ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮಕ್ಕೆ ಸುದೀಪ್ ಮತ್ತಷ್ಟು ಖುಷಿ ಸೇರಿಸಿ ದೊಡ್ಡದಾದ ಸರ್ಪೈಸ್ ಕೊಟ್ಟಿದ್ದಾರೆ. ಪ್ರತಿವರ್ಷ ವಿಶೇಷ ರೀತಿಯಲ್ಲಿ ತಮ್ಮ ಹೆಂಡತಿ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದ ಕಿಚ್ಚ, ಈ ಬಾರಿಯೂ ಸ್ಪೆಷಲ್ ಆಗಿಯೇ ಶುಭ ಕೋರಿದ್ದಾರೆ.
ಪ್ರಿಯಾ ಬರ್ತ್ ಡೇಗೆ ಕಿಚ್ಚ ಹಾಡೊಂದನ್ನು ಸಿದ್ದ ಮಾಡಿ ಗಿಫ್ಟ್ ಮಾಡಿದ್ದಾರೆ. 'ಮಡದಿಯೋ, ಗೆಳತಿಯೋ ಏನೆಂದು ಕರೆಯಲಿ ನಿನ್ನ' ಎನ್ನುವ ಸಾಲುಗಳನ್ನು ರಚಿಸಿ ಹಾಡಿದ್ದಾರೆ.
- " class="align-text-top noRightClick twitterSection" data="">
"ಕವಿ ನಾನಲ್ಲ, ಕವಿತೆ ಅಂತೂ ನನಗೆ ಖಂಡಿತಾ ಗೊತ್ತಿಲ್ಲ. ಕೆಲ ಸಿಂಪಲ್ ವರ್ಡ್‌ನಲ್ಲಿ ಹೇಳ್ತೀನಿ, ಅದ್ರಮೇಲ್ ನಂಗೆ ಗೊತ್ತಿಲ್ಲ.. ''ನಾನು ಹಕ್ಕಿಯಾಗಿ ಹಾರಾಡಿದೆ, ಆದರೆ ನೀನು ಹಾರಲಿಲ್ಲ. ಸದಾ ನನ್ನ ಜೊತೆಯಲ್ಲಿಯೇ ಇದ್ದೆ, ಆಕಾಶದಂತೆ'' ಎಂದು ಮಡದಿ ಪ್ರಿಯಾ ಹುಟ್ಟು ಹಬ್ಬ ಸಂಭ್ರಮವನ್ನ ಈ ಹಾಡಿನ ಮೂಲಕ ಹೆಚ್ಚಿಸಿದ್ದಾರೆ.
ಈ ಹಾಡನ್ನು ಯೂಟ್ಯೂಬ್ನ ಕಿಚ್ಚ ಕ್ರಿಯೇಷನ್ಲ್ಲಿ ಅಪ್‌ಲೌಡ್ ಮಾಡಿದ್ದಾರೆ. ಈ ಹಾಡನ್ನು ಕೇಳಿದ ಸುದೀಪ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು, ಕಿಚ್ಚ ಸುದೀಪ್ ಮತ್ತು ಪ್ರಿಯಾ 2001ರ ಅಕ್ಟೋಬರ್ 18ರಂದು ವಿವಾಹವಾಗಿದ್ದರು.