"ನಮ್ಮ ಏರಿಯಾದಲ್ಲಿ ಒಂದು ದಿನ," ಹಾಗೂ "ಹುಲಿರಾಯ"ಗಳಂತಹ ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿದ್ದ, ಕಿರುತೆರೆ ಯಶಸ್ವಿ ನಿರ್ದೇಶಕರಲ್ಲೊಬ್ಬರಾದ ಅರವಿಂದ್ ಕೌಶಿಕ್ ನಿರ್ದೇಶನದ ಡಿಫರೆಂಟ್ ಟೈಟಲ್ ಹೊಂದಿರುವ "ಶಾರ್ದೂಲ" ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ನಟ-ನಿರ್ದೇಶಕ ರಿಷಭ್ ಶೆಟ್ಟಿ ಆಗಮಿಸಿ ಚಿತ್ರದ ಟೀಸರ್ ಲಾಂಚ್ ಮಾಡಿದರು. ನಟ ರಿಷಭ್ ಶೆಟ್ಟಿ ಚಿತ್ರರಂಗಕ್ಕೆ ಬರುವ ಮುಂಚೆ ನಿರ್ದೇಶಕ ಅರವಿಂದ್ ಕೌಶಿಕ್ ಅವರ ಜೊತೆ ಸೀರಿಯಲ್ನಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ದಿನಗಳನ್ನು ನೆನೆದರು. ಅರವಿಂದ್ ಕೌಶಿಕ್ ಅವರು ಕ್ರಿಯಾಶೀಲ ನಿರ್ದೇಶಕರು. ಈ ಚಿತ್ರ ಅವರಿಗೆ ಒಂದೊಳ್ಳೆ ಸಕ್ಸಸ್ ತಂದು ಕೊಡಲಿ ಎಂದು ಶುಭ ಹಾರೈಸಿದರು.
ಇನ್ನು ಶಾರ್ದೂಲ ಚಿತ್ರವು ಒಂದು ಪ್ರಾಣಿಯ ಹೆಸರಾಗಿದ್ದು, ಶಾರ್ದುಲ ಎಂಬುದು ಚಿತ್ರದಲ್ಲಿ ಹುಲಿ ಅಥವಾ ದೆವ್ವ ಎಂಬ ಕನ್ಫ್ಯೂಷನ್ನಲ್ಲಿ ಚಿತ್ರದ ಕಥೆ ಸಾಗಲಿದೆಯಂತೆ. ಅಲ್ಲದೆ ಚಿತ್ರಕ್ಕೆ ಅಡಿಬರಹವಾಗಿ ದೆವ್ವ ಇರಬಹುದಾ ಎಂಬ ಕುತೂಹಲಕಾರಿ ಟ್ಯಾಗ್ ಲೈನ್ ಕೊಟ್ಟಿದ್ದು, ಚಿತ್ರದ ಮೇಲಿನ ಕುತೂಹಲ ಜಾಸ್ತಿಯಾಗಿಸಿದೆ. ಇನ್ನು ಶಾರ್ದೂಲ ಚಿತ್ರ ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ನಟ, ನಿರ್ದೇಶಕ ರವಿತೇಜ, ನಾಗಚೈತನ್ಯ ಹಾಗೂ ಬಿಗ್ಬಾಸ್ ಖ್ಯಾತಿಯ ಕೃತಿಕಾ ರವೀಂದ್ರ ಲೀಡ್ ರೋಲ್ನಲ್ಲಿ ಕಾಣಿಸಿದ್ದಾರೆ.
ಚಿತ್ರದ ಟೀಸರ್ ಬಹಳ ಕುತೂಹಲಕಾರಿಯಾಗಿದ್ದು, ಟ್ರಾವೆಲಿಂಗ್ನಲ್ಲಿರುವ ನಾಲ್ಕು ಸ್ನೇಹಿತರು ಅನುಭವಿಸುವ ಕೆಲವು ಯಾತನೆಗಳು, ಅವರಲ್ಲಿ ಭಯದ ವಾತಾವರಣ ನಿರ್ಮಿಸಿ ಇದು ದೆವ್ವದ ಕಾಟ ಚಿತ್ರದ ತಿರುಳಾಗಿದ್ದು, ತುಂಬಾ ಕುತೂಹಲ ಹುಟ್ಟಿಸಿದೆ. ಅಲ್ಲದೆ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ಅದ್ಭುತವಾಗಿ ನಟಿಸಿದ್ದು, ಶಾರ್ದೂಲ ಚಿತ್ರ ಖಂಡಿತಾ ಜನರಿಗೆ ಇಷ್ಟವಾಗುತ್ತೆ ಎಂಬುದು ಚಿತ್ರತಂಡದ ಮಾತಾಗಿದೆ.