ಕೊರೊನಾ ಕರಿಛಾಯೆ ನಿಧಾನವಾಗಿ ಮರೆಯಾಗುತ್ತಿದೆ. ಪ್ರತಿ ಗುರುವಾರ-ಶುಕ್ರವಾರ ಗಾಂಧಿನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗೋದಿಕ್ಕೆ ಕಾಲ ಹತ್ತಿರವಾಗುತ್ತಿದೆ. ಫೆಬ್ರವರಿ ತಿಂಗಳಿನಿಂದ ಸ್ಟಾರ್ ಸಿನಿಮಾಗಳು ಒಂದರ ಹಿಂದೆ ಒಂದು ಚಿತ್ರಮಂದಿರಕ್ಕೆ ಲಗ್ಗೆ ಇಡೋದಿಕ್ಕೆ ಸಜ್ಜಾಗಿವೆ.
ಸದ್ಯ ಸ್ಯಾಂಡಲ್ವುಡ್ನಲ್ಲಿ ಟ್ರೈಲರ್ನಿಂದ ಹವಾ ಸೃಷ್ಟಿಸಿರೋ 'ಶ್ಯಾಡೋ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಫೆಬ್ರವರಿ 5ಕ್ಕೆ, ಥಿಯೇಟರ್ಗೆ ಬರೋದಿಕ್ಕೆ ಮರಿ ಟೈಗರ್ ವಿನೋದ್ ಪ್ರಭಾಕರ್ ನಟನೆಯ ಶ್ಯಾಡೊ ರೆಡಿಯಾಗಿದೆ.
ಈ ಸಿನಿಮಾ ರಿಲೀಸ್ ಬಗ್ಗೆ ಮಾತನಾಡೋದಿಕ್ಕೆ ನಟ ವಿನೋದ್ ಪ್ರಭಾಕರ್, ಹಾಸ್ಯ ನಟ ಲೋಕೇಶ್, ಮಾಧ್ಯಮದ ಮುಂದೆ ಹಾಜರಿದ್ದರು. ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದ ಕಾರಣ, ನಿರ್ದೇಶಕ ರವಿಗೌಡ ಹಾಗೂ ನಿರ್ಮಾಪಕ ಚಕ್ರವರ್ತಿ ಪತ್ರಿಕಾಗೋಷ್ಠಿಗೆ ಬಂದಿರಲಿಲ್ಲ.
ಇನ್ನು ವಿನೋದ್ ಪ್ರಭಾಕರ್ ಸಿನಿಮಾ ಅಂದ್ರೆ ಪಕ್ಕಾ ಪೈಸಾ ವಸೂಲ್ ಅನ್ನೋದು ಈಗಾಗಲೇ ಪ್ರೂವ್ ಆಗಿದೆ. ಭರ್ಜರಿ ಆಕ್ಷನ್ ಜೊತೆಗೆ ಕ್ಲಾಸ್ ಎಲಿಮೆಂಟ್ಸ್ಗಳನ್ನ ಶ್ಯಾಡೊ ಸಿನಿಮಾ ಒಳಗೊಂಡಿದೆ. ಮತ್ತೊಂದು ವಿಶೇಷ ಏನಂದ್ರೆ ಚಿತ್ರದ ಶೂಟಿಂಗ್ ಟೈಮಲ್ಲಿ ವಿನೋದ್ ಪ್ರಭಾಕರ್ ಗಂಟಲಿಗೆ ಸಮಸ್ಯೆ ಆಗಿ ಆಪರೇಷನ್ ಮಾಡಿಸಿದ್ರು ಕೂಡ ಕಷ್ಟ ಪಟ್ಟು ಡಬ್ಬಿಂಗ್ ಮಾಡಿದ್ರಂತೆ.
ಚಿತ್ರದಲ್ಲಿ ಮರಿ ಟೈಗರ್ಗೆ ಜೋಡಿಯಾಗಿ ಶೋಭಿತಾ ಮಿಂಚಿದ್ದಾರೆ. ಅಷ್ಟೇ ಅಲ್ಲಾ ಶರತ್ ಲೋಹಿತಾಶ್ವ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ನಗಿಸಲಿದ್ದಾರೆ.