ಮುಂಬೈ : ನಟ ಸೂರ್ಯ ಅಭಿನಯದ ‘ಸೂರರೈ ಪೋಟ್ರು’ ಹಿಂದಿ ರಿಮೇಕ್ ಆಗುತ್ತಿದೆ. ಇದನ್ನು ತಮಿಳು ಭಾಷೆಯಲ್ಲಿ ಮೂಲ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಸುಧಾ ಕೊಂಗರಾ ನಿರ್ದೇಶಿಸಲಿದ್ದಾರೆ. ವಿಕ್ರಮ್ ಮಲ್ಹೋತ್ರಾ ನೇತೃತ್ವದ ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಮತ್ತು ಸೂರ್ಯ, ಜ್ಯೋತಿಕಾ ಸದಾನಾ ಮತ್ತು ರಾಜ್‌ಸೇಕರ್ ಪಾಂಡಿಯನ್ ನೇತೃತ್ವದ 2ಡಿ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಮಾಡಲಿದೆ.
ನಟರಾದ ಸೂರ್ಯ ಮತ್ತು ಅಪರ್ಣಾ ಬಾಲಮುರಳಿ ಅವರ ಬ್ಲಾಕ್ಬಾಸ್ಟರ್ ಚಿತ್ರ ಸೂರರೈ ಪೊಟ್ರು ಹಿಂದಿಯಲ್ಲಿ ರಿಮೇಕ್ ಆಗಲಿರುವ ಬಗ್ಗೆ ಇಂದು ಸೂರ್ಯ ತಮ್ಮ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ್ದಾರೆ. ಹಿಂದಿ ಆವೃತ್ತಿಯನ್ನು ಮೂಲ ನಿರ್ದೇಶಕ ಸುಧಾ ಕೊಂಗರಾ ನಿರ್ದೇಶಿಸಲಿದ್ದು, ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಆಫ್ ಶೆರ್ನಿ, ಶಕುಂತಲಾ ದೇವಿ ಮತ್ತು ಏರ್‌ಲಿಫ್ಟ್ ಖ್ಯಾತಿಯ ನಿರ್ಮಾಣ ಸಂಸ್ಥೆಯು ಇದರಲ್ಲಿ ಹಣ ಹೂಡಲಿದೆ.
-
Excited to announce our association with @Abundantia_Ent lead by @vikramix for #SooraraiPottru in Hindi, Directed by #SudhaKongara@CaptGopinath#Jyotika @rajsekarpandian @ShikhaaSharma03 @2D_ENTPVTLTD pic.twitter.com/ECjSpO9OOT
— Suriya Sivakumar (@Suriya_offl) July 12, 2021 " class="align-text-top noRightClick twitterSection" data="
">Excited to announce our association with @Abundantia_Ent lead by @vikramix for #SooraraiPottru in Hindi, Directed by #SudhaKongara@CaptGopinath#Jyotika @rajsekarpandian @ShikhaaSharma03 @2D_ENTPVTLTD pic.twitter.com/ECjSpO9OOT
— Suriya Sivakumar (@Suriya_offl) July 12, 2021Excited to announce our association with @Abundantia_Ent lead by @vikramix for #SooraraiPottru in Hindi, Directed by #SudhaKongara@CaptGopinath#Jyotika @rajsekarpandian @ShikhaaSharma03 @2D_ENTPVTLTD pic.twitter.com/ECjSpO9OOT
— Suriya Sivakumar (@Suriya_offl) July 12, 2021
ಓದಿ: ಕನ್ನಡಿಗ ಕ್ಯಾ.ಗೋಪಿನಾಥ್ ಜೀವನಾಧಾರಿತ ಸಿನಿಮಾ
ಬಾಲಿವುಡ್ ರಿಮೇಕ್ ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಇನ್ನೂ ಘೋಷಿಸಲಾಗಿಲ್ಲ. ಡೆಕ್ಕನ್ ಏರ್ವೇಸ್ ಪ್ರಾರಂಭಿಸಿ ಖ್ಯಾತಿ ಪಡೆದ ಕನ್ನಡಿಗ ಕ್ಯಾ.ಜಿ.ಆರ್.ಗೋಪಿನಾಥ್ ಅವರ ಜೀವನ ಆಧಾರಿತ ಸಿನಿಮಾ, ತಮಿಳಿನಲ್ಲಿ ಸಿಂಗಂ ಖ್ಯಾತಿಯ ಸೂರ್ಯ ಅಭಿನಯದಲ್ಲಿ ತಯಾರಾಗಿದೆ.
ಪ್ರಸ್ತುತ, ಸುಧಾ ಕೊಂಗರಾ ಹಿಂದಿ ಭಾಷೆಯಲ್ಲಿ ಸ್ಕ್ರಿಪ್ಟ್ ಬರೆಯುವ ಕೆಲಸ ಮಾಡುತ್ತಿದ್ದಾರೆ. ನವೆಂಬರ್ 2020ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೇರವಾಗಿ ಬಿಡುಗಡೆಯಾದ ತಮಿಳಿನ ಈ ಚಿತ್ರವು ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರ ಜೀವನದ ಘಟನೆಗಳಿಂದ ಭಾಗಶಃ ಸ್ಫೂರ್ತಿ ಪಡೆದಿದೆ.
ಸೂರರೈ ಪೊಟ್ರು ಹಿಂದಿ ರೂಪಾಂತರವನ್ನು ಎದುರು ನೋಡುತ್ತಿದ್ದೇನೆ ಎಂದು ಸೂರ್ಯಾ ಹೇಳಿದ್ದಾರೆ. ಸೂರರೈ ಪೊಟ್ರು ಅವರ ಮೇಲೆ ಬೀರಿದ ಪ್ರೀತಿ ಮತ್ತು ಮೆಚ್ಚುಗೆ ಅಭೂತಪೂರ್ವವಾಗಿತ್ತು. ಈ ಕಥೆಯನ್ನು ನಾನು ಮೊದಲು ಕೇಳಿದ ನಿಮಿಷದಿಂದ ಇದು ಪ್ಯಾನ್ ಇಂಡಿಯಾ ಚಿತ್ರವಾಗಬೇಕು ಎಂದು ನಾನು ಭಾವಿಸಿದೆ. ಕ್ಯಾಪ್ಟನ್ ಗೋಪಿನಾಥ್ ಅವರ ಸ್ಫೂರ್ತಿದಾಯಕ ಕಥೆಯನ್ನು ಹಿಂದಿಯಲ್ಲಿ ಹೇಳಲು ಹೊರಟಿರುವುದು ಸಂತಸ ತಂದಿದೆ"ಎಂದು ತಿಳಿಸಿದ್ದಾರೆ.