ETV Bharat / sitara

ಖಳನಟನಿಂದ ನಾಯಕನಾಗಿ ಬಡ್ತಿ... ಸಾಲು ಸಾಲು ಚಿತ್ರಗಳಲ್ಲಿ ವಸಿಷ್ಠ ಸಿಂಹ ಬ್ಯುಸಿ - Puneet Rajkumar

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್​​ ಇಂಗ್ಲೆಂಡ್​​​' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ವಸಿಷ್ಠ ಸಿಂಹ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಪುನೀತ್ ರಾಜ್​ಕುಮಾರ್ ಬ್ಯಾನರ್​​ನ 'ಮಾಯಾ ಬಜಾರ್​​​' ಸಿನಿಮಾದಲ್ಲೂ ಅವರು ನಟಿಸಿದ್ದಾರೆ.

ವಸಿಷ್ಠಸಿಂಹ
author img

By

Published : Jul 30, 2019, 8:53 AM IST

Updated : Jul 30, 2019, 9:07 AM IST

ಸಣ್ಣ ಪುಟ್ಟ ಪಾತ್ರಗಳಿಂದ ನಟನೆ ಆರಂಭಿಸಿ ಖಳನಟನಾಗಿ ಖ್ಯಾತಿ ಹೊಂದಿ ಇದೀಗ ನಾಯಕನಾಗಿ ಬಡ್ತಿ ಪಡೆದಿರುವ ವಸಿಷ್ಠ ಸಿಂಹ ಈಗ ಬಹಳ ಬ್ಯುಸಿ ನಟ. ಇದೀಗ ಸುಮಾರು 5 ಸಿನಿಮಾಗಳು ಅವರ ಕೈಯಲ್ಲಿ ಇವೆ. ಸದ್ಯಕ್ಕೆ ನಾಗತಿಹಳ್ಳಿ ಚಂದ್ರಶೇಖರ್​​ ನಿರ್ದೇಶನದ 'ಇಂಡಿಯಾ ವರ್ಸಸ್​​ ಇಂಗ್ಲೆಂಡ್​​​' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.

ಈ ಸಿನಿಮಾದ ಮೇಲೆ ನನಗೆ ಬಹಳ ಭರವಸೆ ಇದೆ. ಅದಕ್ಕೆ ಕಾರಣ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ ಮತ್ತು ಚಿತ್ರಕಥೆ. ಈ ಚಿತ್ರದ ಕಾಸ್ಟ್ಯೂಮ್​​​​​​ನಿಂದ ಹಿಡಿದು ಆಡುವ ಭಾಷೆ, ಪಾತ್ರದ ವಿವಿಧತೆ, 14ನೇ ಶತಮಾನದಿಂದ ಹಿಡಿದು ಇಲ್ಲಿಯವರೆಗೂ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸಂಬಂಧ... ಹೀಗೆ ಅನೇಕ ಪದರಗಳಲ್ಲಿ ಸಿನಿಮಾ ಸಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ನಾನು ಇಂಗ್ಲೆಂಡ್​​​ನಲ್ಲಿರುವ ದೇಶಿ ಹುಡುಗನಾಗಿ ನಟಿಸಿದ್ದೇನೆ. ಸಂಭಾಷಣೆಯಲ್ಲಿ ಕನ್ನಡದೊಂದಿಗೆ ಇಂಗ್ಲಿಷ್​ ಟಚ್ ಕೂಡಾ ಇರಲಿದೆ. ಈ ಸಿನಿಮಾ ಮೊದಲು ಫಾರಿನ್ ಫಿಲಮ್ ಫೆಸ್ಟಿವಲ್​​​ನಲ್ಲಿ ಪ್ರದರ್ಶನವಾಗಲಿದೆ. ಆದ್ದರಿಂದಲೇ ಒಂದು ವಿಭಿನ್ನ ಶೈಲಿಯಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದೆ. ನವೆಂಬರ್ ವೇಳೆಗೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ವಷಿಷ್ಠ ಹೇಳಿದ್ದಾರೆ.

