ETV Bharat / sitara

'ಕಿರಣ್​ ರಾವ್​​​ ಇಲ್ಲದೇ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದ ಅಮೀರ್​! - ಬಾಲಿವುಡ್ ನಟ ಅಮೀರ್ ಖಾನ್​

ಲಗಾನ್ ಚಿತ್ರದ ಚಿತ್ರೀಕರಣ ವೇಳೆ ಆಪ್ತರಾಗಿ ಪ್ರೀತಿಸಿ 2005ರಲ್ಲಿ ವಿವಾಹವಾಗಿದ್ದ ಕಿರಣ್​ ರಾವ್​ ಹಾಗೂ ಅಮೀರ್ ಖಾನ್​ ಇದೀಗ ಬೇರೆ ಬೇರೆಯಾಗಿದ್ದಾರೆ.

Aamir Khan
Aamir Khan
author img

By

Published : Jul 3, 2021, 5:13 PM IST

ಹೈದರಾಬಾದ್​: ಬಾಲಿವುಡ್​​ನ ಮಿ. ಪರ್ಫೆಕ್ಷನಿಸ್ಟ್​​ ನಟ ಅಮೀರ್​ ಖಾನ್​ 15 ವರ್ಷಗಳ ನಂತರ ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಜಂಟಿಯಾಗಿ ಹೇಳಿಕೆ ನೀಡಿದ್ದು, ಇನ್ಮುಂದೆ ನಮ್ಮ ಹೊಸ ಅಧ್ಯಾಯ ಆರಂಭ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

Aamir Khan
15 ವರ್ಷಗಳ ದಾಂಪತ್ಯ ಜೀವನ

ಡಿಸೆಂಬರ್​ 2005ರಲ್ಲಿ ಕಿರಣ್​ ರಾವ್​ ಜೊತೆ ವಿವಾಹ ಮಾಡಿಕೊಂಡಿದ್ದ ಅಮೀರ್ ಖಾನ್​ ಇದೀಗ ವಿಚ್ಛೇದನ ಪಡೆದುಕೊಂಡಿದ್ದು, ಪುತ್ರನ ಪೋಷಕರಾಗಿ ಮುಂದುವರೆಯಲಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಹಿಂದಿನ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅಮೀರ್ ಖಾನ್​​ ಕಿರಣ್​ ರಾವ್​ ಇಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ನಿದರ್ಶನಗಳಿವೆ.

Aamir Khan
ಅಮೀರ್ ಖಾನ್​-ಕಿರಣ್​ ರಾವ್​

​56 ವರ್ಷದ ಬಾಲಿವುಡ್ ನಟ ಅಮೀರ್​​ ಖಾನ್​, ಹಾಗೂ 47 ವರ್ಷದ ಕಿರಣ್ ರಾವ್​ 2001ರ ಬ್ಲಾಕ್​ಬಸ್ಟರ್​ ಚಿತ್ರ 'ಲಗಾನ್​' ವೇಳೆ ಭೇಟಿಯಾಗಿದ್ದರು. ಇದಾದ ಬಳಿಕ ಡಿಸೆಂಬರ್ 2005ರಲ್ಲಿ ಮದುವೆ ಮಾಡಿಕೊಳ್ಳುತ್ತಾರೆ. 2011ರಲ್ಲಿ ಮಗ ಆಜಾದ್​​ನ ಜನ್ಮವಾಗುತ್ತದೆ.ಸುಮಾರು 15 ವರ್ಷಗಳ ಕಾಲ ಸಂತೋಷವಾಗಿ ಜೀವನ ನಡೆಸಿರುವ ಅವರು ಇದೀಗ ಪ್ರತ್ಯೇಕವಾಗಿ ಜೀವನ ನಡೆಸಲು ಮುಂದಾಗಿದ್ದಾರೆ.

Aamir Khan
ವಿಚ್ಛೇದನ ಪಡೆದ ಅಮೀರ್​-ಕಿರಣ್​ ರಾವ್​

ಇದನ್ನೂ ಓದಿರಿ: ಪ್ರಧಾನಿ ಮೋದಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ... ಕಾರಣ?

ಕಿರಣ್​ ಇಲ್ಲದೇ ನನ್ನ ಜೀವನ ಇಲ್ಲ ಎಂದಿದ್ದ ಅಮೀರ್​!

ಈ ಹಿಂದೆ ಸಂದರ್ಶನವೊಂದಲ್ಲಿ ಭಾಗಿಯಾಗಿದ್ದ ಅಮೀರ್ ಖಾನ್,​ ಪತ್ನಿ ಕಿರಣ್​ ರಾವ್​ ಇಲ್ಲದೇ ನನ್ನ ಜೀವನ ಇಲ್ಲ. ಅದನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು. ಅವಳನ್ನ ಪಡೆದುಕೊಳ್ಳಲು ನಾನು ಪುಣ್ಯ ಮಾಡಿದ್ದು, ಅದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದರು. ಆದರೆ ಇದೀಗ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.

3 ಈಡಿಯಟ್ಸ್​, ತಲಾಶ್​, ದಂಗಲ್​ ಸೇರಿದಂತೆ ಅನೇಕ ಮೆಚ್ಚುಗೆ ಚಿತ್ರದಲ್ಲಿ ನಟನೆ ಮಾಡಿರುವ ಅಮೀರ್ ಖಾನ್​, ಈ ಹಿಂದೆ ರೀನಾ ದತ್ತಾ ಜೊತೆ ಮದುವೆ ಮಾಡಿಕೊಂಡಿದ್ದರು. ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.