ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟಿಸಿರುವ 'ಡಿಯರ್ ಕಾಮ್ರೇಡ್' ಸಿನಿಮಾ ಇದೇ 26 ರಂದು ಬಿಡುಗಡೆಯಾಗುತ್ತಿದೆ. ತೆಲುಗು ಮಾತ್ರವಲ್ಲ ಕನ್ನಡ, ತಮಿಳು ಹಾಗು ಮಲಯಾಳಂ ಭಾಷೆಗಳಲ್ಲಿ ಕೂಡಾ ಸಿನಿಮಾ ತೆರೆ ಕಾಣುತ್ತಿದೆ.
ವಿಜಯ್ ಹಾಗೂ ರಶ್ಮಿಕಾ ಇಬ್ಬರೂ ಚಿತ್ರದ ಪ್ರಮೋಷನ್ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಪ್ರೆಸ್ಮೀಟ್ಗೆ ತಡವಾಗಿ ಬಂದಿದ್ದಲ್ಲದೆ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಮಾತಿನ ನಡುವೆ ಅಸಭ್ಯ ಪದ ಬಳಸಿ ಅಲ್ಲಿದ್ದವರಿಗೆ ಇರಿಸುಮುರಿಸಾಗುವಂತೆ ಮಾಡಿದ್ದಾರೆ. 'ಗೀತಗೋವಿಂದಂ' ಚಿತ್ರದಂತೆ 'ಡಿಯರ್ ಕಾಮ್ರೇಡ್' ನಲ್ಲೂ ಕಿಸ್ಸಿಂಗ್ ದೃಶ್ಯವಿರುವುದನ್ನು ಚಿತ್ರದ ಟ್ರೇಲರ್ನಲ್ಲಿ ಕಾಣಬಹುದು. ಈ ಲಿಪ್‌ಲಾಕ್ ದೃಶ್ಯದ ಬಗ್ಗೆ ಪ್ರಶ್ನಿಸಿದಾಗ ವಿಜಯ್ ಅಸಭ್ಯ ಪದ ಬಳಸಿ ಉತ್ತರ ನೀಡಿದ್ದಾರೆ.
ವಿಜಯ್ ದೇವರಕೊಂಡ ಪ್ರಕಾರ ಲಿಪ್‌ಲಾಕ್ ಎಂಬುದು ಎಮೋಷನಲ್ ಫೀಲಿಂಗ್ ಅಂತೆ. ಬೇರೆ ದೃಶ್ಯಗಳನ್ನು ಬಿಟ್ಟು ಜನರು ಏಕೆ ಕೇವಲ ಮುತ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು. ಈ ವೇಳೆ ಅವರು ಸ್ವಲ್ಪ ಸಿಡಿಮಿಡಿಕೊಂಡಿದ್ದು ಕಂಡುಬಂತು.