ಇದೀಗ ವಷಿಷ್ಠ ಸಿಂಹ ತೆಲುಗು ಭಾಷೆಯಲ್ಲಿ ಕೂಡಾ ನಟಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಇದು ಗ್ಯಾಂಗಸ್ಟರ್​​​​​​​​​​​ ಬಯೋಪಿಕ್​​​​​​​​​​. ಚಿತ್ರಕ್ಕಾಗಿ ನಾನು ತೆಲಂಗಾಣ ಶೈಲಿಯ ತೆಲುಗು ಮಾತನಾಡಿದ್ದೇನೆ ಎಂದಿದ್ದಾರೆ. ಪ್ರತಿ ಶಾಟನ್ನು ಎರಡೆರಡು ಬಾರಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಹೊಸ ಕಥೆಗಳನ್ನು ಕೂಡಾ ವಸಿಷ್ಠ ಕೇಳುತ್ತಿದ್ದಾರಂತೆ. 'ಯಾವುದಾದರೂ ಕೆಟ್ಟ ಕಥೆ ಕೇಳಿದರೆ ಮೂರು ದಿನ ನಿದ್ರೆ ಬರುವುದಿಲ್ಲ. ಆದರೆ ಒಂದೊಳ್ಳೆ ಕಥೆ ಕೇಳಿದರೆ ಅದು ನನ್ನನ್ನು ಒಂದು ವಾರ ಕಾಡುತ್ತದೆ. ನನಗೆ ಒಳ್ಳೆಯ ಪಾತ್ರಗಳನ್ನು ಮಾಡಿದ ನೆಮ್ಮದಿ ದೊರೆಯಬೇಕು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಕಥೆಗಳನ್ನು ಆಯ್ಕೆ ಮಾಡುತ್ತೇನೆ ಎನ್ನುತ್ತಾರೆ ಸಿಂಹ.

ಕಾಲಚಕ್ರ ಸಿನಿಮಾದಲ್ಲಿ ಎರಡು ಶೇಡ್ ಇದ್ದು, 30 ವರ್ಷದ ವ್ಯಕ್ತಿ ಹಾಗೂ 65 ವರ್ಷದ ವೃದ್ಧನ ಪಾತ್ರದಲ್ಲಿ ನಟಿಸಿದ್ದಾರಂತೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಒಂದು ಹಾಡು ಮಾತ್ರ ಬಾಕಿ ಇದೆ. ಪಿಆರ್​ಕೆ ಸಂಸ್ಥೆಯ 'ಮಾಯಾ ಬಜಾರ್​​​​​' ಚಿತ್ರದಲ್ಲಿ ಇವರ ಭಾಗದ ಚಿತ್ರೀಕರಣ ಮುಗಿದಿದೆಯಂತೆ. ಕೆಜಿಎಫ್​​​-2ರಲ್ಲಿ ವಸಿಷ್ಠ ನಟಿಸುತ್ತಿದ್ದಾರಾ ಇಲ್ಲವಾ ಎಂಬ ಗುಟ್ಟನ್ನು ಮಾತ್ರ ಅವರು ಬಿಟ್ಟುಕೊಟ್ಟಿಲ್ಲ.

ವಸಿಷ್ಠ ಸಿಂಹ ಕನ್ನಡ ತೆಲುಗು ಸಿನಿಮಾ

ಸಧ್ಯದ ಬಹಳ ಬ್ಯುಸಿ ನಟ – ಐದು ಸಿನಿಮಾ ಸಂಪೂರ್ಣ ಆಗಿದೆ, ಐದು ಸಿನಿಮಾ ಕೈಯಲ್ಲಿ ಇರುವುದು ವಸಿಷ್ಠ ಸಿಂಹ ಅವರ ಗ್ರಾಫ್ ಮಟ್ಟ ಏರುತ್ತಿದೆ. ನಿನ್ನೆ ಸಂಜೆ ಸ್ನೇಹಿತ ಸಂಚಾರಿ ವಿಜಯ್ ಆಟಕ್ಕುಂಟು ಲೆಕ್ಕಕಿಲ್ಲ ಧ್ವನಿ ಸಾಂದ್ರಿಕೆ, ಟ್ರೈಲರ್ ಬಿಡುಗಡೆ ನಂತರ ಈ ಪ್ರಭಾವಿ ನಟ ಮಾತಿಗೆ ಸಿಕ್ಕರು.

