ಅಭಿಷೇಕ್ ಅಂಬರೀಶ್ ಜೊತೆ 'ಅಮರ್' ಚಿತ್ರದಲ್ಲಿ , ದರ್ಶನ್ ಜೊತೆ 'ಯಜಮಾನ' ಸಿನಿಮಾ ಹಾಗೂ ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಸಿನಿಮಾದಲ್ಲಿ ನಟಿಸಿದ್ದ ತಾನ್ಯ ಹೋಪ್, ನಿಜಕ್ಕೂ ಭರವಸೆ ಮೂಡಿಸುತ್ತಿದ್ದಾರೆ.
ದೂರದ ಇಂಗ್ಲೆಂಡ್ನಲ್ಲಿ ವಿದ್ಯಾಭ್ಯಾಸ ಮಾಡಿ ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ತಾನ್ಯ. ಆಕೆಗೆ ಕನ್ನಡ ಮಾತನಾಡಲು ಕೂಡಾ ಬರುತ್ತದೆ. ಸದ್ಯಕ್ಕೆ ಅವರು ನಟಿಸಿರುವ ಹೊಸ ಕನ್ನಡ ಸಿನಿಮಾ ಹಾಗೂ ತೆಲುಗು ಭಾಷೆಯ ಸಿನಿಮಾ ಎರಡೂ ಜನವರಿ 24 ರಂದು ಬಿಡುಗಡೆಯಾಗುತ್ತಿದೆ. ಚಿರಂಜೀವಿ ಸರ್ಜಾ ಜೊತೆ 'ಖಾಕಿ' ಹಾಗೂ ತೆಲುಗಿನಲ್ಲಿ ರವಿತೇಜ ಜೊತೆ 'ಡಿಸ್ಕೋರಾಜ' ಸಿನಿಮಾಗಳಲ್ಲಿ ಅವರು ನಟಿಸಿದ್ದು ಈ ಸಿನಿಮಾಗಳು ಶೀಘ್ರ ಬಿಡುಗಡೆಯಾಗಲಿವೆ. ಒಂದೇ ದಿನ ಒಬ್ಬರೇ ನಾಯಕಿ ಅಭಿನಯದ ಎರಡು ಭಾಷೆಗಳ ಸಿನಿಮಾಗಳು ಬಿಡುಗಡೆ ಆಗುವುದು ಬಹಳ ಅಪರೂಪ.
‘ಖಾಕಿ’ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಾಣದಲ್ಲಿ ನವಿನ್ ರೆಡ್ಡಿ ನಿರ್ದೇಶಿಸಿದ್ದಾರೆ. ಚಿತ್ರದ ಟ್ರೇಲರ್ ಆಗಲೇ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ಕೂಡಾ ಪಡೆದುಕೊಂಡಿದೆ. ಇನ್ನು ತೆಲುಗಿನ 'ಡಿಸ್ಕೋರಾಜ' ಚಿತ್ರವನ್ನು ರಾಮ್ ತಲ್ಲುರಿ ನಿರ್ಮಿಸಿದ್ದು ವಿ.ಐ. ಆನಂದ್ ನಿರ್ದೇಶಿಸಿದ್ದಾರೆ. ಮೂರು ವರ್ಷಗಳ ವೃತ್ತಿ ಜೀವನದಲ್ಲಿ ತಾನ್ಯ ಹೋಪ್ ಸುಮಾರು 12 ಸಿನಿಮಾಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ.