ಕನ್ನಡ ಚಿತ್ರರಂಗದಲ್ಲಿ ಎನರ್ಜಿಟಿಕ್ ಹೀರೋ ಎಂದರೆ ಎಲ್ಲರ ಕಣ್ಣಮುಂದೆ ಬರುವುದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್. ಸದ್ಯ ಭಜರಂಗಿ - 2 ಸಿನಿಮಾ ಶೂಟಿಂಗ್ನಲ್ಲಿರುವ ಸೆಂಚುರಿ ಸ್ಟಾರ್, ಪಕ್ಕಾ ಮಾಸ್ ಟೈಟಲ್ ಹೊಂದಿರುವ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ.
![Director Ravi urs](https://etvbharatimages.akamaized.net/etvbharat/prod-images/5650741_ravi.jpg)
ಶಿವಣ್ಣ ಅವರ ಹೊಸ ಚಿತ್ರಕ್ಕೆ ಆರ್ಡಿಎಕ್ಸ್ ಎಂದು ಹೆಸರಿಟ್ಟಿದ್ದು, ರವಿ ಅರಸು ಎಂಬ ತಮಿಳು ನಿರ್ದೇಶಕ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತಮಿಳಿನಲ್ಲಿ 'ಈಟಿ' ಎನ್ನುವ ಹಿಟ್ ಸಿನಿಮಾವನ್ನು ಕೊಟ್ಟಿರುವ ರವಿ ಅರಸು ಆರ್ಡಿಎಕ್ಸ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಿವರಾಜ್ ಕುಮಾರ್ ನಟಿಸಿರುವ ಮಫ್ತಿ, ಟಗರು ಸಿನಿಮಾಗಳನ್ನು ನೋಡಿರುವ ನಿರ್ದೇಶಕ ರವಿ ಅರಸು, ಶಿವಣ್ಣ ಮ್ಯಾನರಿಸಂಗೆ ತಕ್ಕಂತೆ, ಕಥೆ ಮಾಡಿದ್ದಾರಂತೆ. ಈ ಕಥೆಗೆ ಹ್ಯಾಟ್ರಿಕ್ ಹೀರೋ ಕೂಡಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. 1986ರಲ್ಲಿ ತೆರೆಕಂಡಿದ್ದ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುಮಲತಾ ಅಭಿನಯದ 'ಸತ್ಯಜ್ಯೋತಿ' ಚಿತ್ರವನ್ನು ನಿರ್ಮಿಸಿದ್ದ ತ್ಯಾಗರಾಜನ್ ಅವರ ಸತ್ಯಜ್ಯೋತಿ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ.
![Shivanna](https://etvbharatimages.akamaized.net/etvbharat/prod-images/5650741_shivanna.jpg)
ತಮಿಳಿನಲ್ಲಿ ಬಹುದೊಡ್ಡ ಹೆಸರು ಮಾಡಿರುವ ನಿರ್ಮಾಣ ಸಂಸ್ಥೆ 'ಸತ್ಯಜ್ಯೋತಿ' ಬ್ಯಾನರ್ನಲ್ಲಿ, ಇತ್ತೀಚೆಗೆ ಅಜಿತ್ ಅಭಿನಯದ ವಿವೇಗಂ, ವಿಶ್ವಾಸಂ ಮತ್ತು ಧನುಷ್ ಅಭಿನಯದ ಪಟಾಸ್ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಇದೀಗ ಶಿವರಾಜ್ ಕುಮಾರ್ ಸಿನಿಮಾವನ್ನು ನಿರ್ಮಿಸುವ ಮೂಲಕ, ಈ ಸಂಸ್ಥೆ ಮತ್ತೆ ಕನ್ನಡದ ಕಡೆ ಮುಖ ಮಾಡಿದೆ . ಫೆಬ್ರವರಿ 19 ರಂದು ಆರ್ಡಿಎಕ್ಸ್ ಸಿನಿಮಾ ಮುಹೂರ್ತಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿದೆ. ಶಿವಣ್ಣನ ಮೊದಲ ಸಿನಿಮಾ 'ಆನಂದ್' ಕೂಡಾ ಫೆಬ್ರವರಿ 19 ರಂದೇ ಮುಹೂರ್ತ ಆಚರಿಸಿತ್ತು. ಕಾಕತಾಳೀಯ ಎನ್ನುವಂತೆ ಮತ್ತೆ ಅದೇ ದಿನ ಆರ್ಡಿಎಕ್ಸ್ ಆರಂಭಗೊಳ್ಳುತ್ತಿರುವುದು ನಿರ್ಮಾಪಕರಿಗೆ ಮೊದಲ ಹೆಜ್ಜೆಯಲ್ಲೇ ಒಂದು ಬಗೆಯಲ್ಲಿ ಪಾಸಿಟೀವ್ ಫೀಲ್ ತಂದುಕೊಟ್ಟಿದೆ.