ಮಾದಕ ಸುಂದರಿ, ಪಡ್ಡೆ ಹುಡುಗರ ಹೃದಯದರಸಿ ಸನ್ನಿ ಲಿಯೋನ್ ಭಾರತಕ್ಕೆ ಬರಲು ಇಚ್ಚಿಸಿದ್ದಾರಂತೆ. ಈ ಹಿಂದೆ ತಮ್ಮ ಪತಿ ಡೇನಿಯಲ್ ವೆಬರ್ ಮತ್ತು ಅವರ ಮೂವರು ಮಕ್ಕಳಾದ ನಿಶಾ, ಆಶರ್ ಮತ್ತು ನೋವಾ ಜೊತೆ ಲಾಸ್ ಏಂಜಲಿಸ್ಗೆ ತೆರಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ, ನನಗೆ ಮುಂಬೈ ಬಿಟ್ಟುಹೋಗಲು ಇಷ್ಟವಿರಲಿಲ್ಲ. ಆದ್ರೆ ಡೇನಿಯಲ್ ತಾಯಿ ಮತ್ತು ಅವರ ಕುಟುಂಬಕ್ಕೋಸ್ಕರ ಅಲ್ಲಿಗೆ ತೆರಳಬೇಕಾಯಿತು ಎಂದಿದ್ದಾರೆ. ಅಲ್ಲದೇ ವಿಮಾನ ಹಾರಾಟ ಪ್ರಾರಂಭ ಆದಾಗ, ಆದಷ್ಟು ಬೇಗ ಮುಂಬೈ ಮನೆಗೆ ಬರುವುದಾಗಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಇನ್ನು ಕ್ವಾರಂಟೈನ್ ವೇಳೆಯನ್ನು ಎಂಜಾಯ್ ಮಾಡಿರುವ ಸನ್ನಿ, ಪ್ರಕೃತಿಯ ಜೊತೆ ಕಾಲ ಕಳೆದ ಸಮಯ, ಜಿರಾಫೆಗೆ ಮೇವು ತಿನ್ನಿಸಿದ ಕ್ಷಣಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು.
ಅದೇ ಆಗ್ಲಿ ಸನ್ನಿ ಮತ್ತೆ ಭಾರತಕ್ಕೆ ಬರುತ್ತಿರುವ ವಿಷಯ ಪಡ್ಡೆ ಹುಡುಗರ ಹೃದಯದಲ್ಲಿ ಶಿಳ್ಳೆ ಹೊಡೆಯುವಂತಾಗಿದೆ.