ಕನ್ನಡದಲ್ಲಿ ಅನೇಕ ವೈಜ್ಞಾನಿಕ ಸಿನಿಮಾಗಳು ಬಂದಿವೆ. ಅದರಲ್ಲೂ ಡಾ. ಅಶೋಕ್ ಪೈ ಅವರ ಕಥಾ ವಸ್ತುವನ್ನು ಆಧರಿಸಿ ಅನೇಕ ಮನೋ ವೈಜ್ಞಾನಿಕ ಸಿನಿಮಾಗಳು ತೆರೆಗೆ ಬಂದಿವೆ. ಈಗ ದಿನನಿತ್ಯದ ಆರೋಗ್ಯದ ಸಮಸ್ಯೆ ಕುರಿತಾಗಿ 'ಶುಗರ್ಲೆಸ್' ಶೀರ್ಷಿಕೆಯಡಿ ಸಿನಿಮಾವೊಂದು ತಯಾರಾಗುತ್ತಿದೆ.
ಈ ಹಿಂದೆ 'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಶಶಿಧರ್, ಶುಗರ್ಲೆಸ್ ಎಂಬ ಸಿನಿಮಾ ಮಾಡಲು ಸಿದ್ಧರಿದ್ದಾರೆ. ಈ ಚಿತ್ರದೊಂದಿಗೆ ಅವರು ಪ್ರಜ್ವಲ್ ದೇವರಾಜ್ ಅಭಿನಯದ 'ವೀರಂ' ಸಿನಿಮಾವನ್ನು ಕೂಡಾ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ 'ಶುಗರ್ಲೆಸ್' ಚಿತ್ರದ ಫಸ್ಟ್ಲುಕ್ ಕೂಡಾ ಬಿಡುಗಡೆಯಾಗಿದೆ. ವಿಶೇಷ ಎಂದರೆ ಈ ಚಿತ್ರಕ್ಕೆ ನಿರ್ಮಾಫಕ ಶಶಿಧರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್ ವೇಳೆಗೆ ಸಿನಿಮಾ ಸೆಟ್ಟೇರಲಿದೆ.
![sugar less new film](https://etvbharatimages.akamaized.net/etvbharat/prod-images/sugar-less-film-title1597200271994-3_1208email_1597200282_412.jpg)
ಶಶಿಧರ್ ಸದ್ಯಕ್ಕೆ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆಯಲ್ಲಿ ತೊಡಗಿದ್ದಾರೆ. ಸೂಪರ್ ಹಿಟ್ ಚಿತ್ರಗಳ ನಿರ್ಮಾಪಕ ಎಂದೇ ಖ್ಯಾತರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರವನ್ನು ತೆರೆಗೆ ಅರ್ಪಿಸಲಿದ್ದಾರೆ.