ETV Bharat / sitara

ಆಹಾರ ಉತ್ಪನ್ನಗಳ ರಾಯಭಾರಿಯಾಗಿ ಹಿರಿಯ ನಟ ಅನಂತ್​ ನಾಗ್​​

ಹಿರಿಯ ನಟ ಅನಂತ್ ನಾಗ್ ಇಂದು ತಮ್ಮ 71 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಇಂದು ಸಂಜೆ ನಡೆಯುವ ಸಮಾರಂಭದಲ್ಲಿ 'ಒಗಾರ' ಸಂಸ್ಥೆಯ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಉತ್ಪನ್ನಗಳಿಗೆ ಅನಂತ್​ ನಾಗ್ ರಾಯಭಾರಿಯಾಗಿಯೂ ಆಯ್ಕೆಯಾಗಿದ್ದಾರೆ.

ಅನಂತ್​ ನಾಗ್​​
author img

By

Published : Sep 4, 2019, 3:23 PM IST

ರುಚಿಯಾದ ತಿಂಡಿತಿನಿಸುಗಳನ್ನು ತಯಾರಿಸುವ 'ಒಗಾರ' ಸಂಸ್ಥೆಗೆ ರಾಯಭಾರಿಯಾಗಿ ಹಿರಿಯ ನಟ ಅನಂತ್ ನಾಗ್​ ಆಯ್ಕೆಯಾಗಿದ್ದಾರೆ. ಈ ಆಹಾರ ಸಂಸ್ಥೆಯ ರಘುನಾಥ್ ಅವರ ಆಹ್ವಾನವನ್ನು ಮನ್ನಿಸಿ ಈ ಉತ್ಪನ್ನದ ರಾಯಭಾರಿಯಾಗಿದ್ದಾರೆ.

ananthnag
ಪತ್ನಿ ಗಾಯತ್ರಿ ಜೊತೆ ಅನಂತ್ ನಾಗ್

ಆಕ್ಸಿಡೆಂಟ್​, ಜಿಗರ್ ತಂಡ, ಹೆಬ್ಬುಲಿ ಚಿತ್ರಗಳ ನಿರ್ಮಾಪಕ ರಘುನಾಥ್ ಈ ಆಹಾರ ಉತ್ಪನ್ನಗಳ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇಂದು ಅನಂತ್​ ನಾಗ್ ಅವರ ಹುಟ್ಟುಹಬ್ಬವಾಗಿದ್ದು ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ 'ಒಗಾರ' ಸಂಸ್ಥೆಯ ಕೆಲವು ಹೊಸ ಉತ್ಪನ್ನಗಳಿಗೆ ಚಾಲನೆ ನೀಡಲಿದ್ದಾರೆ. ಎಸ್​ಆರ್​​​ವಿ ಸಭಾಂಗಣದಲ್ಲಿ ಇಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಪತ್ನಿ ಅನಂತ್ ನಾಗ್ ಹುಟ್ಟುಹಬ್ಬವನ್ನು ಕೂಡಾ ಸಂಸ್ಥೆ ಆಚರಿಸಲಿದೆ. ಇವರೊಂದಿಗೆ ಪತ್ನಿ ಗಾಯತ್ರಿ ಕೂಡಾ ಇರಲಿದ್ದಾರೆ. ಜೊತೆಗೆ 'ಒಗಾರ' ಮಾಲೀಕ ರಘುನಾಥ್ ಹಾಗೂ ಪತ್ನಿ ವಾಣಿ ಹಾಜರಿರಲಿದ್ದಾರೆ.

ಅನಂತ್​ ನಾಗ್​​
ಅನಂತ್​ ನಾಗ್​​

ಈ ಮುನ್ನ ಅನಂತ್ ನಾಗ್ ಎರಡು ಕಂಪನಿಗಳಿಗೆ ರಾಯಭಾರಿ ಆಗಿದ್ದರು. ಆದರೆ ಕೆಲವು ದಿನಗಳ ನಂತರ ಆ ಕೆಲಸದಿಂದ ಹಿಂದೆ ಸರಿದಿದ್ದರು. ಅನಂತ್ ನಾಗ್ ಸದ್ಯಕ್ಕೆ ದ್ವಾರಕೀಶ್ ಅವರ ‘ಆಯುಶ್ಮಾನ್ ಭವ’ ಶಿವರಾಜ್​​ ಕುಮಾರ್ ಜೊತೆ ’ಮೇಡ್ ಇನ್ ಬೆಂಗಳೂರು’, ’ಗಾಳಿಪಟ 2’, ’ರುದ್ರ ಪ್ರಯಾಗ’, ’ಕೆಜಿಎಫ್ ಚಾಪ್ಟರ್ 2’, ’ಇಂಡಿಯಾ ವರ್ಸಸ್ ಇಂಗ್ಲೆಂಡ್​’ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಅನಂತ್ ನಾಗ್ 71 ಒಗಾರ ಆಹಾರ ಉತ್ಪನ್ನಗಳ ರಾಯಭಾರಿ