ವಸಿಷ್ಠ ಸಿಂಹ ಖಳನಿಂದ ನಾಯಕಾಗಿ ಇಂಡಿಯ ವರ್ಸಸ್ ಈಂಗ್ಲಂಡ್ ಸಿನಿಮಾ ಇಂದ ಬಡ್ತಿ ಹೊಂದಿದ್ದಾರೆ. ಆ ಸಿನಿಮಾದ ಮೇಲೆ ಬಹಳ ಭರವಸೆ ಇದೆ. ಅದಕ್ಕೆ ಕಾರಣ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ ಮತ್ತು ಚಿತ್ರಕಥೆ. ಕಾಲ ಚಕ್ರ ಸಿನಿಮಾದಲ್ಲಿ ನಾನು ಸೋಲೋ ನಾಯಕ ಆದರೂ ಈ ನಾಗತಿಹಳ್ಳಿ ಸಾರ್ ಸಿನಿಮಾ ದೊಡ್ಡ ಕ್ಯಾನ್ವಾಸ್ ಸೃಷ್ಟಿ ಆಗಿದೆ. ನಾನು ಆ ಚಿತ್ರದ ತೊಡುವ ಬಟ್ಟೆ ಇಂದ ಹಿಡಿದು, ಆಡುವ ಭಾಷೆ, ಪಾತ್ರದ ವಿವಿಧತೆ, 14 ನೇ ಶತಮಾನದಿಂದ ಹಿಡಿದು ಇಲ್ಲಿಯವರೆಗೂ ಭಾರತ ಹಾಗೂ ಇಂಗ್ಲಾಂಡ್ ನಡುವಿನ ಸಂಬಂದ....ಅನೇಕ ಪದರಗಳಲ್ಲಿ ಸಿನಿಮಾ ಸಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ನಾನು ಇಂಗ್ಲಾಂಡ್ ಅಲ್ಲಿರುವ ದೇಸೀ ಬಾಯ್! ಚಂದವಾಗಿ ಕಾಣುವ ಪಾತ್ರ, ಸಂಭಾಷಣೆ ಶೈಲಿ ಸ್ವಲ್ಪ ಇಂಗ್ಲೀಷ್ ಟಚ್ ಕನ್ನಡ ಇರುತ್ತದೆ.

ಇಂಡಿಯ ವರ್ಸಸ್ ಈಂಗ್ಲಂಡ್ ಸಿನಿಮಾ ಮೊದಲು ವಿದೇಶಗಳ ಫೆಸ್ಟಿವಲ್ ಅಲ್ಲಿ ಪ್ರದರ್ಶನ ಆಗುತ್ತದೆ. ಅದಕ್ಕೆ ಅಂತಲೇ ಒಂದು ಸ್ಟೈಲ್ ಅಲ್ಲಿ ಸಿನಿಮಾ ಸಿದ್ದಗೊಂಡಿದೆ. ಸೆಪ್ಟೆಂಬರ್ ನಂತರ ಕನ್ನಡ ನಾಡಿನಲ್ಲಿ ಆ ಚಿತ್ರ ಬಿಡುಗಡೆ ಅಂತ ಯೋಜನೆ ಇದೆ.

