ka10012_14072020150821_1407f_1594719501_303.jpg)