ETV Bharat / sitara

ಸ್ಯಾಂಡಲ್​ವುಡ್​​​ನಲ್ಲಿ ವಿಚಿತ್ರ ಹೆಸರಿನ ಸಿನಿಮಾಗಳ ದರ್ಬಾರ್​...ಈ ಬಗ್ಗೆ ಏನು ಹೇಳುತ್ತೆ ಫಿಲ್ಮ್​​ ಚೇಂಬರ್​​...?

ಅದೊಂದು ಕಾಲವಿತ್ತು. ಸಿನಿಮಾ ಟೈಟಲ್ ಅಂದ್ರೆ ಅಣ್ಣಾವ್ರ ಬಂಗಾರದ ಮನುಷ್ಯ, ತಂದೆಗೆ ತಕ್ಕ ಮಗ, ದೇವತಾ ಮನುಷ್ಯ, ವಿಷ್ಣುವರ್ಧನ್ ಅವರ ಸೊಸೆ ತಂದ ಸೌಭಾಗ್ಯ, ಗಲಾಟೆ ಸಂಸಾರ, ಸೂರ್ಯವಂಶ ಹೀಗೆ ಹೇಳ್ತಾ ಹೋದ್ರೆ ನೂರಾರು ಟೈಟಲ್​​​​​​​​​​​​​​​​​​​​​​​​​​​​​ಗಳು ನೆನಪಿಗೆ ಬರುತ್ತದೆ.

author img

By

Published : Aug 2, 2019, 3:29 PM IST

ವಿಚಿತ್ರ ಹೆಸರಿನ ಸಿನಿಮಾಗಳ ದರ್ಬಾರ್

ಇತ್ತೀಚೆಗೆ ತಯಾರಾಗುತ್ತಿರುವ ಸಿನಿಮಾ ಟೈಟಲ್​​​​​ಗಳು ಇದೊಂದು ಸಿನಿಮಾ ಹೆಸರಾ ಎಂದು ಯೋಚಿಸುವ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ಮಾತನಾಡುವ ಪದಗಳೇ ಸಿನಿಮಾ ಟೈಟಲ್ ಆಗಿಹೋಗಿದೆ. ದಿನನಿತ್ಯದ ಬೈಗುಳಗಳೇ ಚಿತ್ರಗಳ ಶೀರ್ಷಿಕೆ ಆಗಿದೆ. ಅದರಲ್ಲೂ ಈಗಿನ ಸಿನಿಮಾ ನಿರ್ದೇಶಕ, ನಿರ್ಮಾಪಕರು ಟೈಟಲ್​​​ನಿಂದಲೇ ಹೆಚ್ಚು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಡಿಚ್ಕಿ ಡಿಸೈನ್, ಫುಲ್ ಟೈಟ್ ಪ್ಯಾತೆ, ಎಂಆರ್​​​​ಪಿ ಜರ್ಕ್, ಹಫ್ತಾ, ಸೈನೆಡ್ ಮಲ್ಲಿಕಾ, ಟ್ರಂಕ್, ಸವರ್ಣದೀರ್ಘ ಸಂಧಿ, ದಯವಿಟ್ಟು ಗಮನಿಸಿ, ಕನ್ನಡಕ್ಕಾಗಿ ಒಂದನ್ನು ಒತ್ತಿ, ಬಿಎಂಡಬ್ಯ್ಲೂ, ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ, ಒಂದು ಮೊಟ್ಟೆಯ ಕಥೆ, ನನ್ನ ಪ್ರಕಾರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೀಗೆ ನೂರಾರು ಚಿತ್ರಗಳ ಟೈಟಲ್​​​​ಗಳು ವಿಭಿನ್ನವಾಗಿವೆ.

