ETV Bharat / sitara

ಸುಮಲತಾ ಅಂಬರೀಶ್​​ v/s ನಿಖಿಲ್​​ ಕುಮಾರಸ್ವಾಮಿ: ಸ್ಯಾಂಡಲ್​​​​ವುಡ್​​ ಬೆಂಬಲ ಯಾರಿಗೆ?

ಸುಮಲತಾ ಅಂಬರೀಶ್​ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಈ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ಇಬ್ಬರಲ್ಲಿ ಸ್ಯಾಂಡಲ್​ವುಡ್ ಯಾರನ್ನು ಬೆಂಬಲಿಸುವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

author img

By

Published : Mar 6, 2019, 12:00 PM IST

ಸುಮಲತಾ, ನಿಖಿಲ್​

ಬೆಂಗಳೂರು: ಇಡೀ ರಾಜ್ಯದ ಕಣ್ಣು ಈ ಬಾರಿ ಮಂಡ್ಯ ಲೋಕಸಭೆ ಚುನಾವಣೆ ಮೇಲೆ ಬಿದ್ದಿದೆ. ರಾಜಕಾರಣ ಮತ್ತು ಸಿನಿಮಾ ಕ್ಷೇತ್ರದಲ್ಲಿ ಪಳಗಿರುವ ಕುಟುಂಬದವರು ಈ ಬಾರಿ ಈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದೇ ಈ ಕುತೂಹಲಕ್ಕೆ ಕಾರಣ.

ಹಿರಿಯ ನಟಿ ಸುಮಲತಾ ದಶಕಗಳ ಕಾಲ ಕನ್ನಡ, ತೆಲುಗು, ತಮಿಳು ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ ಖ್ಯಾತಿ ಹೊಂದಿದವರು. ಜೊತೆಗೆ ರಾಜಕಾರಣಿಯಾಗಿ, ಸಂಸದರಾಗಿ, ಸಚಿವರಾಗಿ, ಕಲಾವಿದರಾಗಿ ಹೆಸರು ಮಾಡಿರುವ ಅಂಬರೀಶ್​​​​ ಕುಟುಂಬದ ಹಿನ್ನೆಲೆ ಇದೆ. ಮತ್ತೊಂದು ಕಡೆ ಇಡೀ ಕುಟುಂಬ ರಾಜಕೀಯ ಹಿನ್ನೆಲೆಯಲ್ಲಿ ಇರುವ ನಿಖಿಲ್, ಕೆಲವು ವರ್ಷಗಳಿಂದೀಚೆಗೆ ಸ್ಯಾಂಡಲ್​​​​​​​ವುಡ್​​​​​​ಗೆ ಎಂಟ್ರಿ ಕೊಟ್ಟಿದ್ದಾರೆ. ಒಬ್ಬರು ಹಿರಿಯ ನಟಿ, ಮತ್ತೊಬ್ಬರು ಕಿರಿಯ ನಟ. ಹೀಗಾಗಿ, ಸ್ಯಾಂಡಲ್​​​​​​​​​​​​​​​ವುಡ್ ಇವರಿಬ್ಬರಲ್ಲಿ ಯಾರಿಗೆ ಸಾಥ್ ನೀಡುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸುಮಲತಾ ಬಿಜೆಪಿ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಇವರಿಬ್ಬರ ಸ್ಪರ್ಧೆಯಿಂದ ಸದ್ಯ ಸ್ಯಾಂಡಲ್‍ವುಡ್ ಗೊಂದಲದಲ್ಲಿದೆ. ಕಾರಣ, ಹಿರಿಯ ನಟ ಅಂಬರೀಶ್ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಿನಿಮಾ ರಂಗದಲ್ಲಿ ಏನೇ ಸಮಸ್ಯೆ, ಜಗಳ, ವಿವಾದವಿದ್ದರೂ ಅಂಬರೀಶ್ ಪರಿಹರಿಸುತ್ತಿದ್ದರು. ಜೊತೆಗೆ ಸ್ಯಾಂಡಲ್​​​​​​​​​​​ವುಡ್ ಕನಸಿನ ಕೂಸು ಕಲಾವಿದರ ಸಂಘ ನಿರ್ಮಾಣ ಕಾರ್ಯದಲ್ಲಿ ಅಂಬರೀಶ್ ಪಾಲು ಹೆಚ್ಚಾಗಿದೆ.

