ಮುಂಬೈ : ಲವರ್ ಬಾಯ್ ಇಮೇಜ್ ಇಟ್ಟುಕೊಂಡು ಪ್ರೇಮಕತೆಗಳಿಗೆ ಹೆಸರಾದ ಅದರಿಂದಲೇ ಜಗತ್ತಿನಾದ್ಯಂತ ಅಭಿಮಾನಿಗಳನ್ನ ಗಳಿಸಿರುವ ಶಾರುಖ್ ಖಾನ್ ಈ ಬಾರಿ ಬೇತಾಳದ ಹಿಂದೆ ಬಿದ್ದಿದ್ದಾರೆ.
ಕಿಂಗ್ ಖಾನ್ ಯಾವಾಗಲೂ ಪ್ರೇಮಕತೆ ಹಾಗೂ ಮಾಸ್ ಸಿನಿಮಾಗಳಲ್ಲಿಯೇ ಗುರುತಿಸಿಕೊಂಡವರು. ಹಾರರ್ ಸಿನಿಮಾ ತಂಟೆಗೆ ಹೊದವರೇ ಅಲ್ಲ. ಆದರೆ, ಈ ಬಾರಿ ಶಾರುಖ್ ಬೇತಾಳದಂತಹ ಕತೆಗಳ ಹಿಂದೆ ಬಿದ್ದಿದ್ದಾರೆ.
ಈ ಹಿಂದೆ 2019ರಲ್ಲಿ ಶಾರುಖ್ ಖಾನ್ ‘ಬಾರ್ಡ್ ಆಫ್ ಬ್ಲಡ್’ ಎಂಬ ವೆಬ್ ಸಿರೀಸ್‌ನ ನಿರ್ಮಿಸಿದ್ದರು. ಈ ಸಿರೀಸ್ ಉತ್ತಮವಾಗಿಯೇ ಪ್ರದರ್ಶನ ಕಾಣುತ್ತಿದೆ. ಈ ಸಿರೀಸ್ನಲ್ಲಿ ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಶಾರುಖ್ ಖಾನ್ ‘ಬೇತಾಲ್’ ಎಂಬ ಹೊಸ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ.ಈ ಸಿರೀಸ್ ಇದೇ ತಿಂಗಳು 24ರಿಂದ ನೆಟ್ಫ್ಲಿಕ್ಸ್ನಲ್ಲಿ
ಪ್ರಸಾರವಾಗಲಿದೆ. ತನ್ನದೆ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೈನ್‌ಮೆಂಟ್‌ನಿಂದ ನಿರ್ಮಾಣ ಮಾಡಿದ್ದಾರೆ. ಇಂದು ‘ಬೇತಾಲ್’ ವೆಬ್ ಸಿರೀಸ್‌ನ ಮೊದಲ ಲುಕ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಹತ್ತಿರವಾಗಿದೆ.
ಈ ವೆಬ್ ಸಿರೀಸ್ನಲ್ಲಿ ವಿನೀತ್‌ಕುಮಾರ್, ಅಹಾನಾ ಕುಮ್ರಾ ಮತ್ತು ಸುಚಿತ್ರಾ ಪಿಳ್ಳೈ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.