kannadakkagi
ಕನ್ನಡಕ್ಕಾಗಿ ಒಂದನ್ನು ಒತ್ತಿ
dichki disign
ಡಿಚ್ಕಿ ಡಿಸೈನ್

ಸಿನಿಮಾ ಟೈಟಲ್​​​ಗಳ ಹೆಸರನ್ನು ಆಯ್ಕೆ ಮಾಡುವುದು ನಿರ್ಮಾಪಕ ಹಾಗೂ ನಿರ್ದೇಶಕರ ಸ್ವತಃ ನಿರ್ಧಾರ. ಆದರೆ ಸಿನಿಮಾಗಳ ಟೈಟಲ್ಗಳು ಫಿಲ್ಮ್ ಚೇಂಬರ್​​​​ನಲ್ಲಿ ಯಾವ ಆಧಾರದ ಮೇಲೆ ರಿಜಿಸ್ಟರ್ ಆಗಲಿದೆ ಎಂಬುದರ ಬಗ್ಗೆ ಫಿಲ್ಮ್​ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್​ ಕಾರಣ ನೀಡುತ್ತಾರೆ. ಹೊಸ ಟೈಟಲ್ ನೋಂದಣಿಗೆ ಮೊದಲು 2000 ಸಾವಿರ ರೂಪಾಯಿ ನೀಡಬೇಕು. ಒಂದು ವರ್ಷದ ಬಳಿಕ ಆ ಟೈಟಲ್​​​ಗೆ 200 ರೂಪಾಯಿ ಕೊಟ್ಟು ರಿನಿವಲ್ ಮಾಡಬೇಕು. ನಂತರ ಈ ಟೈಟಲನ್ನು ಚಿತ್ರತಂಡಕ್ಕೆ ಕೋಡಬೇಕಾ, ಬೇಡವಾ ಎಂಬುದರ ಬಗ್ಗೆ ಫಿಲ್ಮ್ ಚೇಂಬರ್, ಟೈಟಲ್ ಕಮಿಟಿಯಲ್ಲಿ ಹಿರಿಯ ನಿರ್ಮಾಪಕರು, ನಿರ್ದೇಶಕರು, ಅಧ್ಯಕ್ಷರು, ಉಪಾಧ್ಯಕ್ಷರು, ಗೌರವ ಕಾರ್ಯದರ್ಶಿ ಸೇರಿದಂತೆ ಎಲ್ಲರ ಸಮ್ಮುಖದಲ್ಲಿ ಚರ್ಚೆ ಮಾಡಲಾಗುವುದು. ಒಳ್ಳೆ ಕಥೆ, ಆಡುಭಾಷೆಯ ಟೈಟಲ್​​​​ಗಳನ್ನು ಇಟ್ಟುಕೊಂಡು ಬಂದ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿ ಬೆಲ್ ಬಾಟಂ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಯೂ ಟರ್ನ್ ಅಂತಹ ಸಿನಿಮಾಗಳು ಯಶಸ್ಸು ಕಂಡಿವೆ. ಈ ಸಿನಿಮಾಗಳಲ್ಲಿ ಟೈಟಲ್ ಮುಖ್ಯ ಆಗುವುದಿಲ್ಲ. ಕಥೆ ಮುಖ್ಯವಾಗುತ್ತದೆ ಎಂದು ಜೈರಾಜ್ ಹೇಳುತ್ತಾರೆ.

