ಸಾಮಾನ್ಯವಾಗಿ ಹೀರೋಗಳು ಕುದುರೆ ಮೇಲೇರಿ, ವಿಲನ್ಗಳನ್ನು ಚೇಸ್ ಮಾಡಿ ಫೈಟ್ ಮಾಡುತ್ತಾರೆ. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್, ಒಂಟೆ ಮೇಲೆ ರೈಡ್ ಮಾಡಿ ವಿಲನ್ಗಳೊಂದಿಗೆ ಫೈಟ್ ಮಾಡಿದ್ದಾರೆ. ಈ ಫೋಟೋಗಳು ರಿವೀಲ್ ಆಗಿದ್ದು, ಕುತೂಹಲ ಮೂಡಿಸಿವೆ.
![Vikram](https://etvbharatimages.akamaized.net/etvbharat/prod-images/5556181_trivik.jpg)
ವಿಕ್ರಮ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ತ್ರಿವಿಕ್ರಮ' ಸಿನಿಮಾ ಫಸ್ಟ್ಲುಕ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡ್ತಿದೆ. ಸದ್ಯಕ್ಕೆ ಸಿನಿಮಾ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯುತ್ತಿದ್ದು ವಿಕ್ರಮ್ ಒಂಟೆ ಮೇಲೆ ಕುಳಿತು ಥ್ರಿಲ್ಲಿಂಗ್ ಫೈಟ್ ಮಾಡುತ್ತಿರುವ ದೃಶ್ಯವನ್ನು ನಿರ್ದೇಶಕ ಸಹನಾಮೂರ್ತಿ ಚಿತ್ರೀಕರಿಸಿಕೊಂಡಿದ್ದಾರೆ. ಮರಳುಗಾಡಿನಲ್ಲಿ ಒಂಟೆಗಳನ್ನು ಬಳಸಿಕೊಂಡು ಚೇಸಿಂಗ್ ಸೀನ್ ಮಾಡಲಾಗುತ್ತಿದ್ದು, ಸೈರಾ, ದಬಾಂಗ್, ಬಾಡಿಗಾರ್ಡ್, ಪೋಕಿರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಿ ಮಾಸ್ಟರ್ ಈ ಆ್ಯಕ್ಷನ್ ಸನ್ನಿವೇಶವನ್ನು ಕಂಪೋಸ್ ಮಾಡಿದ್ದಾರೆ.
![Trivikrama shooting](https://etvbharatimages.akamaized.net/etvbharat/prod-images/kn-bng-01-threevikram-movieyale-vikram-fight-scene-photos-7204735_31122019153425_3112f_1577786665_439.jpg)
ಒಂಟೆ ಮೇಲೆ ರೈಡ್ ಮಾಡುತ್ತಾ ಫೈಟ್ ಮಾಡಲು, ವಿಕ್ರಮ್ ಗಂಟೆಗಟ್ಟಲೆ ಅಭ್ಯಾಸ ಮಾಡಿ ನಂತರ ಈ ಸಾಹಸ ದೃಶ್ಯದಲ್ಲಿ ಭಾಗವಹಿಸಿದ್ದಾರೆ. ಈ ದೃಶ್ಯಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಸುಮಾರು 15 ದಿನಗಳ ಕಾಲ ರಾಜಸ್ಥಾನದಲ್ಲಿ ಬೀಡುಬಿಟ್ಟಿದೆ. ಇನ್ನು ವಿಕ್ರಮ್ ಜೊತೆ ನಟಿ ಆಕಾಂಕ್ಷಾ ಶರ್ಮಾ ರೊಮ್ಯಾನ್ಸ್ ಮಾಡಿದ್ದಾರೆ. ಹಾಸ್ಯ ನಟ ಸಾಧು ಕೋಕಿಲ, ಬಾಲಿವುಡ್ ಖ್ಯಾತ ನಟ ರೋಹಿತ್ ರಾಯ್ ಸೇರಿದಂತೆ ಇಡೀ ಚಿತ್ರತಂಡ ರಾಜಸ್ಥಾನದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದೆ. ರೋಜ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಸಹನಾಮೂರ್ತಿ, ಈ ತ್ರಿವಿಕ್ರಮ ಸಿನಿಮಾದ ಸೂತ್ರಧಾರ. ಉದ್ಯಮಿ ಸೋಮಣ್ಣ, ತ್ರಿವಿಕ್ರಮ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.