ಕನ್ನಡ ಚಿತ್ರರಂಗದಲ್ಲಿ ಇಂದು ಕೋಟಿ ಕೋಟಿ ಬಜೆಟ್ ಸಿನಿಮಾಗಳು ನಿರ್ಮಾಣ ಆಗುತ್ತಿವೆ ಅಂದರೆ ಅದಕ್ಕೆ ಮುಖ್ಯ ಕಾರಣ ನಿರ್ಮಾಪಕರು. ಆದರೆ, ಒಂದು ಕಾಲದಲ್ಲಿ ಕನ್ನಡ ನಿರ್ಮಾಪಕರ ಸಂಘ ಫುಟ್‌ಪಾತ್ ಮೇಲೆ ಇತ್ತು ಅಂತಾ ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಹೇಳಿದ್ದಾರೆ.
ಓದಿ : ದಳಪತಿ ವಿಜಯ್ ಹೊಸ ಸಿನಿಮಾ ಘೋಷಣೆ..
ಇಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿ ಭವನದ ಎದುರಿಗೆ ಅತ್ಯಾಧುನಿಕ ನಿರ್ಮಾಪಕ ಸಂಘದ ಕಟ್ಟಡ ಕಟ್ಟಲು ಸಿಎಂ ಯಡಿಯೂರಪ್ಪ ಶಂಕು ಸ್ಥಾಪನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂದೇಶ್ ನಾಗರಾಜ್, ಒಂದು ಕಾಲದಲ್ಲಿ ನಿರ್ಮಾಪಕರ ಸಂಘ ಗಾಂಧಿನಗರದ ರಸ್ತೆ ಮೇಲೆ ಇತ್ತು. ಆಗ ನಾನು ನಿರ್ಮಾಪಕರ ಸಂಘದ ಅಧ್ಯಕ್ಷನಾಗುವ ಪರಿಸ್ಥಿತಿ ಹೇಗೆ ಬಂತು ಅಂತಾ ಈ ವೇಳೆ ಹಂಚಿಕೊಂಡಿದ್ದಾರೆ.
ರಾಜ್‌ಕುಮಾರ್ ಹೇಳಿದ ಹಾಗೇ ನಿರ್ಮಾಪಕರನ್ನ ಅನ್ನದಾತರು ಅಂತಾ ಕರೆಯುತ್ತಿದ್ದರು. ಆದರೆ, ಈಗ ಈ ಮನೋಭಾವ ಇಲ್ಲವಾಗಿದೆ ಎಂದರು. ನಿರ್ಮಾಪಕರಿಗಾಗಿ ಕಟ್ಟಡ ನಿರ್ಮಾಣವಾಗುತ್ತಿರುವುದಕ್ಕೆ ಪ್ರೊಡ್ಯುಸರ್ ಸಂದೇಶ್ ನಾಗರಾಜ್ ಸಂತೋಷ ವ್ಯಕ್ತಪಡಿಸಿದ್ದಾರೆ.