ಇಂದು ದೀಪಾವಳಿ ಹಬ್ಬವಿದ್ದು ಹಲವು ಹೊಸ ಹೊಸ ಕೆಲಸಗಳು ಶುರುವಾಗಿವೆ. ಚಿತ್ರರಂಗದಲ್ಲಿಯೂ ಹಲವು ಹೊಸ ಸಿನಿಮಾಗಳು ಶುರುವಾಗಿವೆ. ಇನ್ನು ಕೆಲವು ಚಿತ್ರಗಳ ಪೋಸ್ಟರ್ ಮತ್ತು ಟೀಸರ್ಗಳು ಬೆಳಕಿನ ಹಬ್ಬದ ಸಂಭ್ರಮದ ನಡುವೆ ಬಿಡುಗಡೆಯಾಗಿವೆ. ಇದೇ ಹಿನ್ನೆಲೆಯಲ್ಲಿ ತಮಿಳಿನ ಮಾಸ್ಟರ್ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.
ತಮಿಳಿನ ದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ಬಹುನಿರೀಕ್ಷಿತ ‘ಮಾಸ್ಟರ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನದಲ್ಲಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಮಾಸ್ಟರ್ ಸಿನಿಮಾದ ಚಿತ್ರೀಕರಣ 2019 ರಲ್ಲೇ ಶುರುವಾಗಿತ್ತು. ಹಲವು ಕಾರಣಗಳು ಮತ್ತು ಕೊರೊನಾದಿಂದಾಗಿ ಚಿತ್ರೀಕರಣ ಕೊಂಚ ತಡವಾಗಿದೆ. ಚಿತ್ರೀಕರಣವನ್ನು ಶಿವಮೊಗ್ಗ, ತಮಿಳುನಾಡು ಸೇರಿದಂತೆ ಹಲವೆಡೆ ಶೂಟ್ ಮಾಡಲಾಗಿದೆಯಂತೆ. ಇನ್ನು ಎಲ್ಲಾ ಸರಿ ಇದ್ದಿದ್ದರೆ ಕಳೆದ ಏಪ್ರಿಲ್ನಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದ್ರೆ ಕೊರೊನಾ ಕಾರಣ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.
ಚಿತ್ರದಲ್ಲಿ ಇಳಯ ದಳಪತಿ ಕಾಲೇಜು ಪ್ರಾಧ್ಯಾಪಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಲನ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಇನ್ನು ನಾಯಕಿಯಾಗಿ ಮಾಳವಿಕಾ ಮೋಹನನ್ ನಟಿಸಿದ್ದು, ಆಂಡ್ರಿಯಾ ಜೆರೆಮಿಯಾ, ಅರ್ಜುನ್ ದಾಸ್, ಶಾಂತನು ಭಾಗ್ಯರಾಜ್ ಮೊದಲಾದವರು ಅಭಿನಯಿಸಿದ್ದಾರೆ.
- " class="align-text-top noRightClick twitterSection" data="">