ವಸಿಷ್ಠ ಸಿಂಹ ತೆಲುಗು ಭಾಷೆಯಲ್ಲಿ ಘರ್ಜಿಸಲು ಶುರು ಮಾಡಿದ್ದಾರೆ. ಅವರ ಮೊದಲ ಕನ್ನಡ ಹಾಗೂ ತೆಲುಗು ಸಿನಿಮಾ ಬಹುತೇಕ ಚಿತ್ರೀಕರಣ ಆಗಿದೆ. ಆ ಚಿತ್ರದ ಬಗ್ಗೆ ಹೆಚ್ಚು ನಾನು ಹೇಳುವಂತಿಲ್ಲ. ಅದೊಂದು ಬಯೋಪಿಕ್ ಆಫ್ ಎ ಗಾಂಗ್ ಸ್ಟಾರ್ ಅಂತ ಮಾತ್ರ ಹೇಳಬಹುದು. ನಾನು ಆ ಚಿತ್ರಕ್ಕೆ ತೆಲೆಂಗಾನ ಶೈಲಿ ತೆಲುಗು ಮಾತನಾಡಿದ್ದೇನೆ. ಪ್ರತಿಯೊಂದು ಶಾಟ್ ಸಹ ಎರಡು ಭಾರಿ ಚಿತ್ರೀಕರಣ ಮಾಡಲಾಗಿದೆ ಎನ್ನುತ್ತಾರೆ.

ಕಥೆ ಕೇಳುವುದರಲ್ಲಿ ಸಹ ವಸಿಷ್ಠ ಬ್ಯುಸಿ ಅಂತೆ. ಒಂದು ಕೆಟ್ಟ ಕಥೆ ಕೇಳಿದರೆ ಮೂರು ದಿವಸ ನಿದ್ದೆ ಬರಲ್ಲ, ಒಂದು ಒಳ್ಳೆ ಕಥೆ ಕೇಳಿದರೆ ಒಂದು ವಾರ ನನ್ನನ್ನು ಕಾಡುತ್ತದೆ. ನನಗಾಗಿ ಸಿನಿಮಾ ಇಂದ ನಾನು ಬಯಸುವುದು ಆಯಾ ದಿವಸ ಕೆಲಸ ಮಾಡಿದ ಮೇಲೆ ನೆಮ್ಮದಿ’. ಪಾತ್ರಗಳ ಆಯ್ಕೆಯಲ್ಲೂ ಹೊಸ ಆಯಾಮ ಏನು ಸೃಷ್ಟಿ ಈ ಪಾತ್ರದಿಂದ ಆಗುವುದಿದೆ ಅದಕ್ಕೆ ನಾನು ಯಾವ ರೀತಿ ಜೀವ ತುಂಬಾ ಬಹುದು ಎಂದು ಯೋಚನೆ ಇರುತ್ತದೆ. ಕಾಲ ಚಕ್ರ ಸಿನಿಮಾ 30 ರಿಂದ 65 ವರ್ಷದ ಗೆಟ್ ಅಪ್ ಇರುವ ಸಿನಿಮಾ. ಒಂದು ಹಾಡು ಮಾತ್ರ ಬಾಕಿ ಇದೆ ಎಂದು ವಸಿಷ್ಠ ಹೇಳಿಕೊಳ್ಳುತ್ತಾರೆ.

ಪಿ ಆರ್ ಕೆ ಫಿಲ್ಮ್ಸ್ ಮಾಯಾ ಬಜಾರ್ ಚಿತ್ರ ಇವರ ಭಾಗದ ಚಿತ್ರೀಕರಣ ಆಗಿದೆ, ಇನ್ನೂ ಕೆ ಜಿ ಎಫ್ ಚಾಪ್ಟರ್ 2 ಬಗ್ಗೆ ವಸಿಷ್ಠ ಎನ್ ಸಿಂಹ ಏನು ಹೇಳದೇ ತಮ್ಮ ದಾಡಿ ಮೇಲೆ ಕೈ ಆಡಿಸುತ್ತಾರೆ. ದಾಡಿ ಬೆಳೆಯುತ್ತಿದೆ. ಅಂದ ಮೇಲೆ ಇವರ ಪಾತ್ರ ಸಹ ಇರುವುದು ಗ್ಯಾರಂಟಿ. ಏನು ಪಾತ್ರ ಕೆ ಜಿ ಎಫ್ ಚಾಪ್ಟರ್ 2 ಅಲ್ಲಿ ಮುಂದೆ ತಿಳಿಯಲಿದೆ.

Last Updated : Jul 30, 2019, 9:07 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.