ಇಂದು ಮಕ್ಕಳ ದಿನಾಚರಣೆ. ಬಾಲ್ಯ ಎಂದಾಗ ನೂರಾರು ಸುಂದರ ನೆನಪುಗಳು ಕಣ್ಣ ಮುಂದೆ ಬರುತ್ತವೆ. ಅದಕ್ಕೆ ನಮ್ಮ ಹಳೆಯ ಫೋಟೋಗಳೇ ಸಾಕ್ಷಿ. ಅಂದಹಾಗೆ ಸಿನಿಮಾ ನಟ, ನಟಿಯರು ತಮ್ಮ ಬಾಲ್ಯದಲ್ಲಿ ಹೇಗಿದ್ದರು ಎಂಬ ಕುತೂಹಲ ಇದ್ದೇ ಇರುತ್ತದೆ.
ಆಗಾದ್ರೆ ಅರಸನ ಕೋಟೆ ಅಖಿಲಾಂಡೇಶ್ವರಿ(ವಿನಯ ಪ್ರಸಾದ್) ಅವರು ತಮ್ಮ ಬಾಲ್ಯದಲ್ಲಿ ಹೇಗಿದ್ದರು ಎಂಬ ಕ್ಯೂರಿಯಾಸಿಟಿ ಇದ್ಯಾ. ಹಾಗಾದ್ರೆ ಇಲ್ಲಿ ನೋಡಿ. ಕಿರುತೆರೆ ವೀಕ್ಷಕರ ಪ್ರೀತಿಯ ವಿನಯ ಪ್ರಸಾದ್ ಅವರು ಈಗಿನಂತೆ ತಮ್ಮ ಬಾಲ್ಯದಲ್ಲೂ ಕೂಡಾ ಮುದ್ದು ಮುದ್ದಾಗಿದ್ದರು.
ಮಧ್ವಾಚಾರ್ಯ ಸಿನಿಮಾದ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿದ ವಿನಯ ಪ್ರಸಾದ್ ಸದ್ಯ ಅಖಿಲಾಂಡೇಶ್ವರಿಯಾಗಿಯೇ ಜನಪ್ರಿಯ. ಹೌದು, ಪಾರು ಧಾರಾವಾಹಿಯ ಅರಸನಕೋಟೆ ಅಖಿಲಾಂಡೇಶ್ವರಿ ಪಾತ್ರ ವಿನಯ ಪ್ರಸಾದ್ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ.
ಕಾಲೇಜ್ ಹೀರೋ, ಗಣೇಶನ ಮದುವೆ, ಪೊಲೀಸನ ಹೆಂಡ್ತಿ, ನೀನು ನಕ್ಕರೆ ಹಾಲು ಸಕ್ಕರೆ, ಗೌರಿ ಗಣೇಶ, ಮೈಸೂರು ಜಾಣ, ಸೂರ್ಯೋದಯ, ಯಾರಿಗೂ ಹೇಳ್ಬೇಡಿ ಚಿತ್ರಗಳಲ್ಲಿ ನಟಿಸಿರುವ ವಿನಯ ಪ್ರಸಾದ್ ಅವರಿಗೆ ಕಿರುತೆರೆ ಹೊಸತೇನಲ್ಲ. ಸಾವಿತ್ರಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟರು. ನಂತರ ಶಕ್ತಿ, ಸ್ತ್ರೀ, ನಂದಗೋಕುಲ, ಅನುಪಮಾ, ಬಂಗಾರ, ನಿತ್ಯೋತ್ಸವ, ಸುಂದರಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಇವರು, ಸದ್ಯ ಅಖಿಲಾಂಡೇಶ್ವರಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಪಾರು ಧಾರಾವಾಹಿಯ ಅವರ ಪಾತ್ರವನ್ನು ಜನ ಮೆಚ್ಚಿಯಾಗಿದೆ. ಸಂತಸದ ಸಂಗತಿ ಎಂದರೆ ಈ ಬಾರಿ ನಡೆದ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ವಿನಯ ಪ್ರಸಾದ್ ಅವರಿಗೆ ಐಕಾನಿಕ್ ರೋಲ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ.