ETV Bharat / sitara

ಸ್ಥಗಿತವಾಗಿರುವ 'ಗ್ರಾಮಾಯಣ' ಚಿತ್ರೀಕರಣ ಮತ್ತೆ ಆರಂಭ ಯಾವಾಗ...?

ಡಾ. ರಾಜ್​​​​ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ಈ ಚಿತ್ರದ ಟೀಸರ್ ಚಿತ್ರೀಕರಣ ಮಾಡಲಾಗಿತ್ತು. ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​​​, ರಾಘವೇಂದ್ರ ರಾಜ್​​​​ಕುಮಾರ್​​​​​​, ಪುನೀತ್ ರಾಜ್​​​ಕುಮಾರ್​​​ ಆಗಮಿಸಿ ಶುಭ ಕೋರಿದ್ದರು. ಕೆಲವೊಂದು ಸನ್ನಿವೇಶಗಳನ್ನು ವರನಟ ಡಾ. ರಾಜ್​ಕುಮಾರ್ ಹುಟ್ಟಿದ ಮನೆಯಲ್ಲಿ ಕೂಡಾ ಚಿತ್ರೀಕರಿಸಲಾಗಿತ್ತು.

Gramayana
'ಗ್ರಾಮಾಯಣ'
author img

By

Published : Mar 21, 2020, 2:40 PM IST

Updated : Mar 21, 2020, 3:27 PM IST

ವಿನಯ್ ರಾಜ್​​​ಕುಮಾರ್ ಅಭಿನಯದ 'ಗ್ರಾಮಾಯಣ' ಸಿನಿಮಾ ಕಳೆದ ವರ್ಷ ಮುಹೂರ್ತ ಆಚರಿಸಿಕೊಂಡಿತ್ತು. 2018 ರಲ್ಲಿ ಸೆಪ್ಟೆಂಬರ್ 7 ರಂದು ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿತ್ತು. ಆದರೆ ಅಂದಿನಿಂದ ಆ ಸಿನಿಮಾಗೆ ಸಂಬಂಧಿಸಿದ ಯಾವುದೇ ವಿಷಯ ಇದುವರೆಗೂ ತಿಳಿದುಬಂದಿಲ್ಲ.

Gramayana movie
ನಿರ್ದೇಶಕ ದೇವನೂರು ಚಂದ್ರು

ಡಾ. ರಾಜ್​​​​ಕುಮಾರ್ ಹುಟ್ಟೂರು ಗಾಜನೂರಿನಲ್ಲಿ ಈ ಚಿತ್ರದ ಟೀಸರ್ ಚಿತ್ರೀಕರಣ ಮಾಡಲಾಗಿತ್ತು. ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಶಿವರಾಜ್​ಕುಮಾರ್​​​, ರಾಘವೇಂದ್ರ ರಾಜ್​​​​ಕುಮಾರ್​​​​​​, ಪುನೀತ್ ರಾಜ್​​​ಕುಮಾರ್​​​ ಆಗಮಿಸಿ ಶುಭ ಕೋರಿದ್ದರು. ಕೆಲವೊಂದು ಸನ್ನಿವೇಶಗಳನ್ನು ವರನಟ ಡಾ. ರಾಜ್​ಕುಮಾರ್ ಹುಟ್ಟಿದ ಮನೆಯಲ್ಲಿ ಕೂಡಾ ಚಿತ್ರೀಕರಿಸಲಾಗಿತ್ತು. ಇನ್ನು ಅಮೃತ ಅಯ್ಯರ್ ಈ ಚಿತ್ರದ ನಾಯಕಿ ಎಂದು ವಿನಯ್ ರಾಜ್​​ಕುಮಾರ್ ಹೇಳಿದ್ದರು. ಚಿತ್ರವನ್ನು ದೇವನೂರು ಚಂದ್ರು ನಿರ್ದೇಶಿಸುತ್ತಿದ್ದರು. ಆದರೆ ಕೆಲವು ದಿನಗಳ ನಂತರ ನಿರ್ದೇಶಕ ಚಂದ್ರು ಹಾಗೂ ನಿರ್ಮಾಪಕ ಎಲ್.ಎನ್​. ಮೂರ್ತಿ ನಡುವೆ ಮನಸ್ತಾಪ ಉಂಟಾಗಿ ಚಿತ್ರೀಕರಣವೇ ಸ್ಥಗಿತವಾಗಿದೆ.

Gramayana movie
ಟೀಸರ್ ಬಿಡುಗಡೆ ಕಾರ್ಯಕ್ರಮ

ಈ ಚಿತ್ರದ ಪಾತ್ರಕ್ಕಾಗಿ ವಿನಯ್ ರಾಜ್​​ಕುಮಾರ್ ಗಾಜನೂರಿನಲ್ಲಿ ಓಡಾಡಿ ಚಿತ್ರಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ತಮ್ಮ ಪಾತ್ರಕ್ಕೆ ಬೇಕಾದ ನಡೆ-ನುಡಿಯನ್ನು ಕಲಿತುಕೊಂಡಿದ್ದರು. ಅಲ್ಲದೆ, ಪಾತ್ರಕ್ಕಾಗಿ ಗಡ್ಡ ಕೂಡಾ ಬೆಳೆಸಿಕೊಂಡಿದ್ದರು. ಆದರೆ ಈಗ ಅವರು ಬಾಕ್ಸರ್ ಚಿತ್ರಕ್ಕಾಗಿ ಗಡ್ಡ ತೆಗೆದಿದ್ದಾರೆ. ಸ್ಥಗಿತ ಆಗಿರುವ 'ಗ್ರಾಮಾಯಣ' ಚಿತ್ರಕ್ಕೆ ಒಂದೂವರೆ ವರ್ಷ ಕಳೆದಿದೆ. ನಿರ್ದೇಶಕ ಹಾಗೂ ನಿರ್ಮಾಪಕರ ಮನಸ್ತಾಪ ಸರಿ ಆಗಲು ಡಾ.ರಾಜ್​​​​ಕುಮಾರ್​​ ಕುಟುಂಬ ಮುಂದಾದರೆ ಒಳ್ಳೆಯದು ಎನ್ನಲಾಗುತ್ತಿದೆ.

Last Updated : Mar 21, 2020, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.