ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಚೀನಾ ಮೂಲದ ಜನಪ್ರಿಯ ಮೊಬೈಲ್ ಅಪ್ಲಿಕೇಷನ್ ಟಿಕ್ಟಾಕ್ನದ್ದೇ ಸದ್ದು. ಅಲ್ಪಾವಧಿಯಲ್ಲಿ ಡೈಲಾಗ್ ಹಾಗೂ ವಿಡಿಯೋಗಳನ್ನು ಡಬ್ ಮಾಡಿ ಶೇರ್ ಮಾಡುವ ಈ ಆ್ಯಪ್ ಎಲ್ಲಾ ವಯೋಮಾನದವರ ಅಚ್ಚುಮೆಚ್ಚು.
ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಟಿಕ್ಟಾಕ್ನದ್ದೇ ಅಬ್ಬರ. ಇದರ ಜೊತೆಗೆ ಟಿಕ್ಟಾಕ್ ಅದೆಷ್ಟೋ ತೆರೆಮರೆಯಲ್ಲಿದ್ದ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಹೊರತರುವ ವೇದಿಕೆಯಾಗಿದೆ. ಇತ್ತೀಚೆಗೆ ಸ್ಟಾರ್ ನಟರ ತದ್ರೂಪಿಗಳ ಟಿಕ್ಟಾಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನು ನೋಡಿದವರು ನಿಜಕ್ಕೂ ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರಂಟಿ.
ಸಾಹಸಸಿಂಹ ಡಾ. ವಿಷ್ಣುವರ್ಧನ್, ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಕಿಚ್ಚ ಸುದೀಪ್, ಟಾಲಿವುಡ್ ಸ್ಟಾರ್ಗಳಾದ ಮೆಗಾಸ್ಟಾರ್ ಚಿರಂಜೀವಿ, ರಾಮ್ಚರಣ್ ತೇಜ, ಮಹೇಶ್ ಬಾಬು, ಪ್ರಭಾಸ್, ಪವನ್ ಕಲ್ಯಾಣ್, ಜ್ಯೂನಿಯರ್ ಎನ್ಟಿಆರ್, ಸಮಂತಾ, ತಮಿಳಿನ ಧನುಷ್ ಹಾಗೂ ಇನ್ನಿತರ ಸ್ಟಾರ್ಗಳ ತದ್ರೂಪಿಗಳು ಈಗ ಟಿಕ್ಟಾಕ್ನಲ್ಲಿ ಸ್ಟಾರ್ಗಳಾಗಿದ್ದಾರೆ.