ETV Bharat / sitara

ಸೆಂಚುರಿ ಸ್ಟಾರ್ ಭೇಟಿ ಮಾಡಿ ಸನ್ಮಾನ ಮಾಡಿದ ತಮಿಳು ಹಾಸ್ಯನಟ - Yogibabu met Puneet

ಕಳೆದ ವಾರ ಪುನೀತ್ ಅವರನ್ನು ಭೇಟಿ ಮಾಡಿದ್ದ ತಮಿಳು ಹಾಸ್ಯನಟ ಯೋಗಿ ಬಾಬು ಇಂದು ಭಜರಂಗಿ 2 ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

Yogibabu met Shivarajkumar
ಸೆಂಚುರಿ ಸ್ಟಾರ್
author img

By

Published : Aug 20, 2020, 3:26 PM IST

ಕಳೆದ 15 ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ತಮಿಳು ಚಿತ್ರರಂಗದ ಹಾಸ್ಯ ನಟ ಯೋಗಿಬಾಬು ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರನ್ನು ಭೇಟಿ ಆಗಿದ್ದರು. ಇಂದು ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

Yogibabu met Shivarajkumar
ಶಿವಣ್ಣ ಜೊತೆ ಯೋಗಿಬಾಬು

ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಶಿವರಾಜ್ ಕುಮಾರ್ ಬಹು ನಿರೀಕ್ಷಿತ ಚಿತ್ರ ಭಜರಂಗಿ 2 ಚಿತ್ರೀಕರಣ ನಡೆಯುತ್ತಿದೆ. ಈ ಶೂಟಿಂಗ್ ಮಧ್ಯೆ ಹಾಸ್ಯ ನಟ ಯೋಗಿ ಬಾಬು, ಭಜರಂಗಿ 2 ಸಿನಿಮಾ ಅಡ್ಡಾದಲ್ಲಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ, ಸಿನಿಮಾ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಕನ್ನಡ ಚಿತ್ರರಂಗದ ನಾಯಕತ್ವದ ಜವಾಬ್ದಾರಿ ಹೊತ್ತಿರುವ ಸೆಂಚುರಿ ಸ್ಟಾರ್​ ಅವರಿಗೆ ಯೋಗಿ ಬಾಬು ಪೇಟಾ ತೋಡಿಸಿ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಶಿವರಾಜ್ ಕುಮಾರ್ ಕೂಡಾ ಯೋಗಿ ಬಾಬು ಜೊತೆ ತಮಿಳು ಸಿನಿಮಾಗಳ ಕುರಿತು ಮಾತುಕತೆ ನಡೆಸಿದ್ದಾರಂತೆ.

Yogibabu met Shivarajkumar
ಸೆಂಚುರಿ ಸ್ಟಾರ್​​​​​​​​ಗೆ ಸನ್ಮಾನ ಮಾಡಿದ ಯೋಗಿ ಬಾಬು

ಸದ್ಯ ತಮಿಳು ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರಾದ ರಜನಿಕಾಂತ್, ವಿಜಯ್, ಸೂರ್ಯ ಸಿನಿಮಾಗಳಲ್ಲಿ ಯೋಗಿ ಬಾಬು ಇರಲೇಬೇಕು ಎಂಬ ಬ್ರ್ಯಾಂಡ್​​​​​​​​​​​​ ಕ್ರಿಯೇಟ್ ಮಾಡಿದ್ದಾರೆ. ನಯನತಾರ ಜೊತೆ ಕೋಲಮಾವು ಕೋಕಿಲ ಚಿತ್ರದಲ್ಲಿ ಯೋಗಿ ಬಾಬು ನಾಯಕ ನಟನಾಗಿ ಮಿಂಚಿದ್ರು. ಈ ಸಿನಿಮಾ ಯೋಗಿ ಬಾಬುಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.