ಬಾಲಿವುಡ್ನಲ್ಲಿ ಇತ್ತೀಚೆಗೆ ಐತಿಹಾಸಿಕ ಸಿನಿಮಾಗಳ ಭರಾಟೆ ಬಲು ಜೋರಾಗಿದೆ. ಹಲವು ಸಿನಿಮಾಗಳು ಶೂಟಿಂಗ್ ಹಂತದಲ್ಲಿದ್ದರೆ ಇನ್ನು ಕೆಲವು ಸಿನಿಮಾಗಳು ಟ್ರೇಲರ್ ರಿಲೀಸ್ ಮಾಡಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುತ್ತಿವೆ. ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸಿನಿಮಾದ ಟ್ರೇಲರ್ ಹೆಚ್ಚು ಸದ್ದು ಮಾಡಿತ್ತು. ಅಲ್ಲದೆ ಕಳಂಕ್, ಮಣಿಕರ್ಣಿಕ, ಸೈರಾ ಹಾಗೂ ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಿದ ಪಾಣಿಪತ್ ಸಿನಿಮಾಗಳು ಬಾಲಿವುಡ್ ಸಿನಿ ರಂಗದಲ್ಲಿ ಸುದ್ದಿಯಲ್ಲಿವೆ. ಇದೀಗ ಈ ಸಾಲಿನಲ್ಲಿ ನಿಲ್ಲಲು ಅಜಯ್ ದೇವಗನ್ ಅಭಿನಯದ 'ತನ್ಹಾಜಿ' ಸಿನಿಮಾ ಇದೆ.
- " class="align-text-top noRightClick twitterSection" data="
">
ಮರಾಠ ಸೇನಾನಿಯಾದ ತನ್ಹಾಜಿ ಜೀವನಾಧಾರಿತ ಸಿನಿಮಾ ಇದಾಗಿದ್ದು, ತನ್ಹಾಜಿ ಪಾತ್ರದಲ್ಲಿ ಅಜಯ್ ದೇವಗನ್ ಮಿಂಚಿದ್ದಾರೆ. ಈ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಅಜಯ್ ಕೇಸರಿ ತಿಲಕ ಇಟ್ಟು, ಉಗ್ರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಅಜಯ್ ದೇವಗನ್ ಪತ್ನಿ ಕಾಜಲ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದಲ್ಲಿ ಅಜಯ್ ಜೊತೆ ಯುದ್ಧದಲ್ಲಿ ಭಾಗಿಯಾಗುತ್ತಾರಂತೆ. ಈ ಪೋಸ್ಟರ್ ರಿಲೀಸ್ ಮಾಡಿರುವ ಕಾಜಲ್, ಮರಾಠರ ವೀರ ಯೋಧ ತನ್ಹಾಜಿ. ಈ ಚಿತ್ರ 2020ರ ಜನವರಿ 10ರಂದು ರಿಲೀಸ್ ಆಗಲಿದೆ ಎಂದು ಬರೆದುಕೊಂಡಿದ್ದಾರೆ,
ಸಿನಿಮಾಕ್ಕೆ ಓಂ ರಾವತ್ ನಿರ್ದೇಶನವಿದ್ದು, ಭೂಷಣ್ ಕುಮಾರ್ ಮತ್ತು ಕ್ರಿಷನ್ ಕುಮಾರ್ ಬಂಡವಾಳ ಹಾಕಿದ್ದಾರೆ. ಇನ್ನು ಸಿನಿಮಾದ ಒಂದು ವಿಶೇಷತೆ ಏನಂದ್ರೆ ಬರೋಬ್ಬರಿ 12 ವರ್ಷಗಳ ನಂತ್ರ ಸೈಫ್ ಅಲಿ ಖಾನ್, ಅಜಯ್ ದೇವಗನ್ ಜೊತೆ ಅಭಿನಯ ಮಾಡುತ್ತಿದ್ದಾರೆ. ಸೈಫ್ ಅಲಿ ಖಾನ್ ಈ ಸಿನಿಮಾದಲ್ಲಿ ರಜಪೂತರ ಅಧಿಕಾರಿ ಉದಯ್ ಭಾನ್ ಪಾತ್ರದಲ್ಲಿ ಮಿಂಚಲಿದ್ದಾರೆ.