ನಾಳೆ ತೆಲುಗು ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಮಗಳು ನಿಹಾರಿಕಾ ಮದುವೆ ಸಂಭ್ರಮ. ಈಗಾಗಲೇ ಮದುವೆ ಕಾರ್ಯಕ್ರಮಗಳು ಕಳೆಗಟ್ಟಿದ್ದು, ತೆಲುಗು ಸ್ಟಾರ್ ನಟರಾದ ರಾಮ್ ಚರಣ್, ಚಿರಂಜೀವಿ ಕುಟುಂಬ ಸೇರಿದಂತೆ ಅಲ್ಲು ಅರ್ಜುನ್ ಆದಿಯಾಗಿ ಉದಯ್ಪುರ್ಕ್ಕೆ ತಲುಪಿದ್ದಾರೆ.
ಹಾಗಾದ್ರೆ ನಿಹಾರಿಕಾ ಕೈ ಹಿಡಿಯುತ್ತಿರುವ ಚೈತನ್ಯ ಯಾರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡುತ್ತದೆ. 27ವರ್ಷದ ಚೈತ್ಯ ಜೊನ್ನಲಘಡ ಚಿಂರಂಜೀವಿ ಕುಟುಂಬಕ್ಕೆ ಸರಿ ಹೊಂದುವ ವರನೇ ಆಗಿರುತ್ತಾನೆ.
ಇದನ್ನೂ ನೋಡಿ : ಮಿನುಗ್ಯಾವೆ ನೋಡ... ತೆಲುಗು ತಾರೆಗಳು
ನಿಜ. ಚೈತನ್ಯ ತಂದೆ ಪ್ರಭಾಕರ್ ಆಂಧ್ರಪ್ರದೇಶದ ಪೊಲೀಸ್ ಇಲಾಖೆಯಯಲ್ಲಿ ಐಜಿಪಿಯಾಗಿದ್ದಾರೆ. ಚೈತನ್ಯ ಕೂಡ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಗಣಿತ ವಿಷಯದಲ್ಲಿ ಎಂಎಸ್‌ಸಿ ಮಾಡಿದ್ದಾರೆ.
ಇದರ ನಂತರ, ವ್ಯವಹಾರ ಶಾಸ್ತ್ರ ಹಾಗೂ ತಂತ್ರ ವಿಷಯದಲ್ಲಿ ಎಂಬಿಎ ಪದವಿ ಪಡೆದ ಚೈತನ್ಯ ಸೂರ್ಯಾ ಎಲಿಕ್ಸೈರ್ಸ್ನಲ್ಲಿ ಕೆಲಸ ಶುರು ಮಾಡಿರುತ್ತಾರೆ. ನಂತರ ಆಂಧ್ರ ಸರ್ಕಾರದ ಕೆಪಿಎಂಜಿ ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ.
ನಂತರದ ದಿನಗಳಲ್ಲಿ ಚೈತನ್ಯ ದಿ ಹರಿಕೇನ್ಸ್, ಐಎಸ್‌ಬಿ ಸಂಸ್ಥೆಗಳ ಪಾಲುದಾರರಾಗಿ, ಸಿಇಒ ಕೂಡ ಆಗಿದ್ದರು. ಅಷ್ಟೇ ಅಲ್ಲ, ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ವರದಿ ಪ್ರಕಾರ ಚೈತನ್ಯ ವಾರ್ಷಿಕ ವರಮಾನ ಬರೋಬ್ಬರಿ ₹4 ಕೋಟಿಯಂತೆ.