ಈ ವರ್ಷ ಚಿತ್ರರಂಗ ಅನೇಕ ಕಲಾವಿದರನ್ನು ಕಳೆದುಕೊಂಡಿದೆ. ಮೊನ್ನೆಯಷ್ಟೇ ಬಾಲಿವುಡ್ ನಟಿ ದಿವ್ಯಾ ಭಟ್ನಾಗರ್ ಕೊರೊನಾಗೆ ಬಲಿಯಾಗಿದ್ದರು. ಇಂದು ತಮಿಳು ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳು ಕಿರುತೆರೆ ನಟಿ, ನಿರೂಪಕಿ 28 ವರ್ಷದ ಚಿತ್ರಾ ಹೋಟೆಲ್ನ ತಮ್ಮ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
- " class="align-text-top noRightClick twitterSection" data="
">
ಇದನ್ನೂ ಓದಿ: ಮುಂಬೈನ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಕೊರೊನಾಗೆ ಬಲಿ
'ಪಾಂಡಿಯನ್ ಸ್ಟೋರ್ಸ್' ಎಂಬ ಧಾರಾವಾಹಿ ಮೂಲಕ ಚಿತ್ರ ಖ್ಯಾತರಾಗಿದ್ದರು. ತಮಿಳುನಾಡಿನ ನಜರತ್ಪೇಟ್ ಎಂಬ ಫೈವ್ಸ್ಟಾರ್ ಹೋಟೆಲ್ನಲ್ಲಿ ಚಿತ್ರಾ ತಮ್ಮ ಭಾವಿ ಪತಿ ಹೇಮಂತ್ ಎಂಬುವರೊಂದಿಗೆ ಉಳಿದುಕೊಂಡಿದ್ದರು. ಕೆಲವು ತಿಂಗಳ ಹಿಂದೆ ಹೇಮಂತ್ ಹಾಗೂ ಚಿತ್ರಾಗೆ ನಿಶ್ಚಿತಾರ್ಥ ಆಗಿತ್ತು. ಚಿತ್ರೀಕರಣ ಮುಗಿಸಿ ಬುಧವಾರ ಮುಂಜಾನೆ ಸುಮಾರು 2.30 ವೇಳೆಗೆ ಚಿತ್ರಾ ಹೋಟೆಲ್ ರೂಮ್ಗೆ ಬಂದಿದ್ದಾರೆ. "ಸ್ನಾನಕ್ಕೆ ಹೋಗುವುದಾಗಿ ಹೇಳಿದ ಚಿತ್ರಾ ಬಹಳ ಸಮಯ ಹೊರ ಬರಲಿಲ್ಲ. ಅನುಮಾನ ಬಂದು ಹೋಟೆಲ್ ಸಿಬ್ಬಂದಿಗಳನ್ನು ಕರೆದು ನಕಲಿ ಕೀ ಬಳಸಿ ಹೋಟೆಲ್ ರೂಮ್ ತೆಗೆದು ನೋಡಿದಾಗ ಚಿತ್ರ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು" ಎಂದು ಚಿತ್ರ ಭಾವಿ ಪತಿ ಹೇಮಂತ್ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಚಿತ್ರ ಆತ್ಮಹತ್ಯೆ ವಿಚಾರ ತಿಳಿದ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ನಜರತ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿತ್ರಾ ಮೃತದೇಹವನ್ನು ಪೋಸ್ಟ್ಮಾರ್ಟಂಗೆ ಕಳಿಸಲಾಗಿದೆ. ಕಾಲಿವುಡ್ ಗಣ್ಯರು ಚಿತ್ರಾ ಸಾವಿಗೆ ಕಂಬನಿ ಮಿಡಿದಿದ್ದಾರೆ.
- " class="align-text-top noRightClick twitterSection" data="
">