ETV Bharat / sitara

ಸಿನಿಮಾದಲ್ಲೂ ಯಕ್ಷಗಾನ ಕಲೆ ಅನಾವರಣಕ್ಕೆ ಬನ್ನಂಜೆ ಸಿದ್ಧ - ಸುಗಂಧಿ ಸಿನಿಮಾ

ಚಿತ್ರರಂಗಕ್ಕೂ ಯಕ್ಷಗಾನಕ್ಕೂ ಅಷ್ಟೊಂದು ನಂಟು ಇರದಿದ್ದರೂ ಅನೇಕ ಖ್ಯಾತ ಯಕ್ಷಗಾನ ಕಲಾವಿದರು ಸಿನಿಮಾದಲ್ಲಿ ತಮ್ಮ ಅಭಿನಯ ಚತುರತೆಯನ್ನು ತೋರುತ್ತಿದ್ದಾರೆ. ಈಗ ಮತ್ತೊಬ್ಬ ಯಕ್ಷಗಾನ ಕಲಾವಿದ ಕನ್ನಡ ಸಿನಿಮಾದಲ್ಲಿ ಆ್ಯಕ್ಟ್​ ಮಾಡಿದ್ದಾರೆ.

ಯಕ್ಷಗಾನ ಕಲಾವಿದ ಬನ್ನಂಜೆ ಸಂಜೀವ ಸುವರ್ಣ
author img

By

Published : Aug 28, 2019, 11:34 AM IST

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಈಗ ಮತ್ತೊಬ್ಬ ಯಕ್ಷಗಾನ ಕಲಾವಿದ ಅಭಿನಯಿಸಿದ್ದಾರೆ. ಅವರೇ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ.

ಹೌದು ಇವರು ’ಸುಗಂಧಿ’ ಸಿನಿಮಾದಲ್ಲಿ ತಮ್ಮ ಅಭಿನಯ ಚತುರತೆ ತೋರಿಸಿದ್ದು, ಜಿ.ಮೂರ್ತಿ ಈ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಸಂಜೀವ್ ಸುವರ್ಣ, ನಿರ್ದೇಶಕ ಜಿ ಮೂರ್ತಿ ಡಾ.ಶಿವರಾಮ ಕಾರಂತರ ಬಗ್ಗೆ ಸಿನಿಮಾ ಕಥೆ ಮಾಡಿಕೊಂಡಿರುವುದೇ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಎಂದಿದ್ದಾರೆ. ಸಂಜೀವ್ ಸುವರ್ಣ ಅವರ ಯಕ್ಷಗಾನ ಪ್ರಾವಿಣ್ಯತೆ ಬಗ್ಗೆ ಪದವಿ ಪಠ್ಯ ವಿಷಯ ವಸ್ತುವಾಗಿದೆ.

‘ಸುಗಂಧಿ’ ಸಿನಿಮಾಗೆ ನರೇಂದ್ರ ಕುಮಾರ್ ಕೋಟಾ ಬಂಡವಾಳ ಹೂಡಿದ್ದಾರೆ. ಹೆಸರಾಂತ ಕೊಳಲು ವಾದಕ ಪ್ರವೀಣ್ ಗೋಡ್ಕಿಂಡಿ ಸಂಗೀತ ಒದಗಿಸಿದ್ದಾರೆ. ಸಂಜೀವ್ ರೆಡ್ಡಿ ಈ ಚಿತ್ರವನ್ನ ಸಂಕಲನ ಮಾಡಿದ್ದಾರೆ. ಸುಗಂಧಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು’ ಅರ್ಹತಾ ಪತ್ರ ನೀಡಿದೆ.

ಈ ಹಿಂದೆ 2002 ರಲ್ಲಿ ಪ್ರಖ್ಯಾತ ಯಕ್ಷಗಾನ ವಿಧ್ವಾಂಸ ಕರಮನೆ ಶಂಭು ಹೆಗ್ಡೆ, ಡಾ ವಿಷ್ಣುವರ್ಧನ್​ ಅಭಿನಯಿಸಿ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದ ಸಂಗೀತ, ನೃತ್ಯ, ಹಾಡುಗಳು ತುಂಬಿದ ಸಿನಿಮಾ ‘ಪರ್ವ’ ಸಿನಿಮಾದಲ್ಲಿ ನಟಿಸಿದ್ದರು.

ಅಂದು ಶಂಭು ಹೆಗ್ಡೆ ಇಂದು ಸಂಜೀವ್ ಸುವರ್ಣ

ಕನ್ನಡ ಚಿತ್ರ ರಂಗ ಆಗಾಗ್ಗೆ ಪ್ರಬಲ ಹಾಗೂ ಜನಪ್ರಿಯ ವ್ಯಕ್ತಿಗಳನ್ನು ಸಿನಿಮಾಕ್ಕೆ ಆಹ್ವಾನಿಸುವುದು. ಅಂದು 2002 ರಲ್ಲಿ ಪ್ರಖ್ಯಾತ ಯಕ್ಷಗಾನ ವಿಧ್ವಾಂಸ ಕರಮನೆ ಶಂಭು ಹೆಗ್ಡೆ ಅವರು ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಸಂಗೀತ, ನೃತ್ಯ, ಹಾಡುಗಳು ತುಂಬಿದ ಸಿನಿಮಾ ಪರ್ವಡಾ ವಿಷ್ಣುವರ್ಧನ ಸಿನಿಮಾಕ್ಕೆ ಆಹ್ವಾನಿಸಿದ್ದರು. ಬಲವಂತ ಇಂದ ಯಕ್ಷಗಾನ ಗುರು ಕರಮನೆ ಶಂಭು ಹೆಗ್ಡೆ ಅವರು ಒಪ್ಪಿಕೊಂಡು ಅಭಿನಯ ಮಾಡಿದ್ದರು.

ಈಗ ಮತ್ತೊಬ್ಬ ನಿಸ್ಸೀಮ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರನ್ನು ಸುಗಂಧಿಸಿನಿಮಾಕ್ಕೆ ಜಿ ಮೂರ್ತಿ ಪಾತ್ರ ಮಾಡಿಸಿದ್ದಾರೆ. ಸಂಜೀವ ಸುವರ್ಣ ಅವರು ಒಪ್ಪಲು ಮುಖ್ಯ ಕಾರಣ ಅವರ ಮೇಲೆ ತೋರಿದ ಗೌರವ ಅಷ್ಟೇ ಅಲ್ಲ ನಿರ್ದೇಶಕ ಜಿ ಮೂರ್ತಿ ಅವರು ಡಾ ಶಿವರಾಮ ಕಾರಂತ ಬಗ್ಗೆ ಸಿನಿಮಾ ಕಥೆ ಮಾಡಿಕೊಂಡಿರುವುದರಿಂದ ಸಂಜೀವ ಸುವರ್ಣ ಒಪ್ಪಿಕೊಂಡರು.

