ETV Bharat / sitara

ಉಪ್ಪಿ ಪ್ರಕಾರ ಒಂದು ಸಿನಿಮಾದ ನಿಜವಾದ ಗೆಲುವು ಯಾವಾಗ ಗೊತ್ತಾ?

author img

By

Published : Jul 1, 2019, 8:32 AM IST

ರಿಯಲ್​ ಸ್ಟಾರ್​​ ಉಪೇಂದ್ರ ಅವರು ತಮ್ಮ ಡೈಲಾಗ್​ಗಳಿಂದಲೇ ಅಭಿಮಾನಿಗಳ ಮನಸ್ಸು ಕದ್ದವರು. ಈಗ ಐ ಲವ್​ ಯು ಸಿನಿಮಾದ ಮೂಲಕ ಭಾರಿ ಸದ್ದು ಮಾಡುತ್ತಿರುವ ಉಪ್ಪಿ, ಒಂದು ಸಿನಿಮಾ ಯಾವಾಗ ಯಶಸ್ಸು ಸಾಧಿಸುತ್ತದೆ ಎಂಬುದರ ಕುರಿತಾಗಿ ಮಾತನಾಡಿದ್ದಾರೆ.

ರಿಯಲ್​ ಸ್ಟಾರ್​​ ಉಪೇಂದ್ರ

ರಿಯಲ್​ ಸ್ಟಾರ್​​ ಉಪೇಂದ್ರ ಅವರು ಕೆಲವು ಭಾರಿ ಕಟು ಸತ್ಯವನ್ನು ತೆರೆದಿಟ್ಟು ಸಂದರ್ಭಗಳು ಇದೆ. 'ಎ' ಸಿನಿಮಾದಿಂದಲೇ ಅವರು ತೆರೆಯ ಮೇಲೂ ಸಹ ಅಂತಹ ಕ್ರಮ ಅನುಸರಿಸಿದ್ದುಂಟು. ಈಗ ‘ಐ ಲವ್ ಯು’ ಸಿನಿಮಾ 25 ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಒಂದು ಸಿನಿಮಾ ಜಯ ಸಾಧಿಸುವುದು ಯಾವಾಗ ಎಂಬುದರ ಕುರಿತು ವಿಮರ್ಶೆ ಮಾಡಿದ್ದಾರೆ.

ಒಂದು ಸಿನಿಮಾ ಗೆಲ್ಲೋದು ಅಂದರೆ ಅದು ಕೇವಲ ನಿರ್ಮಾಪಕ ಮತ್ತು ವಿತರಕ ಗೆಲುವು ಅಷ್ಟೇ ಅಲ್ಲ. ಚಿತ್ರಮಂದಿರ, ಟಿವಿ ರೈಟ್ಸ್​ಗೆ ಹಣ ಕೊಟ್ಟವರು, ಧ್ವನಿ ಸುರುಳಿ ಬಿಡುಗಡೆ ಮಾಡಿದ ಸಂಸ್ಥೆ, ಡಿಜಿಟಲ್ ಹಕ್ಕು ಪಡೆದವರು, ಚಿತ್ರಮಂದಿರದ ಕ್ಯಾಂಟೀನ್, ಸೈಕಲ್ ಸ್ಟಾಂಡ್, ಬ್ಲಾಕ್ ಅಲ್ಲಿ ಟಿಕೆಟ್ ಮಾರುವವರು ಹೀಗೆ ಯಾರು ಯಾರು ಸಿನಿಮಾಕ್ಕೆ ಕನೆಕ್ಟ್ ಆಗಿರುತ್ತಾರೋ ಅವರೆಲ್ಲರ ಗೆಲುವು ಒಂದು ಸಿನಿಮಾದ ನಿಜವಾದ ಗೆಲುವು ಸಾಧಿಸಿದಂತೆ ಎಂಬುದು ರಿಯಲ್​​ ಸ್ಟಾರ್​ನ ಅಭಿಪ್ರಾಯ.