dayavittu gamanisi
ದಯವಿಟ್ಟು ಗಮನಿಸಿ
full tight
ಫುಲ್​​​​​ಟೈಟ್ ಪ್ಯಾತೆ

ಇದು ಒಂದು ವರ್ಗದ ಸಿನಿಮಾ ಟೈಟಲ್​​​​ಗಳಾದ್ರೆ ಸಮಾಜಕ್ಕೆ ಹಾಗೂ ಒಬ್ಬ ವ್ಯಕ್ತಿಯ ಹೆಸರಿನ ಮೇಲೆ ಸಿನಿಮಾ ಟೈಟಲ್​​​​​​ಗಳು ಬಂದಿವೆ. ದಂಡುಪಾಳ್ಯ, ವೀರಪ್ಪನ್ ಅಟ್ಟಹಾಸ, ಸೈನೆಡ್ ಮಲ್ಲಿಕಾ , ಇಂತಹ ರಿಯಲ್ ಸ್ಟೋರಿಗಳು ಸಿನಿಮಾ ಆದಾಗ ಆ ವ್ಯಕ್ತಿ ಹೆಸರು ಅಥವಾ ಘಟನೆಯ ಟೈಟಲ್ ಇಡಬೇಕಾಗುತ್ತದೆ ಎನ್ನುತ್ತಾರೆ ನಿರ್ಮಾಪಕ ಉಮೇಶ್ ಬಣಕಾರ್​. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಭಿನ್ನ, ವಿಭಿನ್ನವಾಗಿ ಟೈಟಲ್ ಇಡೋದು ಆ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಬಿಟ್ಟ ವಿಚಾರ. ಫಿಲ್ಮ್​ ಚೇಂಬರ್ ಆಗಲೀ ಟೈಟಲ್ ಕಮಿಟಿ ಆಗಲಿ, ನಾವು ಅಂತಹ ಟೈಟಲ್ ಇಡಬೇಡಿ ಎಂದು ಹೇಳಲು ಯಾವುದೇ ಕಾರಣಕ್ಕೂ ನಮಗೆ ರೈಟ್ಸ್ ಇಲ್ಲ ಅನ್ನೋದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತು.

godi
ಗೋಧಿಬಣ್ಣ ಸಾಧಾರಣ ಮೈಕಟ್ಟು

Intro:ಅದೊಂದು ಕಾಲವಿತ್ತು. ಸಿನಿಮಾ ಟೈಟಲ್ ಅಂದ್ರೆ ಅಣ್ಣಾವ್ರ ಬಂಗಾರದ ಮನುಷ್ಯ, ತಂದೆಗೆ ತಕ್ಕ ಮಗ,ದೇವತಾ ಮನುಷ್ಯ,ವಿಷ್ಣುವರ್ಧನ್ ಅವರ ಸೊಸೆ ತಂದ ಸೌಭಾಗ್ಯ,ಗಲಾಟೆ ಸಂಸಾರ ಸೂರ್ಯವಂಶ ಹೀಗೆ ಹೇಳ್ತಾ ಹೋದ್ರೆ ನೂರಾರು ಟೈಟಲ್ ಗಳು ಕಣ್ಮುಂದೆ ಬರುತ್ತೆ. ಆದ್ರೆ, ಇತ್ತೀಚೆಗೆ ಸಿನಿಮಾ ಟೈಟಲ್ ಗಳು ಇದು ಸಿನಿಮಾ ಟೈಟಲ್ ಎನ್ನುವಂತಹ ಪರಿಸ್ಥಿತಿ ಬಂದಿದೆ. ಪ್ರತಿನಿತ್ಯ ಮಾತನಾಡೋ ಪದಗಳೇ ಸಿನಿಮಾ ಟೈಟಲ್ ಆಗೋಗಿದೆ. ದಿನಿತ್ಯದ ಬೈಗುಳಗಳೇ ಚಿತ್ರಗಳ ಶೀರ್ಷಿಕೆ ಆಗಿದೆ. ಅದರಲ್ಲೂ, ಈಗಿನ ಸಿನಿಮಾ ಮೇಕರ್ಸ್ ಅಂತೂ ಸಿನಿಮಾ ಟೈಟಲ್ ನಿಂದಲೇ ಹೆಚ್ಚು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಸದ್ಯ ಕನ್ನಡ ಚಿತ್ರರಂಗದಲ್ಲಿ ಬರ್ತಾ ಇರೋ ಭಿನ್ನ-ವಿಭಿನ್ನ, ವಿಚಿತ್ರ ಟೈಟಲ್ ಗಳು..ಕೆಲವೊಂದು ಸಿನಿಮಾಗಳು ಕಥೆಗೆ ಪೂರಕವಾಗಿ ಇದ್ರೆ, ಮತ್ತೆ ಕೆಲವು ಸಿನಿಮಾಗಳು ಟೈಟಲ್ ಗಳು ಪ್ರೇಕ್ಷಕರನ್ನ ಸೆಳೆಯುವ ತಂತ್ರ ಅನ್ನೋದು ಗಾಂಧಿನಗರದ ಲೆಕ್ಕಾಚಾರ..

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ನಿಂದಲೇ, ಗಮನ ಸೆಳೆಯುತ್ತಿರೋ ಸಿನಿಮಾ ಟೈಟಲ್ ಕೇಳಿದ್ರೆ, ನೀವು ಕೂಡ ಅಯ್ಯೋ ದೇವರೇ ಅಂತೀರಾ..ಡಿಚ್ಕಿ ಡಿಸೈನ್, ಪುಲ್ ಟೈಟ್ ಪ್ಯಾತೇ, ಎಂ, ಆರ್, ಪಿ, ಜರ್ಕ್, ಹಫ್ತಾ. ಸೈನೆಡ್ ಮಲ್ಲಿಕಾ, ಟ್ರಂಕ್, ಮೆಜೆಸ್ಟಿಕ್, ಶಿವಾಜಿನಗರ, ಯೂ ಟರ್ನ್, ಸವರ್ಣದೀರ್ಘ ಸಂಧಿ, ದಯವಿಟ್ಟು ಗಮನಿಸಿ, ಕನ್ನಡಕ್ಕಾಗಿ ಒಂದನ್ನ ಒತ್ತಿ, ಬಿಎಂ ಡಬ್ಯ್ಲೂ, ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ, ಒಂದು ಮೊಟ್ಟೆಯ ಕಥೆ, ನನ್ನ ಪ್ರಕಾರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೀಗೆ ನೂರಾರು ಚಿತ್ರಗಳ,ವಿಭಿನ್ನ ಟೈಟಲ್ ಆಗಿವೆ..

ಯಾಕೇ ಸಿನಿಮಾ, ನಿರ್ದೆಶಕರು ಹಾಗು ನಿರ್ಮಾಪಕರು ಇಂತಂಹ ಟೈಟಲ್ ಗಳನ್ನ ಇಡ್ತಾರೆ, ಎಂಬುದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜಯರಾಜ್ ಹಾಗು ನಿರ್ಮಾಪಕ ಉಮೇಶ್ ಬಣಕಾರ್ ಹೇಳೋದು ಬೇರೆ.. ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜಯರಾಜ್ ಪ್ರಕಾರ ಸಿನಿಮಾಗಳು ಟೈಟಲ್ ಗನ್ನ ಇಡೋದು ನಿರ್ಮಾಪಕ. ಹಾಗು ನಿರ್ದೇಶಕರ ಸ್ವತಃ ನಿರ್ಧಾರ..ಆದ್ರೆ ಸಿನಿಮಾಗಳ ಟೈಟಲ್ ಗಳು, ಫಿಲ್ಮ್ ಚೇಂಬರ್ ನಲ್ಲಿ ಯಾವ ಆಧಾರದ ಮೇಲೆ ಸಿನಿಮಾಗಳ ಶೀರ್ಷಿಕೆ ರಿಜಿಸ್ಟ್ರರ್ ಆಗುತ್ತೆ ಅನ್ನೋದು ಅಧ್ಯಕ್ಷರು ಹೇಳೋದು ಹೀಗೆ..
ಬೈಟ್: ಗುಬ್ಬಿ ಜಯರಾಜ್, ಫಿಲ್ಮ್ ಚೇಂಬರ್ ಅಧ್ಯಕ್ಷ