ಬನ್ನಂಜೆ ಸಂಜೀವ ಸುವರ್ಣ ಓದಿದ್ದು 3 ನೇ ತರಗತಿ ಆದರೂ 52 ದೇಶಗಳನ್ನು ಸುತ್ತಿ ಬರಲು ಕಾರಣ ಅವರಿಗೆ ಒಲಿದಿರುವ ಯಕ್ಷಗಾನ ಕಲೆಯ ಅನೇಕ ಪ್ರಾಕಾರಗಳು. ಅವರದೇ ಗುರುಕುಲದಲ್ಲಿ 60 ವಿಧ್ಯಾರ್ಥಿಗಳನ್ನು ಬಡಗುತಿಟ್ಟು ಯಕ್ಷಗಾನ ಪದ್ದತಿಯಲ್ಲಿ ತಯಾರು ಮಾಡುತ್ತಿದ್ದಾರೆ. ಅಭಿನಯ ನನಗೆ ಗೊತ್ತಿಲ್ಲ, ಕೇವಲ ಪ್ರೀತಿಗೆ ಕಟ್ಟು ಬಿದ್ದು ಈ ಸುಗಂಧಿಸಿನಿಮಾದಲ್ಲಿ ಅಭಿನಯಿಸಿದೆ ಎನ್ನುವ ಸಂಜೀವ ಸುವರ್ಣ ಅವರು ಈ ಸಿನಿಮಾದಲ್ಲೂ ಪುಟ್ಟ ಕಲಾವಿದೆ ವೈಷ್ಣವಿ ಉಡುಪಿ ಮೂಲದವರನ್ನು ತಯಾರು ಮಾಡುವ ಗುರುವಿನ ಕೆಲಸ ಸಂಜೀವ ಸುವರ್ಣ ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲೆಯವರೆ ಆದ ವಿನಯಾ ಪ್ರಕಾಷ್ ಅವರು ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ ಶಿವರಾಮ ಕಾರಂತ್. ಚಿಕ್ಕ ವಯಸ್ಸಿನಲ್ಲಿ ಕಾರಂತರನ್ನು ಕಂಡ ವಿನಯಪ್ರಕಾಶ್ ಇಂದು ಅವರ ಬಗ್ಗೆ ಸಿನಿಮಾ ಅಂದಾಗ ಬಹಳ ವಿನಮ್ರತೆಯಿಂದ ಸುಗಂಧಿಚಿತ್ರದಲ್ಲಿ ತಾಯಿ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ.

ಸಂಜೀವ್ ಸುವರ್ಣ ಕಲೆ ಪ್ರಾಭಲ್ಯತೆ ಹೇಗಿದೆ ಅಂದರೆ ಮಂಗಳೂರು ವಿಶ್ವವಿಧ್ಯಾನಿಲಯ ಇವರ ಬಗ್ಗೆ ಪಠ್ಯ ಪುಸ್ತಕ ಬಿ ಎ ಪದವಿಯಲ್ಲಿ ಸೇರಿಸಿದೆ.

ಜಿ ಮೂರ್ತಿ ಪ್ರಶಸ್ತಿ ವಿಜೇತ ನಿರ್ದೇಶಕ, ಕಲಾ ನಿರ್ದೇಶಕ ಅನೇಕ ವಿಭಿನ್ನ ರೀತಿಯ ಪ್ರಯತ್ನಗಳಿಗೆ ಹೆಸರುವಾಸಿ ಆದವರು. ಇವರ ಪ್ರಕಾರ ದಿವಂಗತ ಜ್ಞಾನಪೀಠ ಡಾ ಶಿವರಾಮ ಕಾರಂತ್ ಅಂತಹವರಿಗೆ ಸಾವೇ ಇಲ್ಲ. ಕಾರಣ ಅವರ ಕೃತಿಗಳು ಜೀವಂತವಾಗಿದೆ.

ಸುಗಂಧಿಸಿನಿಮಾ ನಿರ್ಮಾಪಕರು ನರೇಂದ್ರ ಕುಮಾರ್ ಕೋಟಾ, ಹೆಸರಾಂತ ಫ್ಲೂಟ್ ವಾದಕ ಪ್ರವೀಣ್ ಗೋಡ್ಕಿಂಡಿ ಸಂಗೀತ ಒದಗಿಸಿದ್ದಾರೆ. ಸಂಜೀವ್ ರೆಡ್ಡಿ ಈ ಚಿತ್ರವನ್ನ ಸಂಕಲನ ಮಾಡಿದ್ದಾರೆ. ಸುಗಂಧಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯುಅರ್ಹತಾ ಪತ್ರವನ್ನು ನೀಡಿದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.