ETV Bharat / sitara

ಸ್ಟಾರ್​​​ ನಾಯಕರ ಅಭಿಮಾನಿಗಳ ವಾರ್​​​​​​​​​ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಿಷ್ಟು.. - ನಟ ಉಪೇಂದ್ರ

ಸ್ಯಾಂಡಲ್​​ವುಡ್ ಸ್ಟಾರ್​​​ ನಾಯಕರ ಅಭಿಮಾನಿಗಳ ವಾರ್ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಯಾವುದಕ್ಕಾದರೂ ಮಿತಿ ಇರಬೇಕು. ಆದರೆ ಯಾವುದರ ಬಗ್ಗೆ ಕೂಡಾ ತಲೆ ಕೆಡಿಸಿಕೊಳ್ಳದಿದ್ದರೆ ಎಲ್ಲರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.

ಉಪೇಂದ್ರ
author img

By

Published : Sep 18, 2019, 11:41 PM IST

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್​ವುಡ್​​​ನಲ್ಲಿ ಕೇಳಿಬರುತ್ತಿರುವ ವಿಷಯ ಸ್ಟಾರ್​ ನಟರ ಅಭಿಮಾನಿಗಳ ನಡುವಿನ ವಾರ್. ಈ ಬೆಳವಣಿಗೆ ಬಗ್ಗೆ ರಿಯಲ್ ಸ್ಟಾರ್ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಇಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ಉಪೇಂದ್ರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸ್ಟಾರ್ ವಾರ್ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ

ಚಿತ್ರರಂಗದ ಇತ್ತೀಚಿನ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಉಪೇಂದ್ರ, 'ಸ್ಟಾರ್ ವಾರ್ ಇರಬೇಕು, ಆದರೆ ಎಲ್ಲದಕ್ಕೂ ಮಿತಿ ಇರಬೇಕು. ಇವೆಲ್ಲಾ ಸಣ್ಣಪುಟ್ಟ ಪ್ರಮಾಣದಲ್ಲಿ ಮಾತ್ರ ಇರಬೇಕು. ಅದು ಮಿತಿ ಮೀರಿದರೆ ಕಷ್ಟ. ಈ ವಿಷಯ ಇಬ್ಬರೂ ನಟರಿಗೆ ತಿಳಿದಿದೆ. ಬಣ್ಣದ ಲೋಕದಲ್ಲಿ ಇವೆಲ್ಲಾ ಸಾಮಾನ್ಯ. ಇಬ್ಬರ ನಡುವೆ ಮನಸ್ತಾಪ ತಂದಿಡಲು ಕಾಣದ ಕೈಗಳು ಪ್ರಯತ್ನಿಸುತ್ತವೆ. ಕೆಲವೊಮ್ಮೆ ಬೆಳೆಯುವವರನ್ನು ಕಂಡರೆ ಕಾಲು ಎಳೆಯುವ ಜನರು ಕೂಡಾ ಇರುತ್ತಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ಇದ್ದರೆ ಯಾರಿಗೂ ತೊಂದರೆಯಾಗುವುದಿಲ್ಲ ಎಂದು 'ಬುದ್ಧಿವಂತ' ಕಿವಿಮಾತು ಹೇಳಿದ್ದಾರೆ.

Intro:ಸ್ಟಾರ್ ವಾರ್ ಇರಬೇಕು, ಅದ್ರೆ ಸ್ವಲ್ಪ ಮಟ್ಟದಲ್ಲಿ ಮಾತ್ರ ಸ್ಟಾರ್ ವಾರ್ ಇರಬೇಕು ಎಂದು ಸ್ಯಾಂಡಲ್ ವುಡ್ ನ ಬುದ್ದಿವಂತ ಸೂಪರ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ. ಹುಟ್ಟುಹಬ್ಬದ ಸಂಭ್ರಮಾಚರಣೆಯ ನಂತರ ಅವರ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ್ಪಿ ಸ್ಟಾರ್ ಬಗ್ಗೆ ಪ್ರತಿಕ್ರಿಯೆ ನೀಡಿದರು.

Body:ಸ್ಟಾರ್ ವಾರ್ ಅನ್ನೋದು ಇರಬೇಕು, ಅದು ಸಣ್ಣಪುಟ್ಟ ಪ್ರಮಾಣದಲ್ಲಿ ಇರಬೇಕು. ಆದರೆ ಕೆಲವು ಸಲ ಅದು ಜಾಸ್ತಿ ಆಗಬಾರದು ಅಷ್ಟೇ, ಅದು ಸುದೀಪ್ ಅವರಿಗೂ ಗೊತ್ತಿದೆ ದರ್ಶನ್ ಅವರಿಗೂ ಗೊತ್ತಿದೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಅಷ್ಟೇ, ಎಂದು ಸ್ಯಾಂಡಲ್ವುಡ್ನ ಬುದ್ಧಿವಂತ ಸ್ಟಾರ್ ಗಳಿಗೆ ಬುದ್ಧಿಮಾತು ಹೇಳಿದರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.