ಸ್ಯಾಂಡಲ್ವುಡ್ ನಟ ಚಿರಂಜೀವಿ ಸರ್ಜಾ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದು ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. 2 ವರ್ಷಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.
ಮೇಘನಾ ಈಗ ಗರ್ಭಿಣಿಯಾಗಿದ್ದು ಮಗುವನ್ನು ಸ್ವಾಗತಿಸುವ ಮುನ್ನವೇ ಚಿರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ದುಃಖ ಚಿರು ಮಾವ ಸುಂದರ್ ರಾಜ್ ಹಾಗೂ ಅತ್ತೆ ಪ್ರಮಿಳಾ ಜೋಷಾಯ್ ಅವರಿಗೆ ಭರಿಸಲಾಗದ ನೋವುಂಟು ಮಾಡಿದೆ. ಇದ್ದ ಒಬ್ಬ ಮಗಳ ಜೀವನ ಅರಳುವ ಮುನ್ನವೇ ಬಾಡಿದೆ. ಮಗನಂತಿದ್ದ ಅಳಿಯನನ್ನು ಕಳೆದುಕೊಂಡಿರುವುದು, ಅವರನ್ನು ತೀವ್ರ ಆಘಾತಕ್ಕೀಡಾಗಿಸಿದೆ. ಅಳಿಯನನ್ನು ಕಳೆದುಕೊಂಡ ದು:ಖದಲ್ಲೇ ಸುಂದರ್ರಾಜ್ ಬಿಕ್ಕಳಿಸಿ ಮಗುವಿನಂತೆ ಕಣ್ಣೀರು ಹಾಕುತ್ತಿದ್ದಾರೆ. ಪ್ರಮಿಳಾ ಜೋಷಾಯ್ ಕೂಡಾ ಮಗಳ ಜೀವನ ಈ ರೀತಿ ಆಯ್ತಲ್ಲಾ ಎಂಬ ನೋವಿನಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಷಾಯ್ ಇಬ್ಬರನ್ನೂ ಆಪ್ತರು ಸಂತೈಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.