ಪಡ್ಡೆ ಹುಡುಗರ ಮನದನ್ನೆ, ಮಾದಕ ನಟಿ ಸನ್ನಿ ಲಿಯೋನ್ ತಮ್ಮ ಮುಂಬೈ ಮನೆಗೆ ವಾಪಸ್ ಆಗಿದ್ದಾರೆ. ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಮಾಹಿತಿ ತಿಳಿಸಿದ್ದು, ವಿಮಾನದಲ್ಲಿ ಕೂತಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಲಾಸ್ ಏಂಜಲಿಸ್ಗೆ ಹಾರಿದ್ದ ಸನ್ನಿ ಲಿಯೋನ್, ಇದೀಗ ತಮ್ಮ ಮುಂಬೈನ ಮನೆಗೆ ಬಂದಿದ್ದಾರೆ. ಈ ಬಗ್ಗೆ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಆರು ತಿಂಗಳ ನಂತರ ತಮ್ಮ ಮುಂಬೈ ಮನೆಗೆ ಹೋಗುವ ಕಾಲ ಬಂದಿದೆ. ಹೊಸ ಸಾಹಸ ಎಂದು ಬರೆದಿದ್ದಾರೆ.
ಸನ್ನಿ ಶೇರ್ ಮಾಡಿರುವ ಫೋಟೋದಲ್ಲಿ, ನೀಲಿ ಬಣ್ಣದ ಉಡುಪು ಧರಿಸಿ ಅದಕ್ಕೆ ಮ್ಯಾಚಿಂಗ್ ಆಗುವ ಮಾಸ್ಕ್ ಹಾಗೂ ಕನ್ನಡಕ ಹಾಕಿದ್ದಾರೆ. ಸನ್ನಿ ಲಿಯೋನ್ ಆರು ತಿಂಗಳ ಹಿಂದೆ ಪತಿ ಡೇನಿಯಲ್ ವೆಬ್ಬರ್ ಮತ್ತು ಮೂರು ಮಕ್ಕಳೊಂದಿಗೆ ಲಾಸ್ ಏಂಜಲೀಸ್ಗೆ ಹೋಗಿದ್ದರು.