Body:ಹೊಸಬರು ಸಿನಿಮಾ ಟೈಟಲ್, ರಿಜಿಸ್ಟ್ರರ್ ಆಗೋ ಪ್ರಕ್ರಿಯೆ ಹೇಗಿರುತ್ತೆ ಅನ್ನೋದನ್ನ ಕೇಳಿದ್ರೆಲ್ಲಾ, ಹೊಸ ಟೈಟಲ್ ನೊಂದಾಣಿಗೆ ಮೊದಲು 2000 ಸಾವಿರ ಕೊಟ್ಟಬೇಕು, ಒಂದು ವರ್ಷದ ಬಳಿಕ ಆ ಟೈಟಲ್ ಗೆ 200 ರೂಪಾಯಿ ಕೊಟ್ಟು ರಿನಿವಲ್ ಮಾಡಬೇಕು..ನಂತ್ರ ಈ ಟೈಟಲ್ ಚಿತ್ರತಂಡಕ್ಕೆ ಕೋಟಬೇಕಾ, ಬೇಡ್ವಾ ಎಂಬುದರ ಬಗ್ಗೆ ಫಿಲ್ಮ್ ಚೇಂಬರ್, ಟೈಟಲ್ ಕಮಿಟಿಯಲ್ಲಿ ಹಿರಿಯ ನಿರ್ಮಾಪಕರು ಹಾಗು ನಿರ್ದೇಶಕರು ಹಾಗು ಅಧ್ಯಕ್ಷರು, ಉಪಾಧ್ಯಕ್ಷರು, ಗೌರವ ಕಾರ್ಯದರ್ಶಿ ಸೇರಿದಂತೆ ಎಲ್ಲಾರ ಸಮ್ಮುಖದಲ್ಲಿ ಚರ್ಚೆ ಮಾಡಲಾಗುತ್ತೆ. ಅಂತಾ ಚೇಂಬರ್ ಅಧ್ಯಕ್ಷರು ಗುಬ್ಬಿ ಜಯರಾಜ್ ಮಾತು..
ಬೈಟ್: ಗುಬ್ಬಿ ಜಯರಾಜ್, ಫಿಲ್ಮ್ ಚೇಂಬರ್ ಅಧ್ಯಕ್ಷ

ಇನ್ನು ಪ್ರಖ್ಯಾತಿ ಹೊಂದಿರುವ ಹೆಸರುಗಳನ್ನ, ಸಿನಿಮಾ ಟೈಟಲ್ ಆಗಿ ಇಡಬೇಕಾಗುತ್ತೆ..ಅದಕ್ಕೆ ಬೆಸ್ಟ್ ಎಗ್ಸಾಂಪರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮೊದಲ ಸಿನಿಮಾ ಮೆಜೆಸ್ಟಿಕ್ ಎಂಬ ಟೈಟಲ್..ಈ ಟೈಟಲ್ ಬಗ್ಗೆ ಆಗ ಸಮಸ್ಯೆ ಆಗಿತ್ತು..ಆ ಟೈಮಲ್ಲಿ ಯಾಕೇ ಇದೇ ಟೈಟಲ್ ನ್ನ ಇಟ್ರು ಅನ್ನೋದಿಕ್ಕೆ, ನಿರ್ಮಾಪಕ ಉಮೇಶ್ ಬಣಕಾರ್ ಕೊಟ್ಟ ಉತ್ತರ ಇದು..
ಬೈಟ್: ಉಮೇಶ್ ಬಣಕಾರ್, ನಿರ್ಮಾಪಕ

ಒಳ್ಳೆ ಕಥೆ, ಆಡು ಭಾಷೆಯ ಟೈಟಲ್ ಗಳು ಇಟ್ಟುಕೊಂಡು ಬಂದ ಸಿನಿಮಾಗಳ ಪೈಕಿ ಕೆಲವು ಚಿತ್ರಗಳು ಸೂಪರ್ ಹಿಟ್ ಆಗಿವೆ,,ಅದ್ರಲ್ಲಿ ಬೆಲ್ ಬಾಟಂ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಯೂ ಟರ್ನ್ ಅಂತಂಹ ಸಿನಿಮಾಗಳು ಯಶಸ್ಸು ಕಂಡಿದ್ವು..ಆ ಸಿನಿಮಾಗಳಲ್ಲಿ ಟೈಟಲ್ ಪ್ರಶ್ನೆ ಮುಖ್ಯ ಆಗೋಲ್ಲ ಕಥೆ ಮುಖ್ಯ ಆಗುತ್ತೆ ಅಂತಾರೆ..
ಬೈಟ್: ಗುಬ್ಬಿ ಜಯರಾಜ್, ಫಿಲ್ಮ್ ಚೇಂಬರ್ ಅಧ್ಯಕ್ಷ

