ಸಿನಿಮಾ ಹಾಗೂ ತಮ್ಮ ವೈಯಕ್ತಿಕ ಜೀವನದ ಪ್ರತಿಯೊಂದು ಸಿಹಿ ಕ್ಷಣಗಳನ್ನ ಯಶ್ ಮತ್ತು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಸದ್ಯ ಯಶ್ ಕೆಜಿಎಫ್-2 ಸಿನಿಮಾ ಶೂಟಿಂಗ್ ಮಧ್ಯೆಯೂ ತಮ್ಮ ಮುದ್ದಾದ ಮಗಳು ಐರಾ ಜತೆ ಕಾಲಕಳೆದಿದ್ದು, ಮಗಳ ಬುದ್ಧಿವಂತಿಕೆಗೆ ಬೆರಗಾಗಿದ್ದಾರೆ.
ತನ್ನ ಫೆವರೇಟ್ ಐಸ್ಕ್ರೀಂ ತಂದು ಕೊಟ್ಟ ಅಪ್ಪನಿಗೆ ಐಸ್ಕ್ರೀಂ ನೀಡದೇ ಐರಾ ಆಟವಾಡಿಸಿದ ವಿಡಿಯೋ ಎಲ್ಲರ ಗಮನಸೆಳೆದಿದೆ. ಈ ವಿಡಿಯೋದಲ್ಲಿ ಐಸ್ ಕ್ರೀಂ ತಿನ್ನುತ್ತಿರುವ ಐರಾಗೆ ಯಶ್, ನನಗೆ ಎಂದು ಕೇಳುತ್ತಾರೆ. ಇದಕ್ಕೆ ಐರಾ ಅಪ್ಪನಿಗೆ ಐಸ್ ಕ್ರೀಂ ತಿನ್ನಿಸಲು ಹೋದಂತೆ ಮಾಡಿ, ಅದನ್ನು ತಾನು ತಿನ್ನುತ್ತಾಳೆ. ಮಗಳ ತುಂಟಾಟವನ್ನು ಯಶ್ ಸಖತ್ ಎಂಜಾಯ್ ಮಾಡಿದ್ದಾರೆ.
ಅಲ್ಲದೇ ಇತ್ತ ವಿಡಿಯೋ ಮಾಡುತ್ತಿರುವ ರಾಧಿಕಾಗೆ, ಮಮ್ಮ ಎಂದು ಐಸ್ ಕ್ರೀಂ ತಿನ್ನಿಸಲು ಕರೆದು, ಅವರಿಗೂ ತಿನ್ನಸದೇ ಆಟವಾಡಿಸಿರುವ ದೃಶ್ಯ ಎಲ್ಲರ ಮನಗೆದ್ದಿದೆ.