ಅನೂಪ್ ಬಂಡಾರಿ ಸಾರಥ್ಯದಲ್ಲಿ, ಕಿಚ್ಚ ಸುದೀಪ್ ಲೀಡ್ ರೋಲ್ನಲ್ಲಿ ನಟಿಸುತ್ತಿರುವ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದೆ. ಹೈದ್ರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಫ್ಯಾಂಟಮ್ ಲೋಕವನ್ನೇ ಸೃಷ್ಟಿಸಿರುವ ಚಿತ್ರತಂಡ ಭರ್ಜರಿಯಾಗಿ ಶೂಟಿಂಗ್ ಮಾಡುತ್ತಿದೆ.
ವಿಕ್ರಾಂತ್ ರೋಣಾ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಶ್ರದ್ಧಾ ಶ್ರೀನಾಥ್ ಲೀಡ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಇದೀಗ ಚಿತ್ರೀಕರಣದ ಕೊನೆಯ ಹಂತ ಹಾಗೂ ಸವಾಲಿನ ಹಂತಕ್ಕೆ ಚಿತ್ರತಂಡ ತಲುಪಿದ್ದು, ಈ ಬಗ್ಗೆ ಚಿತ್ರದ ನಾಯಕ ಸುದೀಪ್ ಟ್ವೀಟ್ ಮಾಡಿದ್ದಾರೆ.
'ಫ್ಯಾಂಟಮ್ ಸಿನಿಮಾದ ಚಿತ್ರೀಕರಣದ ಕೊನೆಯ ಹಂತಕ್ಕೆ ನಾವು ತಲುಪಿದ್ದೇವೆ. ಇದೀಗ ನಾವು ತುಂಬಾ ಸವಾಲಿನ ದೃಶ್ಯ ಚಿತ್ರೀಕರಣ ಮಾಡಬೇಕಿದೆ. ನಾವು ಅಂದುಕೊಂಡಂತೆ ದೃಶ್ಯಗಳನ್ನು ಶೂಟ್ ಮಾಡುವುದು ನಮಗೆ ಮತ್ತೊಂದು ಟಾಸ್ಕ್ ಆಗಿದೆ' ಎಂದು ಬರೆದಿದ್ದಾರೆ.
-
The final part of #Phantom rolling.
— Kichcha Sudeepa (@KicchaSudeep) November 12, 2020 " class="align-text-top noRightClick twitterSection" data="
A very challenging episode,,,, and conceiving it the way we visualized is all together another task.
The last schedule at hyd.#TheWorldOfPhantom #VikranthRona
🥂🤗 pic.twitter.com/kLpkJ4nlbD
">The final part of #Phantom rolling.
— Kichcha Sudeepa (@KicchaSudeep) November 12, 2020
A very challenging episode,,,, and conceiving it the way we visualized is all together another task.
The last schedule at hyd.#TheWorldOfPhantom #VikranthRona
🥂🤗 pic.twitter.com/kLpkJ4nlbDThe final part of #Phantom rolling.
— Kichcha Sudeepa (@KicchaSudeep) November 12, 2020
A very challenging episode,,,, and conceiving it the way we visualized is all together another task.
The last schedule at hyd.#TheWorldOfPhantom #VikranthRona
🥂🤗 pic.twitter.com/kLpkJ4nlbD
ಈ ಟ್ವೀಟ್ ಜೊತೆಯಲ್ಲಿ ಸುದೀಪ್ ಒಂದು ಫೋಟೋವನ್ನು ಹಾಕಿದ್ದಾರೆ. ಫೋಟೋದಲ್ಲಿ ಸುದೀಪ್ ಬೆನ್ನು ತೋರಿಸುತ್ತ ಹಿಂಬದಿಯಲ್ಲಿ ಕುಳಿತಿದ್ದಾರೆ. ಆ ಫೋಟೋ ಬಹುಶಃ ಶೂಟಿಂಗ್ ವೇಳೆಯಲ್ಲಿ ಕ್ಲಿಕ್ಕಿಸಲಾಗಿದೆ.
ಇನ್ನು ಚಿತ್ರದಲ್ಲಿ ನಿರ್ದೇಶಕ ಅನೂಪ್ ಬಂಡಾರಿ ಸಹೋದರ ನಿರೂಪ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.