ಕನ್ನಡ ಚಿತ್ರ ರಂಗದ ಸುಪ್ರಸಿದ್ದ ನಟ ಅನಂತ್ ನಾಗ್ ಈಗ ಒಂದು ಸಂಕಲ್ಪ ಮಾಡಿದ್ದಾರೆ. ಅದು ಅವರ 71 ಹುಟ್ಟುಹಬ್ಬವಾದ ಇಂದು. ಅನಂತ್ ನಾಗ್ ರುಚಿ ರುಚಿಯಾದ ತಿನಿಸುಗಳನ್ನು ತಯಾರಿಸುವ ಒಗಾರ ಸಂಸ್ಥೆ ರಘುನಾಥ್ (ಕನ್ನಡ ಚಿತ್ರಗಳ ನಿರ್ಮಾಪಕ – ಆಕ್ಸಿಡೆಂಟ್, ಜಿಗರ್ ತಂಡ, ಹೆಬ್ಬುಲಿ) ಅವರ ಆಹ್ವಾನವನ್ನು ಮನ್ನಿಸಿ ಈಗ ಓಗಾರ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದಾರೆ. 1973 ರಲ್ಲಿ ಸಂಕಲ್ಪ ಇಂದ ಆರಂಭವಾದ ಅನಂತ್ ನಾಗ್ ವೃತ್ತಿ ಇಂದು 46 ವರ್ಷಗಳ ಸುಧೀರ್ಘ ಚಿತ್ರ ಜೀವನ ತುಂಬಿದೆ.

ಅನಂತ್ ನಾಗ್ ಇಂದು ಸಂಜೆ ನಡೆಯುವ ಸಮಾರಂಭದಲ್ಲಿ ಒಗಾರ ಸಂಸ್ಥೆಯ ಕೆಲವು ಹೊಸ ಉತ್ಪನ್ನಗಳಿಗೆ ಚಾಲನೆ ನೀಡಲಿದ್ದಾರೆ. ಎಸ್ ಆರ್ ವಿ ಸಭಾಂಗಣದಲ್ಲಿ ಇಂದು ಸಂಜೆ ಪತ್ನಿ ಗಾಯತ್ರಿ ಜೊತೆ ಅನಂತ್ ನಾಗ್ ಆಗಮಿಸಿ ಹುಟ್ಟು ಹಬ್ಬವನ್ನು ಸಹ ಆಚರಿಸಿಕೊಳ್ಳಲಿದ್ದಾರೆ. ಎಸ್ ಆರ್ ವಿ ಸಂಸ್ಥೆಯ ಒಗಾರ ಮಾಲೀಕ ರಘುನಾಥ್ ಹಾಗೂ ಅವರ ಪತ್ನಿ ವಾಣಿ ರಘುನಾಥ್ ಸಹ ಇಂದಿನ ಕಾರ್ಯಕ್ರಮದಲ್ಲಿ ಹಾಜರಿರುವರು.

ಅನಂತ್ ನಾಗ್ ಈ ಹಿಂದೆ ಎರಡು ಕಂಪನಿಗಳಿಗೆ ರಾಯಭಾರಿ ಆಗಿದ್ದರು. ಆದೇಕೋ ಸರಿ ಬರಲಿಲ್ಲ. ಈಗ ಅನೇಕ ವರ್ಷಗಳ ನಂತರ ಅವರು ಮನೆ ಮನೆಯಲ್ಲಿ ಉಪಯೋಗಿಸುವ ಆಹಾರ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದಾರೆ.

ಸದಾ ಓದು, ಅಧ್ಯಾತ್ಮಿಕ ಚಿಂತನೆ, ಸಿನಿಮಾ ಆಸಕ್ತರನ್ನು ತಿದ್ದುವ ಕೆಲಸ ಸಹ ಈಗ 71 ರ ವಯಸ್ಸಿನಲ್ಲಿ ಅನಂತ್ ನಾಗ್ ಮಾಡುತ್ತಾ ಬಂದಿದ್ದಾರೆ. ಸಧ್ಯಕ್ಕೆ ದ್ವಾರಕೀಶ್ ಚಿತ್ರ ಆಯುಶ್ಮಾನ್ ಭಾವ ಶಿವರಾಜಕುಮಾರ್ ಜೊತೆ, ಮೇಡ್ ಇನ್ ಬೆಂಗಳೂರು, ಗಾಳಿಪಟ 2, ರುದ್ರಪ್ರಯಾಗ, ಕೆ ಜಿ ಎಫ್ ಚಾಪ್ಟರ್ 2, ಇಂಡಿಯ ವರ್ಸಸ್ ಇಂಗ್ಲಾಂಡ್ ಸಿನಿಮಾಗಳಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ.

71 ರ ಜನುಮ ದಿನಕ್ಕೆ ಅನಂತ್ ನಾಗ್ ಅವರಿಗೆ ಶುಭಾಷಯಗಳು. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.