ETV Bharat / sitara

ದೊಡ್ಮನೆ ಕುಡಿ ವಿನಯ್ ರಾಜಕುಮಾರ್​ಗೆ ಅಪ್ಪ - ತಮ್ಮ ಕೊಟ್ಟ ಸರ್​ಪ್ರೈಸ್ ಗಿಫ್ಟ್ ​ಏನು! - ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾ

ನಟ ರಾಜ್​ಕುಮಾರ್​ ಮೊಮ್ಮಗ, ರಾಘವೇಂದ್ರ ರಾಜ್​ಕುಮಾರ್​ ಮಗನಾದ ವಿನಯ್​ ರಾಜ್​ಕುಮಾರ್​ಗಿಂದು ಜನ್ಮದಿನದ ಸಂಭ್ರಮ. ಈ ಸಂತೋಷ ದಿನದಂದು ರಾಘವೇಂದ್ರ ರಾಜ್​ಕುಮಾರ್​ ಹಾಗೂ ಯುವರಾಜ್​ ಕುಮಾರ್​ ವಿನಯ್​ಗೆ ಬೊಂಬಾಟ್ ಉಡುಗೊರೆಯನ್ನು ನೀಡುವ ಮೂಲಕ ಶುಭಾಶಯ ಕೋರಿದ್ದಾರೆ.

vinay
vinay
author img

By

Published : May 7, 2021, 5:08 PM IST

ಕನ್ನಡ ಚಿತ್ರರಂಗದ ದೊಡ್ಮನೆ ಮೊಮ್ಮಗ ವಿನಯ್ ರಾಜ್‌ಕುಮಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 'ಸಿದ್ದಾರ್ಥ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಟೆಂಟಿ ಹೊಂದಿರುವ ವಿನಯ್ ರಾಜ್ ಕುಮಾರ್ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಮುದ್ದಿನ ಮಗನಾಗಿರೋ ವಿನಯ್ ರಾಜ್ ಕುಮಾರ್​ಗೆ, ರಾಘವೇಂದ್ರ ರಾಜ್ ಕುಮಾರ್ ಬಹಳ ವಿಶಿಷ್ಟವಾಗಿ ವಿಶ್ ಮಾಡಿದ್ದಾರೆ. ವಿಶೇಷ ಪೋಟೋಗಳನ್ನು ಹೊಂದಿರುವ ವಿಡಿಯೋವನ್ನ ಹಾಗು ತಾತಾ ಡಾ. ರಾಜ್ ಕುಮಾರ್ ಹಾಡಿರುವ ’’ಚಿನ್ನ ಎಂದೂ ನಗುತಿರು ನನ್ನ ಕಂದ ಬಿಡದಿರು’’ ಎಂಬ ಹಾಡಿನ ಜೊತೆಗೆ ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಹ್ಯಾಪಿ ಬರ್ತ್ ಡೇ ವಿನಯ್ ಮಗನೇ ಎಂದು ಬರೆದುಕೊಂಡಿದ್ದಾರೆ. ಯುವರಾಜ್ ಕುಮಾರ್ ಕೂಡ, ಪ್ರೀತಿಯ ಅಣ್ಣನಿಗೆ ಶುಭಾಶಯ ತಿಳಿಸುವ ಮೂಲಕ ವಿನಯ್ ಜೊತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಪ್ರತಿವರ್ಷ ಅಭಿಮಾನಿಗಳೊಂದಿಗೆ ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದ ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ಆಚರಣೆಗೆ ಈ ವರ್ಷ ಕೊರೊನಾ ಬ್ರೇಕ್ ಹಾಕಿದೆ. ಆದರೂ ಅಭಿಮಾನಿಗಳು ಹಾಗೂ ಸ್ನೇಹಿತರು ವಿನಯ್‌ಗೆ ಸೋಷಿಯಲ್ ಮೀಡಿಯಾದ ಮೂಲಕ ವಿಶ್ ಮಾಡುತ್ತಿದ್ದಾರೆ. ಗ್ರಾಮಾಯಾಣ, ಪೆಪೆ , ಅಂದೊಂದಿತ್ತು ಕಾಲದಲ್ಲಿ, ಟೈಟಲ್ 10 ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಆದರೆ, ಅನಂತ್ ವರ್ಸಸ್ ನುಸ್ರತ್ ಆದ್ಮಲೇ ವಿನಯ್ ರಾಜ್ ಕುಮಾರ್ ಅಭಿನಯದ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲ. ಹೀಗಾಗಿ ವಿನಯ್ ರಾಜ್ ಕುಮಾರ್ ಸಿನಿಮಾಗಳ ಮೇಲೆ ಸ್ಯಾಂಡಲ್​ವುಡ್ ಅಲ್ಲದೇ ಅಭಿಮಾನಿಗಳಲ್ಲಿ ಕುತೂಹಲ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.