26 ನವೆಂಬರ್ 2008 ರಂದು ಮುಂಬೈ ತಾಜ್ ಹೋಟೆಲ್ನಲ್ಲಿ ಭಯೋತ್ಪಾದಕರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ಯಾರಿಗೆ ತಾನೇ ಮರೆಯಲು ಸಾಧ್ಯ..? ಸಂದೀಪ್ ಅವರನ್ನು, ಅವರ ಈ ಈ ಸಾಹಸವನ್ನು ಜೀವಂತವಾಗಿಡುವ ಪ್ರಯತ್ನವನ್ನು ತೆಲುಗು ಚಿತ್ರರಂಗ ಮಾಡುತ್ತಿದೆ.
- " class="align-text-top noRightClick twitterSection" data="">
ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ಆಧರಿಸಿದ ಸಿನಿಮಾ ತೆಲುಗಿನಲ್ಲಿ ತಯಾರಾಗುತ್ತಿದೆ. 'ಮೇಜರ್' ಚಿತ್ರವನ್ನು ಶಶಿ ಕಿರಣ್ ತಿಕ್ಕ ನಿರ್ದೇಶಿಸುತ್ತಿದ್ದು ಸಂದೀಪ್ ಪಾತ್ರವನ್ನು ಅದ್ವಿಶೇಷ್ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಈ ಚಿತ್ರಕ್ಕೆ ಸಂಬಂಧಿಸಿದ 'ದಿ ಲುಕ್ ಟೆಸ್ಟ್' ಎಂಬ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಂದೀಪ್ ಅವರ ಕಥೆಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದು ಏಕೆ..? ಈ ಸಿನಿಮಾ ಮಾಡಲು ಸಂದೀಪ್ ತಂದೆ ತಾಯಿ ಒಪ್ಪಿದ್ರಾ..? ಎಂಬುದು ಸೇರಿದಂತೆ ಇನ್ನಿತರ ಆಸಕ್ತಿಕರ ವಿಚಾರಗಳನ್ನು ನಾಯಕ ಅದ್ವಿಶೇಷ್ ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಸಂದೀಪ್ ಉನ್ನಿ ಕೃಷ್ಣನ್ಅವರು ಮಲಯಾಳಿ ಕುಟುಂಬಕ್ಕೆ ಸೇರಿದವರಾದರೂ ಬೆಂಗಳೂರಿನಲ್ಲಿ ನೆಲೆಸಿದ್ದರು.
ಯಾವುದೇ ಕೆಲಸ ಮಾಡಲು ನಂಬಿಕೆ, ನಿಜಾಯಿತಿ ಬೇಕು, ಇದೇ ಮೇಜರ್ ಸಂದೀಪ್ ಸಿದ್ಧಾಂತ. ನಾನೂ ಕೂಡಾ ಇದೇ ಸಿದ್ಧಾಂತವನ್ನು ಅನುಸರಿಸಿ ಈ ಸಿನಿಮಾವನ್ನು ಆರಂಭಿಸಿದೆ. ಅವರ ಹಾಗೂ ನನ್ನ ಅರ್ಧ ಮುಖವನ್ನು ಒಂದೇ ಫ್ರೇಮ್ನಲ್ಲಿ ತೋರಿಸಿರುವ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು ಡಿಸೆಂಬರ್ 17 ರಂದು ಫಸ್ಟ್ಲುಕ್ ಬಿಡುಗಡೆ ಆಗುತ್ತಿದೆ ಎಂದು ಅದ್ವಿಶೇಷ್ ಹೇಳಿದ್ದಾರೆ. ಸೋನಿ ಪಿಕ್ಚರ್ಸ್, ಜಿಎಂಬಿ ಎಂಟರ್ಟೈನ್ಮೆಂಟ್, ಎಪ್ಲಸ್ಎಸ್ ಮೂವೀಸ್ ಸಂಸ್ಥೆ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿವೆ.ಚಿತ್ರಕ್ಕೆ ಶ್ರೀ ಚರಣ್ ಪೊಕಾಲ ಸಂಗೀತ ನಿರ್ದೇಶಿಸುತ್ತಿದ್ದಾರೆ.