ಇನ್ನು ಸಿನಿಮಾ ಟೈಟಲ್ ವಿಚಾರವಾಗಿ, ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಗಳಾದ ಆಂಧ್ರಪದೇಶ, ತಮಿಳುನಾಡು, ಕೇರಳ ಹಾಗು ಬಾಲಿವುಡ್ ಫಿಲ್ಮ್ ಚೇಂಬರ್ ಗಳು ಜಂಟಿಯಾಗಿ ಟೈಟಲ್ ವಿಷ್ಯವಾಗಿ ಕೆಲಸ ಮಾಡುತ್ವೆ..ಯಾಕಂದ್ರೆ ಆ ಭಾಷೆಯಲ್ಲಿ ಇಟ್ಟಿರುವ ಟೈಟಲ್ ಗೂ ಕನ್ನಡ ಭಾಷೆಯಲ್ಲಿ ಇಡುವ ಟೈಟಲ್ ಒಂದೇ ಆಗರಬಾರದು ಅಂತಾ, ಈ ಸೌತ್ ಇಂಡಿಯನ್ ಫಿಲ್ಮ್ ಚೇಂಬರ್ ಗಳ ಜೊತೆ ಕಾರ್ಯ ನಿರ್ವಹಿಸ್ತಾ ಇದ್ದೀವಿ ಅಂತಾರೆ..
ಬೈಟ್: ಗುಬ್ಬಿ ಜಯರಾಜ್, ಫಿಲ್ಮ್ ಚೇಂಬರ್ ಅಧ್ಯಕ್ಷ
ಇದು ಒಂದು ವರ್ಗದ ಸಿನಿಮಾ ಟೈಟಲ್ ಗಳಾದ್ರೆ, ಮತ್ತೊಂದು ಸಮಾಜಕ್ಕೆ ಹಾಗು ಒಬ್ಬ ವ್ಯಕ್ತಿಯ ಹೆಸರಿನ ಮೇಲೆ ಸಿನಿಮಾ ಟೈಟಲ್ ಗಳು ಬಂದಿವೆ. ದಂಡುಪಾಳ್ಯ, ವೀರಪನ್ ಅಟ್ಟಹಾಸ, ಈಗ ಸೈನೆಡ್ ಮಲ್ಲಿಕಾ ಇಂತಂಹ ರಿಯಲ್ ಸ್ಟೋರಿಗಳು ಸಿನಿಮಾ ಆದಾಗ, ಆ ವ್ಯಕ್ತಿಯ ಹೆಸರು ಅಥವಾ ಘಟನೆಯ ಟೈಟಲ್ ಇಡಬೇಕಾಗುತ್ತೆ ಅಂತಾರೆ ನಿರ್ಮಾಪಕ ಉಮೇಶ್ ಬಣಕಾರ್,
ಬೈಟ್: ಉಮೇಶ್ ಬಣಕಾರ್, ನಿರ್ಮಾಪಕ

ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಭಿನ್ನ, ವಿಭಿನ್ನವಾಗಿ ಟೈಟಲ್ ಇಡೋದು ಆ ನಿರ್ದೇಶಕರು ಹಾಗು ನಿರ್ಮಾಪಕರಿಗೆ ಬಿಟ್ಟ ವಿಚಾರ..ಫಿಲ್ಮ್ ಚೇಂಬರ್ ಆಗಲಿ ಹಾಗು ಟೈಟಲ್ ಕಮಿಟಿಯಾಗಲಿ ನಾವು ಆ ಟೈಟಲ್ ಇಡಬೇಡಿ ಅಂತಾ ಹೇಳೋದಿಕ್ಕೆ ನಮಗೆ ಯಾವುದೇ ರೀತಿಯ ರೈಟ್ಸ್ ನಮಗೆ ಇರೋಲ್ಲ ಅನ್ನೋದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾತು..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.