ಇನ್ನು ಸ್ಯಾಂಡಲ್​​ವುಡ್​​ನಲ್ಲಿ ಈಗ ತಾನೇ ಬೆಳೆಯುತ್ತಿರುವ ನಿಖಿಲ್ ಕುಮಾರಸ್ವಾಮಿಗೂ ಚಿತ್ರರಂಗದಲ್ಲಿ ಆತ್ಮೀಯರು ಹಾಗೂ ಸ್ನೇಹಿತರ ಬಳಗಕ್ಕೇನೂ ಕೊರತೆ ಇಲ್ಲ. ಜೊತೆಗೆ ಇವರ ತಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜಕೀಯದೊಂದಿಗೆ ಸಿನಿಮಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರಿಂದ ಅವರಿಗೂ ಸಾಕಷ್ಟು ಮಂದಿ ಕಲಾವಿದರು ಪರಿಚಯ ಇದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಒಲವಿದೆ. ಚಿತ್ರರಂಗಕ್ಕೆ ಏನಾದರೂ ಮಾಡಬೇಕು ಎಂಬ ಕಾಳಜಿ ಇದೆ.

undefined

ಹೀಗಾಗಿ ನಿಖಿಲ್ ಪರ ನಿಲ್ಲಬೇಕೋ ಅಥವಾ ಸುಮಲತಾಗೆ ಸಾಥ್ ಕೊಡಬೇಕೋ ಎಂಬ ಗೊಂದಲಕ್ಕೆ ಸ್ಟಾರ್ ನಟರು ಸಿಲುಕಿದ್ದಾರೆ ಎನ್ನಲಾಗಿದೆ. ತೆಲುಗು ನಟರಾದ ಚಿರಂಜೀವಿ, ಮೋಹನ್​ ಬಾಬು, ತಮಿಳು ನಟ ರಜನಿಕಾಂತ್​ ಅವರು ಸುಮಲತಾ ಅವರಿಗೆ ಪರೋಕ್ಷವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಂಬರೀಶ್​​​​​​​​​​​​​​​​​​​​​​​​​ ಆಪ್ತ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ಅಂಬಿ ನಿಧನರಾದಾಗಿನಿಂದ ಇದುವರೆಗೂ ಅವರ ಕುಟುಂಬಕ್ಕೆ ಸಾಥ್ ನೀಡಿದ್ದಾರೆ. ಆದರೆ, ಬೇರೆ ಯಾವ ನಟರು ಸುಮಲತಾರಿಗೆ ಬೆಂಬಲ ನೀಡುತ್ತಾರೆ ಎಂಬುದು ನಿಗೂಢವಾಗಿದ್ದು, ಲೋಕಸಭೆ ಚುನಾವಣೆವರೆಗೂ ಕಾದು ನೋಡಬೇಕಿದೆ.

Intro:Body:

ಟಾಪ್-18, ರಾಜ್ಯ-19, ಸಿನಿಮಾ

ಸುಮಲತಾ ಅಂಬರೀಶ್​​ v/s ನಿಖಿಲ್​​ ಕುಮಾರಸ್ವಾಮಿ: ಸ್ಯಾಂಡಲ್​​​​ವುಡ್​​ ಬೆಂಬಲ ಯಾರಿಗೆ?

To whom sandalwood give support among Sumalata and Nikhil

Sandalwood, Sumalata ambarish, Nikhil kumarswamy, Mandya constituency, Parliment election, Kannada news paper, ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಲೋಕಸಭಾ ಚುನಾವಣೆ

ಬೆಂಗಳೂರು: ಇಡೀ ರಾಜ್ಯದ ಕಣ್ಣು ಈ ಬಾರಿ ಮಂಡ್ಯ ಲೋಕಸಭೆ ಚುನಾವಣೆ ಮೇಲೆ ಬಿದ್ದಿದೆ. ರಾಜಕಾರಣ ಮತ್ತು ಸಿನಿಮಾ ಕ್ಷೇತ್ರದಲ್ಲಿ ಪಳಗಿರುವ ಕುಟುಂಬದವರು ಈ ಬಾರಿ ಈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದೇ ಈ ಕುತೂಹಲಕ್ಕೆ ಕಾರಣ.

ಹಿರಿಯ ನಟಿ ಸುಮಲತಾ ದಶಕಗಳ ಕಾಲ ಕನ್ನಡ, ತೆಲುಗು, ತಮಿಳು ಸೇರಿದಂತೆ ಪಂಚ ಭಾಷೆಗಳಲ್ಲಿ ನಟಿಸಿ ಖ್ಯಾತಿ ಹೊಂದಿದವರು. ಜೊತೆಗೆ ರಾಜಕಾರಣಿಯಾಗಿ, ಸಂಸದರಾಗಿ, ಸಚಿವರಾಗಿ, ಕಲಾವಿದರಾಗಿ ಹೆಸರು ಮಾಡಿರುವ ಅಂಬರೀಶ್​​​​​​​​​​​ ಕುಟುಂಬದ ಹಿನ್ನೆಲೆ ಇದೆ. ಮತ್ತೊಂದು ಕಡೆ ಇಡೀ ಕುಟುಂಬ ರಾಜಕೀಯ ಹಿನ್ನೆಲೆಯಲ್ಲಿ ಇರುವ ನಿಖಿಲ್, ಕೆಲವು ವರ್ಷಗಳಿಂದೀಚೆಗೆ ಸ್ಯಾಂಡಲ್​​​​​​​ವುಡ್​​​​​​ಗೆ ಎಂಟ್ರಿ ಕೊಟ್ಟಿದ್ದಾರೆ. ಒಬ್ಬರು ಹಿರಿಯ ನಟಿ, ಮತ್ತೊಬ್ಬರು ಕಿರಿಯ ನಟ. ಹೀಗಾಗಿ, ಸ್ಯಾಂಡಲ್​​​​​​​​​​​​​​​ವುಡ್ ಇವರಿಬ್ಬರಲ್ಲಿ ಯಾರಿಗೆ ಸಾಥ್ ನೀಡುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.  

ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸುಮಲತಾ ಬಿಜೆಪಿ ಅಥವಾ ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರ ಸ್ಪರ್ಧೆಯಿಂದ ಸದ್ಯ ಸ್ಯಾಂಡಲ್‍ವುಡ್ ಗೊಂದಲದಲ್ಲಿದೆ. ಕಾರಣ, ಹಿರಿಯ ನಟ ಅಂಬರೀಶ್ ಕನ್ನಡ ಸಿನಿರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಿನಿಮಾ ರಂಗದಲ್ಲಿ ಏನೇ ಸಮಸ್ಯೆ, ಜಗಳ, ವಿವಾದವಿದ್ದರೂ ಅಂಬರೀಶ್ ಪರಿಹರಿಸುತ್ತಿದ್ದರು. ಜೊತೆಗೆ ಸ್ಯಾಂಡಲ್​​​​​​​​​​​ವುಡ್ ಕನಸಿನ ಕೂಸು ಕಲಾವಿದರ ಸಂಘ ನಿರ್ಮಾಣ ಕಾರ್ಯದಲ್ಲಿ ಅಂಬರೀಶ್ ಪಾಲು ಹೆಚ್ಚಾಗಿದೆ.

ಇನ್ನು ಸ್ಯಾಂಡಲ್​​ವುಡ್​​ನಲ್ಲಿ ಈಗ ತಾನೇ ಬೆಳೆಯುತ್ತಿರುವ ನಿಖಿಲ್ ಕುಮಾರಸ್ವಾಮಿಗೂ ಚಿತ್ರರಂಗದಲ್ಲಿ ಆತ್ಮೀಯರು ಹಾಗೂ ಸ್ನೇಹಿತರ ಬಳಗಕ್ಕೇನೂ ಕೊರತೆ ಇಲ್ಲ. ಜೊತೆಗೆ ಇವರ ತಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜಕೀಯದೊಂದಿಗೆ ಸಿನಿಮಾ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದರಿಂದ ಅವರಿಗೂ ಸಾಕಷ್ಟು ಮಂದಿ ಕಲಾವಿದರು ಪರಿಚಯ ಇದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಒಲವಿದೆ. ಚಿತ್ರರಂಗಕ್ಕೆ ಏನಾದರೂ ಮಾಡಬೇಕು ಎಂಬ ಕಾಳಜಿ ಇದೆ.

ಹೀಗಾಗಿ ನಿಖಿಲ್ ಪರ ನಿಲ್ಲಬೇಕೋ ಅಥವಾ ಸುಮಲತಾಗೆ ಸಾಥ್ ಕೊಡಬೇಕೋ ಎಂಬ ಗೊಂದಲಕ್ಕೆ ಸ್ಟಾರ್ ನಟರು ಸಿಲುಕಿದ್ದಾರೆ ಎನ್ನಲಾಗಿದೆ. ತೆಲುಗು ನಟರಾದ ಚಿರಂಜೀವಿ, ಮೋಹನ್​ ಬಾಬು, ತಮಿಳು ನಟ ರಜನಿಕಾಂತ್​ ಅವರು ಸುಮಲತಾ ಅವರಿಗೆ ಪರೋಕ್ಷವಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಂಬರೀಶ್​​​​​​​​​​​​​​​​​​​​​​​​​ ಆಪ್ತ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ಅಂಬಿ ನಿಧನರಾದಾಗಿನಿಂದ ಇದುವರೆಗೂ ಅವರ ಕುಟುಂಬಕ್ಕೆ ಸಾಥ್ ನೀಡಿದ್ದಾರೆ. ಆದರೆ, ಬೇರೆ ಯಾವ ನಟರು ಸುಮಲತಾರಿಗೆ ಬೆಂಬಲ ನೀಡುತ್ತಾರೆ ಎಂಬುದು ನಿಗೂಢವಾಗಿದ್ದು, ಲೋಕಸಭೆ ಚುನಾವಣೆವರೆಗೂ ಕಾದು ನೋಡಬೇಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.