ಕೊರೊನಾ ಎರಡನೇ ಅಲೆ, ಲಾಕ್‌ಡೌನ್‌ನಿಂದ ಇಡೀ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಹಂತ ಹಂತವಾಗಿ ಲಾಕ್ ಓಪನ್ ಆಗುತ್ತಿದ್ದು ಒಂದೊಂದೇ ಉದ್ಯಮಗಳು ಜೀವ ಪಡೆಯುತ್ತಿವೆ.
ನಟ, ನಿರ್ಮಾಪಕರಾದ ಮಹೇಂದ್ರ ಮುನ್ನೋತ್ ಕೊರೊನಾ ಬಗ್ಗೆ ಎರಡು ಹಾಡುಗಳಲ್ಲಿ ನಟಿಸಿ, ನಿರ್ಮಾಣ ಮಾಡಿದ್ದಾರೆ. ಕೊರೊನಾದಿಂದಾಗಿ ಸೃಷ್ಟಿಯಾಗಿರುವ ಸಂಕಷ್ಟದಲ್ಲಿ ಸಿಲುಕಿದ ಮಾನವ ಸಂಕುಲಕ್ಕೆ ಧೈರ್ಯ, ಸಾಂತ್ವನ ಹೇಳುವಂತ ಗೀತೆ ಇದಾಗಿದೆ.
'ಹೆದರದಿರು ಓ ಮನಸೇ' ಎನ್ನುವ ಈ ಹಾಡಿಗೆ ನಿರ್ದೇಶಕ ಹರಿಹರನ್ ಆ್ಯಕ್ಷನ್ ಕಟ್ ಹೇಳಿದರೆ, ಎ.ಟಿ. ರವೀಶ್ ರವರ ಸಂಗೀತಕ್ಕೆ ರೇವಣ್ಣ ನಾಯಕ್ ಸಾಹಿತ್ಯ ಬರೆದಿದ್ದಾರೆ. ವಿನಾಯಕ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಹಾಡನ್ನು ಸಚಿನ್.ಎಸ್ ನಗರ್ತ ಹಾಡಿದ್ದು, ಸಂಕಲನ ಸಂಯುಕ್ತ ಸ್ಟುಡಿಯೋ ಮುತ್ತುರಾಜ್ ವಿನ್ಯಾಸ ದೇವು , ವರ್ಣಾಲಂಕಾರ ಚೇತನ್ ಲಗ್ಗೆರೆ ಮಾಡಿದ್ದಾರೆ.
ಆನಂದ್ ಸಿನಿಮಾಸ್‌ರವರ ಪೂರ್ವಿಕಾಮೃತ ಕ್ರಿಯೇಷನ್ಸ್ ಅರ್ಪಿಸುವ ಹೆದರದಿರು ಓ ಮನಸೇ ಕೊರೊನಾ ಆಲ್ಬಂ ಸಾಂಗ್ ಅನ್ನು ಕರ್ನಾಟಕ ಚಲನಚಿತ್ರ ಅಧ್ಯಕ್ಷರಾದ ಜಯರಾಜ್ ಹಾಗೂ ಮಾಜಿ ಕಾರ್ಯದರ್ಶಿ ಭಾಮಾ ಹರೀಶ್ ಜೊತೆಗೂಡಿ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕಳೆದ ವರ್ಷ ನಿರ್ಮಿಸಿದ ಆತ್ಮನಿರ್ಭರ ಭಾರತ ಎನ್ನುವ ಗೀತೆಯನ್ನು ಸಿದ್ದಪಡಿಸಿದ್ದು, ಅದನ್ನೂ ಕೂಡ ಬಿಡುಗಡೆಗೊಳಿಸಿದರು. ಗಜೇಂದ್ರ ನಿರ್ದೇಶನದಲ್ಲಿ ಹಾಗೂ ವಿಜಯಕೃಷ್ಣ ಸಂಗೀತದಲ್ಲಿ ಈ ಗೀತೆ ಮೂಡಿಬಂದಿದೆ.