ETV Bharat / sitara

'ಯಾರಿಗೆ ಬೇಕು ಈ ಲೋಕ'ಕ್ಕೆ ಸಿಕ್ತು ಡಾರ್ಲಿಂಗ್ ಕೃಷ್ಣನ ಅಭಯ ಹಸ್ತ - ಯವ ನಟ ಆರ್ಯವರ್ಧನ್ ಹೊಸ ಸಿನಿಮಾ

ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ ‘ಯಾರಿಗೆ ಬೇಕು ಈ ಲೋಕ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಅನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಶುಭ ಕೋರಿದರು.

Yarige Beku E Loka
Yarige Beku E Loka
author img

By

Published : Nov 19, 2021, 7:40 AM IST

ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಹಾಡುಗಳ ಕೆಲ ಪದಗಳು ಚಿತ್ರದ ಟೈಟಲ್ ಆಗೋದು ಟ್ರೆಂಡ್ ಆಗಿದೆ. ಇದೀಗ ಕ್ರೇಜಿಸ್ಟಾರ್ ಸ್ಟಾರ್ ರವಿಚಂದ್ರನ್ (Crazy Star Ravichandran) ಅಭಿನಯದ ಸೂಪರ್ ಹಿಟ್ 'ಸಿಪಾಯಿ' ಚಿತ್ರದ ಹಾಡಿನ ಲೈನ್​ವೊಂದು ಸಿನಿಮಾವಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಯಿತು.

ಯವ ನಟ ಆರ್ಯವರ್ಧನ್ (Arya Vardhan) ಅಭಿನಯದ 'ಯಾರಿಗೆ ಬೇಕು ಈ ಲೋಕ' ( Yarige Beku E Loka') ಸಿನಿಮಾದ ಫಸ್ಟ್ ಲುಕ್ ಪೋಸ್ಟರ್​ ಅನ್ನು ನಟ ಡಾರ್ಲಿಂಗ್ ಕೃಷ್ಣ (Darling Krishna) ಬಿಡುಗಡೆ ಮಾಡಿ ಶುಭ ಕೋರಿದರು. ಜೊತೆಗೆ ಚಿತ್ರದ ಫಸ್ಟ್ ಲುಕ್‌ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಚಿತ್ರತಂಡ ಅರ್ಪಿಸಿದೆ.

ಯಾರಿಗೆ ಬೇಕು ಈ ಲೋಕ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಇನ್ನು ಆರ್ಯವರ್ಧನ್​ಗೆ ನಾಯಕಿಯರಾ‌ಗಿ ಪ್ರಿಯಾಂಕ ರಿವಾರಿ, ಪಾವನಿ ಹಾಗೂ ವರ್ಷ ನಟಿಸುತ್ತಿದ್ದಾರೆ. ಹಿರಿಯ ನಟ ವಿನೋದ್ ಕುಮಾರ್, ರಚ ರವಿ, ರಾಮು (ಜ್ಯೂನಿಯರ್ ರಾಜಕುಮಾರ್), ಶೋಭನ್ ಅಕ್ಷರ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮುಂಬೈಗೆ ಮರಳಿದ ನವ ಜೋಡಿ: 'Bhabhiji' ಎಂದಾಗ ನಾಚಿ ನೀರಾದ ಪತ್ರಲೇಖಾ

ಈ ಚಿತ್ರವನ್ನು ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದು, ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಾಣ ಮಾಡುತ್ತಿದ್ದಾರೆ. ಮಹಿತ್ ನಾರಾಯಣ್ ಸಂಗೀತ ನೀಡಿದರೆ, ಶ್ರೀ ವಸಂತ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸದ್ಯಕ್ಕೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಸದ್ಯದಲ್ಲೇ 'ಯಾರಿಗೆ ಬೇಕು ಈ ಲೋಕ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿ ಚಿತ್ರತಂಡ ತೊಡಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.