ಸೂಪರ್ ಹಿಟ್ ಆದ ಸಿನಿಮಾಗಳ ಗಳಿಕೆ ಬಗ್ಗೆ ಲೆಕ್ಕ ಹಾಕುವುದು ಕಷ್ಟ. ಕೆಲವು ಸಿನಿಮಾಗಳಂತೂ ಸಾರ್ವಕಾಲಿಕ. ಈಗೀನ ದಿನಗಳಲ್ಲಿ ಸಿನಿಮಾ ನಿರ್ಮಾಣ ಮಾಡಿ ಅದನ್ನು ಒಳ್ಳೆಯ ಮೊತ್ತಕ್ಕೆ ಸೇಲ್ ಮಾಡಿ ನಿರ್ಮಾಪಕ ಸುಮ್ಮನಾಗಿ ಬಿಡುತ್ತಾನೆ. ಅದು ಎಷ್ಟು ದಿವಸ ಓಡಿತು ಎಂಬುದನ್ನೂ ಸಹ ಲೆಕ್ಕ ಹಾಕ್ಕಕ್ಕೆ ಹೋಗಲ್ಲ. ನಾವು ಮಾಡುವಂತಹ ಸಿನಿಮಾ ಎಲ್ಲರಿಗೂ ಹಣ ತಂದುಕೊಡಬೇಕು. ಅದರಿಂದ ಪ್ರೇಕ್ಷಕರಿಗೆ ಮಜಾ ಸಿಗಬೇಕು. ಆಗ ಮಾತ್ರ ಸಿನಿಮಾದಿಂದ ನಿಜವಾದ ತೃಪ್ತಿ ಸಿಗುತ್ತದೆ ಎನ್ನತ್ತಾರೆ ಉಪ್ಪಿ.

ಐ ಲವ್ ಯು ಸಿನಿಮಾದ ಕಥೆ ಕೇಳಿದಾಗಿನಿಂದ ನಿರ್ದೇಶಕ ಹಾಗೂ ನಿರ್ಮಾಪಕ ಆರ್ .ಚಂದ್ರು ಚಿತ್ರವನ್ನು ಪ್ರೀತಿಸುತ್ತಾ ಬಂದರು. ಅವರ ಪ್ರೀತಿ ಯಾವತ್ತೂ ಮುಕ್ಕಾಗಲಿಲ್ಲ. 25 ದಿವಸ ಆದ ಮೇಲೂ ಅವರ ಪ್ರೀತಿ ‘ಐ ಲವ್ ಯು’ ಸಿನಿಮಾ ಮೇಲೆ ಹಾಗೆ ಇದೆ. ಇದು ಸರಿಯಾದ ಕ್ರಮ. ಇನ್ನೂ ಮುಂದೆ ಆರ್. ಚಂದ್ರು ಅವರು ಇದಕ್ಕಿಂತ ದೊಡ್ಡ ರೀತಿಯ ಸಿನಿಮಾ ಮಾಡುವಂತೆ ಆಗಬೇಕು ಎಂದರು.

ಉಪ್ಪಿ ಹೇಳಿದ ಸತ್ಯ ಏನು ಗೊತ್ತ

ರಿಯಲ್ ಸ್ಟಾರ್ ಉಪೇಂದ್ರ ಕೆಲವು ಭಾರಿ ಕಟು ಸತ್ಯವನ್ನು ತೆರೆದಿಟ್ಟ ಸಂದರ್ಭಗಳು ಇದೆ. ಅವರ ಸಿನಿಮಾ ಇಂದಲೇ ಅವರು ತೆರೆಯ ಮೇಲೂ ಸಹ ಅಂತಹ ಕ್ರಮ ಅನುಸರಿಸಿದರು. ಕಟು ಸತ್ಯ ಬಹಳ ಕಹಿ ಎಂಬುದು ಅವರಿಗೆ ಗೊತ್ತು.

ಈಗ ಐ ಲವ್ ಯು 25 ದಿವಸಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಒಂದು ಸಿನಿಮಾ ಜಯಭೇರಿ ಯಾವಾಗ ಹೊಡೆಯುತ್ತದೆ ಎಂಬುದನ್ನ ವಿಮರ್ಶೆ ಮಾಡಿದ್ದಾರೆ. ಉಪೇಂದ್ರ ಪ್ರಕಾರ ಒಂದು ಸಿನಿಮಾ ಗೆಲ್ಲೋದು ಅಂದರೆ ಅದು ಕೇವಲ ನಿರ್ಮಾಪಕ ಮತ್ತು ವಿತರಕ ಗೆಲುವು ಅಷ್ಟೇ ಅಲ್ಲ – ಚಿತ್ರಮಂದಿರ, ಟಿ ವಿ ರೈಟ್ಸ್ ಹಣ ಕೊಟ್ಟವರು, ಧ್ವನಿ ಸುರುಳಿ ಬಿಡುಗಡೆ ಮಾಡಿದ ಸಂಸ್ಥೆ, ಡಿಜಿಟಲ್ ಹಕ್ಕು ಪಡೆದವರು, ಚಿತ್ರಮಂದಿರದ ಕ್ಯಾಂಟೀನ್, ಸೈಕಲ್ ಸ್ಟಾಂಡ್, ಬ್ಲಾಕ್ ಅಲ್ಲಿ ಟಿಕೆಟ್ ಸೆಲ್ ಮಾಡುವವರು...ಹೀಗೆ ಯಾರ್ಯಾರು ಸಿನಿಮಾಕ್ಕೆ ಕನೆಕ್ಟ್ ಆಗಿರುತ್ತಾರೋ ಅವರೆಲ್ಲರ ಗೆಲುವು ಒಂದು ಸಿನಿಮಾದ ನಿಜವಾದ ಗೆಲುವು. ಅವರ ಪ್ರಕಾರ ಸೂಪರ್ ಹಿಟ್ ಆದ ಸಿನಿಮಾಗಳ ಗಳಿಕೆ ಬಗ್ಗೆ ಲೆಕ್ಕ ಆಗುವುದು ಕಷ್ಟ. ಕೆಲವು ಸಿನಿಮಗಳಂತು ಸಾರ್ವಕಾಲಿಕ.

ಈಗಂತೂ ಸಿನಿಮಾ ನಿರ್ಮಾಣ ಮಾಡಿ ಅದನ್ನು ಒಳ್ಳೆಯ ಮೊತ್ತಕ್ಕೆ ಸೆಲ್ ಮಾಡಿ ನಿರ್ಮಾಪಕ ಆದವನು ಸುಮ್ಮನಾಗಿಬಿಡುತ್ತಾನೆ. ಅದು ಎಷ್ಟು ದಿವಸ ಓಡಿತು ಎಂಬುದನ್ನೂ ಸಹ ಲೆಕ್ಕ ಹಾಕಕ್ಕೆ ಹೋಗಲ್ಲ. ಒಂದು ನಿಜವಾದ ತೃಪ್ತಿ ಸಿನಿಮಾ ಇಂದ ಸಿಗುವುದು ಯಾವಾಗ ಅಂದರೆ ಅಂದು ಎಲ್ಲರಿಗೂ ಹಣ ತಂದುಕೊಡಬೇಕು ಪ್ರೇಕ್ಷಕರಿಗೆ ಸಕ್ಕತ್ ಮಜಾ ಕೊಡಬೇಕು ಎಂಬುದು ಉಪೇಂದ್ರ ಅವರ ಅನಿಸಿಕೆ.

ಐ ಲವ್ ಯು ಸಿನಿಮಾ ಮೊದಲ ದಿವಸ ಕಥೆ ಕೇಳಿದಾಗಿನಿಂದ ನಿರ್ದೇಶಕ ಹಾಗೂ ನಿರ್ಮಾಪಕ ಆರ್ ಚಂದ್ರು ಸಿನಿಮಾವನ್ನು ಪ್ರೀತಿಸುತ್ತಾ ಬಂದರು. ಅವರ ಪ್ರೀತಿ ಯಾವತ್ತೂ ಮುಕ್ಕಾಗಲಿಲ್ಲ. 25 ದಿವಸ ಆದ ಮೇಲೂ ಅವರ ಪ್ರೀತಿ ಐ ಲವ್ ಯು ಸಿನಿಮಾ ಮೇಲೆ ಹಾಗೆ ಇದೆ. ಇದು ಸರಿಯಾದ ಕ್ರಮ. ಇನ್ನೂ ಮುಂದೆ ಆರ್ ಚಂದ್ರು ಅವರು ಇದಕ್ಕಿಂತ ದೊಡ್ಡ ರೀತಿಯ ಸಿನಿಮಾ ಮಾಡುವುದು ಆಗಬೇಕು ಎಂದರು ಉಪೇಂದ್ರ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.