ಸ್ಯಾಂಡಲ್ವುಡ್ನಲ್ಲಿ ಭಿನ್ನ ವಿಭಿನ್ನ ಹಾಡುಗಳು ಇದೀಗ ಸದ್ದು ಮಾಡುತ್ತಿವೆ. ಈಗಾಗಲೇ ಚಾಲ್ತಿಯಲ್ಲಿರುವ ಹಾಡುಗಳಿಗೆ ಕೊಂಚ ರೂಪು ರೇಷೆ ಕೊಟ್ಟು ಹೊಸದಾಗಿ ಹಾಡುಗಳನ್ನು ರಚನೆ ಮಾಡಲಾಗುತ್ತಿದೆ. ಇಂತಹ ಪ್ರಯತ್ನಕ್ಕೆ 'ಪುಕ್ಸಟ್ಟೆ ಲೈಫು' ತಂಡ ಮುಂದಾಗಿದೆ.
ರಂಗಾಯಣ ರಘು, ಸಂಚಾರಿ ವಿಜಯ್, ಅಚ್ಯುತ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಪುಕ್ಸಟ್ಟೆ ಲೈಫು ಪುರ್ಸೊತ್ತೆ ಇಲ್ಲ ಚಿತ್ರತಂಡ ಸ್ವಾಮಿಯೇ ಅಯ್ಯಪ್ಪ ಎಂಬ ಲಿರಿಕಲ್ ಹಾಡನ್ನು ರಿಲೀಸ್ ಮಾಡಿದೆ.
- " class="align-text-top noRightClick twitterSection" data="">
ಈ ಹಾಡಿನಲ್ಲಿ ಅಯ್ಯಪ್ಪನ ಧ್ಯಾನ ಮಾಡಲಾಗಿದ್ದು, ನಾವು ಕೇಳಿದ್ದನ್ನು ಕೊಡ್ತಾನೆ, ನಾವು ಬೇಡಿದ್ದನ್ನು ಕೊಡ್ತಾನೆ ಅಯ್ಯಪ್ಪ ಎಂಬ ಸಾಲುಗಳಿಗೆ ರ್ಯಾಪ್ ಟಚ್ಕೊಟ್ಟು ಅದ್ಭುತ ಹಾಡನ್ನು ತಯಾರಿಸಲಾಗಿದೆ.
ಇದೀಗ ಯೂಟೂಬ್ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುಕ್ಸಟ್ಟೆ ಲೈಫು ಸಿನಿಮಾಕ್ಕೆ ಅರವಿಂದ್ ಕುಪ್ಲಿಕರ್ ಆ್ಯಕ್ಷನ್ ಕಟ್ ಹೇಳಿದ್ದು, ನಾಗರಾಜ್ ಸೋಮಯಾಲಿ ಬಂಡವಾಳ ಹಾಕಿದ್ದಾರೆ. ನಿನ್ನೆ ರಿಲೀಸ್ ಆಗಿರುವ ಸ್ವಾಮಿಯೇ ಅಯ್ಯಪ್ಪ ಹಾಡಿಗೆ ಆದಿತ್ಯ ಸಾಗರ್ ಮತ್ತು ವಾಸು ದೀಕ್ಷಿತ್ ದನಿಯಾಗಿದ್ದಾರೆ.