ಹೈದರಾಬಾದ್: ಖ್ಯಾತ ತೆಲುಗು ನಟ ನಾಗಾರ್ಜುನ ಅವರಿಗೆ ಸೇರಿದ್ದ ಫಾರ್ಮ್ಹೌಸ್ನಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.
ಫಾರ್ಮ್ಹೌಸ್ ಬಳಿ ಇರುವ ಖಾಲಿ ಜಾಗ ಯಾವ ಬೆಳೆಗೆ ಸೂಕ್ತ ಎನ್ನುವ ವಿಚಾರ ತಿಳಿಯಲು ಒಂದಷ್ಟು ಮಂದಿಯನ್ನು ಹೈದರಾಬಾದ್ ಹೊರವಲಯದ ಶಾದ್ನಗರದ ಪಾಪಿರೆಡ್ಡಿ ಗೂಡದಲ್ಲಿರುವ ಫಾರ್ಮ್ಹೌಸ್ಗೆ ನಟ ನಾಗಾರ್ಜುನ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫಾರ್ಮ್ಹೌಸ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ. ಫಾರ್ಮ್ಹೌಸ್ನ ಕೋಣೆಯೊಂದರಲ್ಲಿ ಶವ ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಈ ಸಂಬಂಧ ಕೇಶಮ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಟ ನಾಗಾರ್ಜುನ ವರ್ಷದ ಹಿಂದೆ ಶಾದ್ನಗರದಲ್ಲಿನ ಪಾಪಿರೆಡ್ಡಿ ಗೂಡದಲ್ಲಿ ನಲ್ವತ್ತು ಎಕರೆ ಪ್ರದೇಶದ ಕೃಷಿಭೂಮಿಯನ್ನು ಖರೀದಿ ಮಾಡಿದ್ದರು.