ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಚಿತ್ರ 'ವ್ಹೀಲ್ ಚೇರ್ ರೋಮಿಯೋ'. ಯುವ ನಟ ರಾಮ್ ಚೇತನ್, ಮಯೂರಿ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ, ಟ್ರೈಲರ್ನಿಂದಲೇ ಸೌಂಡ್ ಮಾಡುತ್ತಿದೆ.

ಇದೀಗ ವ್ಹೀಲ್ ಚೇರ್ ರೋಮಿಯೋ ಚಿತ್ರದ, 'ಕನಸಿನಲ್ಲಿ ನಾ ನಡೆವೆ' ಲಿರಿಕಲ್ ಸಾಂಗ್ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಮೂರೇ ದಿನಕ್ಕೆ 6 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ನಲ್ಲಿದೆ.
- " class="align-text-top noRightClick twitterSection" data="">
ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿರುವ, 'ಕನಸಿನಲ್ಲಿ ನಾ ನಡೆವೆ' ಎಂಬ ಸುಂದರ ಹಾಡನ್ನು ಸುಮಧುರ ಕಂಠದ ಗಾಯಕ ಸಂಚಿತ್ ಹೆಗ್ಡೆ ಸುಶ್ರಾವ್ಯವಾಗಿ ಹಾಡಿದ್ದಾರೆ. ಬಿ.ಜೆ.ಭರತ್ ಈ ಚಿತ್ರದ ಸಂಗೀತ ನಿರ್ದೇಶಕರು.

ಕಾಲು ಕಳೆದುಕೊಂಡಿರುವ ಹುಡುಗ ಹಾಗೂ ಕಣ್ಣಿಲ್ಲದಿರುವ ಹುಡುಗಿಯ ಪ್ರೇಮ ಕಥೆಯ "ವ್ಹೀಲ್ ಚೇರ್ ರೋಮಿಯೋ"ದಲ್ಲಿ ತಂದೆ-ಮಗನ ಬಾಂಧವ್ಯದ ಸನ್ನಿವೇಶಗಳು ನೋಡುಗರ ಗಮನ ಸೆಳೆಯಲಿದೆ.

ಇದನ್ನೂ ಓದಿ: ಈ ನಟ ಹೊಸ ಸಿನಿಮಾಗಳ 'ಅಕ್ಷಯ' ಪಾತ್ರೆ: 'ರಾಕ್ಷಸನ್' ರಿಮೇಕ್‌ನಲ್ಲಿ ಮಿಂಚಲು ರೆಡಿ
ವಿ.ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ, ಕಿರಣ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕಂಬಿರಾಜು ನೃತ್ಯ ನಿರ್ದೇಶನ ವ್ಹೀಲ್ ಚೇರ್ ರೋಮಿಯೋ ಚಿತ್ರಕ್ಕಿದೆ.

ಈಗಾಗಲೇ ಬೆಂಗಳೂರು, ಮುಂಬೈನಲ್ಲಿ ಚಿತ್ರೀಕರಣಗೊಂಡು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ, ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. .